ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಮೂರನೇ ಸುತ್ತಿಗೆ ಎಚ್‌ಎಎಲ್

Last Updated 3 ಫೆಬ್ರುವರಿ 2011, 16:50 IST
ಅಕ್ಷರ ಗಾತ್ರ


ಬೆಂಗಳೂರು: ರಾಜ್ಯದ ಅನುಭವಿ ತಂಡಗಳಲ್ಲಿ ಒಂದಾದ ಬೆಂಗಳೂರಿನ ಎಚ್.ಎ.ಎಲ್. ತಂಡದವರು ಇಲ್ಲಿ ನಡೆಯುತ್ತಿರುವ ಬೆಂಗಳೂರು ಕೊಡವ ಸಮಾಜ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿ ಮೂರನೇ ಸುತ್ತು ತಲುಪಿದ್ದಾರೆ.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಚ್.ಎ.ಎಲ್. ತಂಡ 8-1 ಗೋಲುಗಳಿಂದ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ಮೇಲೆ ಸುಲಭ ವಿಜಯ ಸಾಧಿಸಿತು. ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಹುಬ್ಬಳ್ಳಿ ತಂಡದವರು ಟೂರ್ನಿಯಿಂದ ಹೊರಬಿದ್ದರು.

ಪೂರ್ಣ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಎಚ್.ಎ.ಎಲ್. ತಂಡದವರು ತಮ್ಮ ಖ್ಯಾತಿಗೆ ತಕ್ಕಂತೆ ಆಟವಾಡಿ ಪ್ರೇಕ್ಷಕರ ಮನಗೆದ್ದರು. ವಿರಾ ಮದ ವೇಳೆಗೆ 6-1 ಗೋಲುಗಳಿಂದ ಮುಂದಿದ್ದ ವಿಜಯಿ ತಂಡದ ನಾಗಸೇನಿ, ಲೋಕರಾಜ್, ಅಭಿನವ್ ಗಣಪತಿ, ನಾಣಯ್ಯ, ರಮೇಶ್, ಮಹಮದ್ ನಯೀಮ್, ವಿನೀತ್ ಮೈಕೆಲ್ (2) ಹಾಗೂ ಎದುರಾಳಿ ತಂಡದ ಮಂಜುನಾಥ್ ಚೆಂಡನ್ನು ಗುರಿಮುಟ್ಟಿಸಿದರು.

ನಾಳೆ (ಶುಕ್ರವಾರ) ಮಧ್ಯಾಹ್ನ 2-45ಕ್ಕೆ ಪೋಸ್ಟಲ್-ಆರ್.ಡಬ್ಲ್ಯು.ಎಫ್. ಆನಂತರ ಮಧ್ಯಾಹ್ನ 4-00ಕ್ಕೆ ಪಿ.ಸಿ.ಟಿ.ಸಿ-ಆತಿಥೇಯ ಬೆಂಗಳೂರು ಕೊಡವ ಸಮಾಜ ನಡುವೆ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT