ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಶಿಸ್ತಿನ ಆಟಕ್ಕೆ ಒಲಿದ ಜಯ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಶಿಸ್ತು ಮತ್ತು ವೇಗದ ಪರಿಣಾಮಕಾರಿ ಆಟ ಪ್ರದರ್ಶಿಸಿದ ಭಾರತದ ವನಿತೆಯರು ಭಾನುವಾರ ಸಂಜೆ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಎರಡನೇ ಪಂದ್ಯದಲ್ಲಿ ಜಯಭೇರಿ ಬಾರಿಸಿದರು.

ಮಾರ್ಕಿಂಗ್‌ನಲ್ಲಿ ಶಿಸ್ತಿನ ಆಟ ಮತ್ತು ಅಕ್ರಮಣದಲ್ಲಿ ಚುರುಕುತನ ಪ್ರದರ್ಶಿಸಿದ ಅಸುಂತಾ ಲಕ್ರಾ ಬಳಗ 4-1ರಿಂದ ಕೆನಡಾ ತಂಡದ ಸವಾಲನ್ನು ಮೆಟ್ಟಿ ನಿಂತಿತು. 

ಶನಿವಾರ ಉಕ್ರೇನ್ ಎದುರಿನ  ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಆತಿಥೇಯ ತಂಡ ಎರಡನೇ ಪಂದ್ಯದಲ್ಲಿ ಎದುರಾಳಿಗಳಿಗೆ ಒಂದೇ ಒಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ನೀಡದೇ, ಛಲದ ಆಟವಾಡಿತು. ಎರಡು ಪಂದ್ಯಗಳಿಂದ ನಾಲ್ಕು  ಪಾಯಿಂಟ್ ಗಳಿಸಿರುವ ಭಾರತ ಮೂರನೇ ಸ್ಥಾನದಲ್ಲಿದೆ. 

ಪ್ರಥಮಾರ್ಧದಲ್ಲಿಯೇ 3-0 ಗೋಲುಗಳ ಮುನ್ನಡೆ ಸಾಧಿಸಿತ್ತು. ಆರಂಭದ ಕ್ಷಣದಿಂದಲೂ ವೇಗದ ಆಟಕ್ಕಿಳಿದ ಆತಿಥೇಯ ವನಿತೆಯರಿಗೆ ಕೆನಡಾ ತೀವ್ರ ಪ್ರತಿರೋಧ ಒಡ್ಡಿತು.

16ನೇ ನಿಮಿಷದಲ್ಲಿ ಸಿಕ್ಕ ಎರಡನೇ ಪೆನಾಲ್ಟಿ ಕಾರ್ನರ್ ಅನ್ನು ಗೋಲಿನಲ್ಲಿ ಪರಿವರ್ತಿಸುವಲ್ಲಿ ಸೌಂದರ್ಯ ಯಂಡ್ರೆಲಾ ಸಫಲರಾದರು. ಮೊದಲ 15 ನಿಮಿಷದಲ್ಲಿ ಭಾರತ ಗೋಲು ಹೊಡೆಯುವ 3 ಯತ್ನಗಳೂ ತಪ್ಪಿದ್ದವು. 
19ನೇ ನಿಮಿಷದಲ್ಲಿ ಗೋಲು ಪೆಟ್ಟಿಗೆಯ ಬಲಬದಿಯಲ್ಲಿದ್ದ ರಾಣಿ ರಾಮಪಾಲ್ ಸ್ಟಿಕ್‌ನಿಂದ ಬಿರುಸಿನ ಹೊಡೆತ ತಿಂದ ಚೆಂಡು ಎದುರಾಳಿ ತಂಡದ ಮೂವರು ರಕ್ಷಣಾ ಆಟಗಾರ್ತಿ ಯರು ಮತ್ತು ಗೋಲ್ ಕೀಪರ್ ಅನ್ನು ದಾಟಿ ಪೆಟ್ಟಿಗೆಯೊಳಗೆ ಸೇರಿತು. 21ನೇ ನಿಮಿಷದಲ್ಲಿ ಸೆಂಟರ್ ಫಾರ್ವಡ್ ಲೈನ್‌ನಿಂದ ದೀಪಿಕಾ ಠಾಕೂರ್ ಮಾಡಿದ ಹಿಟ್ ಅನ್ನು ಗೋಲ್ ಕೀಪರ್ ಲಿಯು ಅಜೇಲಾ ತಡೆದರು.

ಆದರೆ 29ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಸುಶೀಲಾ ಚಾನು ಪುಕರಂಬಮ್ ಚೆಂಡನ್ನು ಗೋಲು ಪಟ್ಟಿಗೆಗೆ ಸೇರಿಸುವಲ್ಲಿ ಸಫಲರಾದರು.

ದ್ವಿತೀಯಾರ್ಧದಲ್ಲಿ ಲಕ್ರಾ ಬಳಗ ಸಮರ್ಥವಾಗಿ ತಡೆಯಿತು. ಅವಕಾಶ ಸಿಕ್ಕಾಗ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿದ್ದ ಆಟಗಾರ್ತಿಯರು ತಮ್ಮ ಗೋಲುಪೆಟ್ಟಿಗೆಗೆ ರಕ್ಷಣೆ ಕೊಡುವತ್ತ ಗಮನ ಹರಿಸಿದರು. 48ನೇ ನಿಮಿಷದಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಜಸ್‌ಪ್ರೀತ್‌ರಿಂದ ಪಡೆದ ಪಾಸ್ ಅನ್ನು ಅನುರಾಧಾ ದೇವಿ ತಕೋಮಾ ಗೋಲಾಗಿ ಪರಿ ವರ್ತಿಸುವಲ್ಲಿ ತಡ ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT