ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್: ಮಾದರಿ ತಾಲ್ಲೂಕಿಗೆ ಯತ್ನ

Last Updated 23 ಏಪ್ರಿಲ್ 2013, 9:31 IST
ಅಕ್ಷರ ಗಾತ್ರ

ಹಾನಗಲ್: ರಾಜ್ಯದಲ್ಲಿಯೇ ಹಾನಗಲ್ ಮಾದರಿ ತಾಲ್ಲೂಕನ್ನಾಗಿ ನಿರ್ಮಾಣ ಮಾಡುವ ಕನಸು ಸಾಕಾರಗೊಳ್ಳಲು ಕರ್ನಾಟಕ ಜನತಾ ಪಕ್ಷಕ್ಕೆ ಮತ ನೀಡುವಂತೆ ಮಾಜಿ ಸಚಿವ, ಕೆಜೆಪಿ  ಅಭ್ಯರ್ಥಿ ಸಿ.ಎಂ.ಉದಾಸಿ ಮತದಾರರಲ್ಲಿ ಮನವಿ ಮಾಡಿದರು.

ತಾಲ್ಲೂಕಿನ ಸಮ್ಮಸಗಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಕೈಗೊಂಡು ಪಾದಯಾತ್ರೆಯ ಮೂಲಕ ಮತದಾರರ ಬಳಿಗೆ ತೆರಳಿ ಮತಯಾಚಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಕ್ಷ ಉದಯಿಸಿದ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕೆಜೆಪಿ ಜಯಭೇರಿ ಬಾರಿಸಲಿದೆ. ಬಿಎಸ್‌ವೈ ಅವಧಿಯಲ್ಲಿನ ಜನೋಪಯೋಗಿ ಕಾರ್ಯಕ್ರಮ ಮತದಾರರ ಮನದಲ್ಲಿದ್ದು, ಈ ಬಾರಿ ಕೆ.ಜೆ.ಪಿ ಬೆಂಬಲಕ್ಕೆ ಮತದಾರರು ಆಸಕ್ತರಾಗಿದ್ದಾರೆ ಎಂದ ಉದಾಸಿ, ರೈತರಲ್ಲಿ ಜಾಗೃತಿ ಮೂಡಿಸಿದ್ದರ ಫಲವಾಗಿ ರಾಜ್ಯದಲ್ಲಿಯೇ ಹೆಚ್ಚಿನ ಬೆಳೆವಿಮೆ ಲಾಭ ತಾಲ್ಲೂಕಿನ ರೈತರಿಗೆ ಮುಟ್ಟಿದೆ ಎಂದರು.

ಇದೇ ಸಂದರ್ಭದಲ್ಲಿ ಸಮ್ಮಸಗಿ ಗ್ರಾಮದ ಈಶ್ವರ ದಾಳೇರ, ನನ್ನೆಸಾಬ ಮುಲ್ಲಾ, ಪರಶುರಾಮ.ಎಸ್.ಜಾಡರ, ಚಂದ್ರಶೇಖರ ಸಣ್ಣಮನಿ, ನಾಗಪ್ಪ ಪೂಜಾರ, ನೀಲಪ್ಪ ಪೂಜಾರ, ಅಜೀಜ ಮುಲ್ಲಾ, ಮಲೀಕ್ ಮಾರನಬೀಡ, ಬಸಪ್ಪ ಸಣ್ಣಮನಿ, ಗುತ್ತೆಪ್ಪ.ಇ.ಪೂಜಾರ, ಮೈಲಾರಪ್ಪ ಚವಟಿ, ರಾಮಣ್ಣ.ಇ.ಪೂಜಾರ, ಸುಭಾಸ ಬಿದರಕೊಪ್ಪ, ಚಂದ್ರಪ್ಪ ಅರಳೇಶ್ವರ, ಕಾಳಪ್ಪ ಗೊಲ್ಲರ ಕಾಂಗ್ರೆಸ್ ತೊರೆದು  ಕೆಜೆಪಿ ಸೇರ್ಪಡೆಗೊಂಡರು.

ಮುಖಂಡರಾದ ಎ.ಎಸ್.ಬಳ್ಳಾರಿ, ಬಿ.ಎಸ್.ಅಕ್ಕಿವಳ್ಳಿ, ರಾಜಣ್ಣ ಪಟ್ಟಣದ, ಡಿ.ಸಿ.ಪಾಟೀಲ, ಶಂಭಣ್ಣ ವಡ್ಡರ, ಪಿ.ಪಿ.ಪಾಟೀಲ, ರತ್ನವ್ವ ಗುಡ್ಡದಮತ್ತಿಹಳ್ಳಿ, ಶೇಖಪ್ಪ ಈಳಿಗೇರ, ವೀರಭದ್ರಗೌಡ, ನೀಲಪ್ಪ ಪೂಜಾರ, ಚಂದ್ರಶೇಖರ ಸಣ್ಣಮನಿ, ಸಿದ್ಧು ಪಾಟೀಲ, ಭರಮಣ್ಣ ಜಾಡರ, ಪರಮೇಶ ದೊಡ್ಡಮನಿ, ಶಾಂತಣ್ಣ ಕಲ್ಮಠ್ಲ, ನಾಗರಾಜಗೌಡ ಪಾಟೀಲ, ಶಿವಣ್ಣ ಮಡಿವಾಳರ, ರುದ್ರೇಶ ಸಾವಿಕೇರಿ, ಶಿವಾನಂದ ವಡ್ಡರ ಮತ್ತಿತರರು ಉಪಸ್ಥಿತರಿದ್ದರು.

`ಬ್ಯಾಡಗಿ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ'

ಬ್ಯಾಡಗಿ:ಬ್ಯಾಡಗಿ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಒಂದು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ಮೂಲ ಸೌಲಭ್ಯಗಳನ್ನು ಕಲ್ಪಿಸುವುದೇ ನನ್ನ ಗುರಿಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಸೋಮವಾರ ಬ್ಯಾಡಗಿ ವಿಧಾಸಭಾ ಕ್ಷೇತ್ರದ ರಾಣೆಬೆನ್ನೂರ ತಾಲ್ಲೂಕು ದೇವರಗುಡ್ಡ, ಗುಡಿಹೊನ್ನತ್ತಿ, ಹಳೆಹೊನ್ನತ್ತಿ, ಹನುಮಾಪುರ ಗ್ರಾಮಗಳಲ್ಲಿ ಪಾದಯಾತ್ರೆಯ ಮೂಲಕ ಮತಯಾಚಿಸಿದ ಬಳಿಕ ಮಾತನಾಡಿದರು. ಸಾಮಾನ್ಯ ಕ್ಷೇತ್ರವಾದ ಬಳಿಕ ಬ್ಯಾಡಗಿ ವಿಧಾನಸಭಾ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಾಣದಿರುವುದು ವಿಪರ್ಯಾಸದ ಸಂಗತಿಯಾಗಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ  ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಜಯಮ್ಮ ಬ್ಯಾಡಗಿ, ಕೋಟೆಪ್ಪ ಏಳುಕೋಟಿ. ಬಿಜೆಪಿ ಮುಖಂಡರಾದ ಜಯಣ್ಣ ಮಲ್ಲಿಗಾರ, ರಾಮಣ್ಣ ಉಕ್ಕುಂದ ಶಂಕರಗೌಡ್ರ ಪಾಟೀಲ, ವೀರೇಂದ್ರ ಶೆಟ್ಟರ, ಮೌಲಾಸಾಬ ಶಿಡೇನೂರ, ಶೇಖರಗೌಡ್ರ ಪಾಟೀಲ, ವೀರಭದ್ರಗೌಡ ಹೊಮ್ಮರಡಿ, ತಾಲ್ಲೂಕು ಅಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ದ್ಯಾಮವ್ವ ಗುಬ್ಬಿ, ಕರಿಯಪ್ಪ ಗುಬ್ಬಿ, ಫಕ್ಕೀರವ್ವ ಗವಿಯವರ, ಮೈಲಾರಪ್ಪ ಮುದ್ದಿ, ಮಾಲತೇಶ ಆಡೂರ, ಶಿವಾಜಿ ನಾಯಕ, ರಮೇಶ ಕರೆಆಕಳದವರ, ಶಂಭಣ್ಣ ಮಾಲದಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

`ಮತ ಅಮೂಲ್ಯ; ಮಾರಿಕೊಳ್ಳದಿರಿ'
ಅಕ್ಕಿಆಲೂರ: ಹಣ ಮತ್ತು ಹೆಂಡಕ್ಕೆ ಅಮೂಲ್ಯವೆನಿಸಿರುವ ಮತವನ್ನು ಮಾರಿಕೊಳ್ಳದೇ ಯೋಗ್ಯ ಅಭ್ಯರ್ಥಿಯ ಆಯ್ಕೆಗೆ ಚಲಾಯಿಸುವಂತೆ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಕೆ.ಮೋಹನಕುಮಾರ ಕರೆ ನೀಡಿದರು.
ಇಲ್ಲಿಯ ಇಂದಿರಾ ನಗರದಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ಪ್ರಚಾರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇನ್ನಿತರ ಪಕ್ಷಗಳನ್ನು ತೊರೆದು ಜೆಡಿಎಸ್‌ಗೆ ಹಲವು ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಂಡು ಬಳಿಕ ಅವರು ಮಾತನಾಡಿದರು.

ಚುನಾವಣೆಯಲ್ಲಿ ತಾವು ಹಣ ಮತ್ತು ಹೆಂಡವನ್ನು ಹಂಚದೇ ತಾಲ್ಲೂಕಿನ ಜನತೆಯ ನೆಮ್ಮದಿಯ ಬದುಕಿಗಾಗಿ ಮತಯಾಚಿಸುತ್ತಿರುವುದಾಗಿ ತಿಳಿಸಿದ ಅವರು ಮೂರು ದಶಕಗಳ ಬಳಿಕ ಹಾನಗಲ್ಲಿನಲ್ಲಿ ಬದಲಾವಣೆಯ ಗಾಳಿ ಬೀಸಿದೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್. ಡಿ. ಕುಮಾರಸ್ವಾಮಿ ಜಾರಿಗೆ ತಂದಿರುವ ಯೋಜನೆಗಳನ್ನು ಜನತೆಯ ಮುಂದಿಟ್ಟು ಮತಯಾಚಿಸುತ್ತಿರುವುದಾಗಿ ತಿಳಿಸಿದ ಅವರು ಈ ಬಾರಿ ಕ್ಷೇತ್ರದಲ್ಲಿ ತಮ್ಮ ಜಯ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಐ.ಅಣ್ಣಿಗೇರಿ ಮಾತನಾಡಿ, ಕೇಂದ್ರದಲ್ಲಿನ ಯುಪಿಎ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರವನ್ನು ಮನೆ ಮನೆಗೆ ತಲುಪಿಸುವ ಮೂಲಕ ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ನಡೆಸುವಂತೆ ಕಿವಿಮಾತು ಹೇಳಿದರು.

ಧುರೀಣರಾದ ಎಸ್.ಎಲ್.ಬಣಕಾರ, ರಾಮಚಂದ್ರ ಚಿಕ್ಕಣ್ಣನವರ, ವಿಷ್ಣು ಕಮ್ಮಾರ, ಷಣ್ಮುಖಪ್ಪ ಗಾಳಿ, ಬಿ.ಎಸ್.ಪಾಟೀಲ, ಮೂಕಪ್ಪ ಸುಣಗಾರ, ಮಾಲತೇಶ ಪೂಜಾರ, ಹನೀಪ್‌ಸಾಬ ಹಾವೇರಿ, ಸುಭಾಷ್ ಗಡ್ಡದವರ ಹಾಜರಿದ್ದರು. ಇದೇ ವೇಳೆ ಅನೇಕ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT