ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ಡ್‌ವೇರ್, ನೆಟ್‌ವರ್ಕಿಂಗ್ ಕೆರಿಯರ್ ಅವಕಾಶ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಸಾವಿರಾರು ಭಾರತೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ವೃತ್ತಿಪರರನ್ನು ಎದುರು ನೋಡುತ್ತಿವೆ. ಹಾರ್ಡ್‌ವೇರ್ ಎಂಜಿನಿಯರ್, ನೆಟ್‌ವರ್ಕ್ ಬಿಸಿನೆಸ್ ಮುಖ್ಯಸ್ಥರು, ನೆಟ್‌ವರ್ಕ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ಸ್‌, ಸಿಸ್ಟಮ್ ಅನಾಲಿಸ್ಟ್, ನೆಟ್‌ವರ್ಕಿಂಗ್ ಟೆಕ್ನೀಶಿಯನ್ಸ್ ಮತ್ತು ಸೂಪರ್‌ವೈಸರ್ಸ್‌, ಲಿನುಕ್ಸ್ ಮತ್ತು ಯುನಿಕ್ಸ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ಸ್, ನೆಟ್‌ವರ್ಕ್ ಸೆಕ್ಯುರಿಟಿ ವೃತ್ತಿಪರರು ಮತ್ತು ಹಾರ್ಡ್‌ವೇರ್ ಪಿಸಿ ಟೆಕ್ನೀಶಿಯನ್ಸ್‌ಗಳ ಅಗತ್ಯ ಇದೆ.

ಹಾರ್ಡ್‌ವೇರ್ ಆ್ಯಂಡ್ ನೆಟ್‌ವರ್ಕಿಂಗ್ ವಲಯದಲ್ಲಿ ವಿಪುಲವಾದ ಉದ್ಯೋಗಾವಕಾಶಗಳು ಲಭ್ಯವಿವೆ. ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಅಥವಾ ಹಾರ್ಡ್‌ವೇರ್ ಎಂಜಿನಿಯರ್ ಆಗಿ ನೀವು ವೃತ್ತಿಯನ್ನು ಆರಂಭಿಸಬಹುದು.
 
ನಂತರ ಗ್ಲೋಬಲ್ ಸರ್ಟಿಫಿಕೇಟ್‌ಗಳನ್ನು ಹೊಂದಿದಲ್ಲಿ ಈ ವಲಯದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬಹುದು. ಹಾರ್ಡ್‌ವೇರ್ ಆ್ಯಂಡ್ ನೆಟ್‌ವರ್ಕಿಂಗ್ ವಲಯದಲ್ಲಿ ಮೂಲ ಕೋರ್ಸ್‌ಗಳೆಂದರೆ ಎ + ಮತ್ತು ಎನ್ + ಆಗಿದೆ.

ಗ್ಲೋಬಲ್ ಸರ್ಟಿಫಿಕೇಟ್‌ಗಳಲ್ಲಿ ರೆಡ್ ಹ್ಯಾಟ್ ವರ್ಶನ್ 6, ಮೈಕ್ರೊಸಾಫ್ಟ್‌ನ ಎಂಸಿಐಟಿಪಿ, ಸಿಸಿಎನ್‌ಎ, ಸಿಸಿಎನ್‌ಪಿ, ಸಿಸ್ಕೋದ ಸಿಡಬ್ಲ್ಯುಎನ್‌ಎ ಕೆರಿಯರ್‌ನಲ್ಲಿ ಮುಂದುವರಿಯಲು ಸಹಕರಿಸುತ್ತದೆ. ಸಿಒಎಂಪಿಟಿಐಎ  ಎ + ಮತ್ತು ಎನ್ + ಕೋರ್ಸ್‌ಗಳಿಗೆ ಸರ್ಟಿಫಿಕೇಟ್ ಒದಗಿಸುವ ಮಂಡಳಿಯಾಗಿದೆ.
ಈಗ ಈ ಪ್ರತಿಯೊಂದು ಸರ್ಟಿಫಿಕೇಶನ್ಸ್‌ಗಳ ಬಗ್ಗೆ ನೋಡೋಣ.

ರೆಡ್ ಹ್ಯಾಟ್ ಎಂಟರ್‌ಪ್ರೈಸ್ ಲಿನುಕ್ಸ್ 6 ಪ್ರಮಾಣಪತ್ರವು ಐಟಿ ಉದ್ಯೋಗಿಗಳಿಗೆ ಸಿಗುತ್ತದೆ. ಐಟಿ ಮೂಲಸೌಕರ್ಯ ವಲಯದಲ್ಲಿ ಸೇವೆ ಸಲ್ಲಿಸುವವರಿಗೂ ಲಭ್ಯ.

ಮೈಕ್ರೊಸಾಫ್ಟ್ ಮೌಲ್ಯಯುತವಾದ ಸರ್ಟಿಫಿಕೇಟ್ ಕಾರ್ಯಕ್ರಮವನ್ನು ನೀಡುತ್ತಿದೆ. ಇದನ್ನು ಮೈಕ್ರೊಸಾಫ್ಟ್ ಸರ್ಟಿಫೈಡ್ ಐಟಿ ಪ್ರೊಫೆಶನಲ್ ಅಥವಾ ಎಂಸಿಐಟಿಪಿ ಎನ್ನುತ್ತಾರೆ. ಅನುಭವ, ಲಾಜಿಕಲ್ ಸ್ಕಿಲ್ಸ್, ನಾನಾ ಮೈಕ್ರೊಸಾಫ್ಟ್ ಅಪ್ಲಿಕೇಶನ್ಸ್‌ಗಳಿಗೆ ಇದು ಸಂಬಂಧಿಸಿದೆ.

ಎಂಸಿಐಟಿಪಿ ಸರ್ಟಿಫಿಕೇಶನ್ ಇರುವವರಿಗೆ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ಸ್‌, ನೆಟ್‌ವರ್ಕ್ ಎಂಜಿನಿಯರ್ಸ್‌, ಎಂಟರ್‌ಪ್ರೈಸ್ ಮೆಸೇಜಿಂಗ್ ಅಡ್ಮಿನಿಸ್ಟ್ರೇಟರ್ಸ್‌ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಟರ್ಸ್‌ ಉದ್ಯೋಗ ಸಿಗುತ್ತದೆ.

ಮಾನಿಟರಿಂಗ್ ಆಪರೇಟರ್, ವಿಂಡೋಸ್ ಸರ್ವರ್ ಅಡ್ಮಿನಿಸ್ಟ್ರೇಟರ್, ಸರ್ವರ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಹೆಲ್ಪ್ ಡೆಸ್ಕ್ ಟೆಕ್ನೀಶಿಯನ್, ಕಸ್ಟಮರ್ ಸಪೋರ್ಟ್ ಟೆಕ್ನೀಶಿಯನ್, ಪಿಸಿ ಸಪೋರ್ಟ್ ಸ್ಪೆಶಲಿಸ್ಟ್, ಟೆಕ್ನಿಕಲ್ ಸಪೋರ್ಟ್ ಸ್ಪೆಶಲಿಸ್ಟ್ ವಲಯದಲ್ಲಿ ಕೆರಿಯರ್ ಅವಕಾಶಗಳು ಲಭ್ಯ.
ಸೆಕ್ಯುರಿಟಿ +, ಸರ್ವರ್ + ಮತ್ತು ಎತಿಕಲ್ ಹ್ಯಾಕಿಂಗ್‌ನಲ್ಲಿ  ಕೂಡ ಕೋರ್ಸ್‌ಗಳು ಲಭ್ಯವಿವೆ.

ಸಿಸ್ಕೊ ಸರ್ಟಿಫೈಡ್ ನೆಟ್‌ವರ್ಕ್ ಅಸೋಸಿಯೇಟ್ ರೂಟಿಂಗ್ ಆ್ಯಂಡ್ ಸ್ವಿಚ್ಚಿಂಗ್ (ಸಿಸಿಎನ್‌ಎ)ಯು ಇನ್‌ಸ್ಟಾಲ್, ಕಾನ್‌ಫಿಗರ್, ಆಪರೇಟ್, ಟ್ರಬಲ್‌ಶೂಟ್ ಮೀಡಿಯಂ ಸೈಜ್ ರೂಟೆಡ್ ಮತ್ತು ಸ್ವಿಚ್‌ಡ್ ನೆಟ್‌ವರ್ಕ್‌ಗಳಿಗೆ ಅನ್ವಯ. ಈ ವಲಯದಲ್ಲಿ ಆರಂಭಿಕ ಹಂತದಲ್ಲಿ  ರೂ10,000-15,000  ವೇತನ ಇರುತ್ತದೆ.

ಅಭ್ಯರ್ಥಿ ಸಿಸಿಎನ್‌ಎ ಕೋರ್ಸ್ ಪೂರ್ಣಗೊಳಿಸಿದ ನಂತರ ಉನ್ನತ ಮಟ್ಟದ ಕೋರ್ಸ್ ಆಗಿರುವ ಸಿಸಿಎನ್‌ಪಿ  ( ಸಿಸ್ಕೊ ಸರ್ಟಿಫೈಡ್ ನೆಟ್‌ವರ್ಕ್ ಪ್ರೊಫೆಶನಲ್) ಕೋರ್ಸ್ ಅನ್ನು ಮಾಡಬಹುದು. ಸರ್ಟಿಫೈಡ್ ನೆಟ್‌ವರ್ಕ್ ಪ್ರೊಫೆಶನಲ್ ವಿಶಾಲ ವ್ಯಾಪ್ತಿಯ ನೆಟ್‌ವರ್ಕ್‌ಗಳನ್ನು ಯೋಜನೆ, ಅನುಷ್ಠಾನ, ನಿರ್ವಹಣೆ ಮಾಡಬಲ್ಲರು.

ಅಡ್ವಾನ್ಸ್‌ಡ್ ಸೆಕ್ಯುರಿಟಿ, ವಾಯ್ಸ, ವೈರ್‌ಲೆಸ್ ಮತ್ತು ವೀಡಿಯೊ ಸಲ್ಯೂಶನ್ಸ್‌ನಲ್ಲಿ  ಅವರಿಗೆ ಪ್ರಬುದ್ಧತೆ ಇರುತ್ತದೆ. ಸಿಸಿಎನ್‌ಪಿ ಸರ್ಟಿಫಿಕೇಶನ್ಸ್ ಕನಿಷ್ಠ 1 ವರ್ಷ ನೆಟ್‌ವರ್ಕಿಂಗ್ ಅನುಭವ ಇರುವವರಿಗೆ ಸೂಕ್ತ.

ಸಿಸಿಎನ್‌ಪಿ ಕೋರ್ಸ್ ಪೂರ್ಣಗೊಳಿಸಿದವರು ಉದ್ದಿಮೆಗಳಿಗೆ ಬೇಕಾದ ಕೌಶಲಗಳನ್ನು ಹೊಂದಿರುತ್ತಾರೆ. ನೆಟ್‌ವರ್ಕ್ ಟೆಕ್ನೀಶಿಯನ್, ಸಪೋರ್ಟ್ ಎಂಜಿನಿಯರ್ ಅಥವಾ ನೆಟ್‌ವರ್ಕ್ ಎಂಜಿನಿಯರ್‌ಗೆ ಬೇಕಾದ ಕೌಶಲ ಅವರಲ್ಲಿರುತ್ತದೆ.

ಹಾರ್ಡ್‌ವೇರ್ ನೆಟ್‌ವರ್ಕಿಂಗ್‌ನಲ್ಲಿ ವ್ಯಕ್ತಿಯೊಬ್ಬರು ಪಿಯುಸಿಯ ನಂತರ ಐಟಿ ಇನ್‌ಫ್ರಾಸ್ಟ್ರಕ್ಚರ್ ಮ್ಯೋನೇಜ್‌ಮೆಂಟ್ ಸ್ಪೆಶಲಿಸ್ಟ್ (ಐಎಂಎಸ್) ಆಗಿ ಕಾರ್ಯನಿರ್ವಹಿಸಬಹುದು. ಇದು ಎರಡು ವರ್ಷಗಳ ಕೋರ್ಸ್ ಆಗಿದ್ದು, ವಾರದ 5 ದಿನಗಳಲ್ಲಿ ದಿನಕ್ಕೆ 2 ಗಂಟೆಗಳ ಕಾಲ ಬೋಧನೆ ತೆಗೆದುಕೊಳ್ಳಬಹುದು.
 
ಐಟಿ ಐಎಂಎಸ್ ಸೇವೆಯಿಂದ ಐಟಿ ಉದ್ದಿಮೆಯಲ್ಲಿ ಒಟ್ಟು ಮಾಲೀಕತ್ವದ ವೆಚ್ಚ ನಿಯಂತ್ರಣ, ಅಪಾಯದ ನಿಯಂತ್ರಣ, ವೇಗ ಹೆಚ್ಚಳ, ಸಪೋರ್ಟ್ ಪ್ರೊಸೆಸ್ ಅಭಿವೃದ್ಧಿ ಸಾಧ್ಯ. ಇದರಿಂದ ಸಂಸ್ಥೆಯ ಪರಿಶೀಲನೆ, ನಿರ್ವಹಣೆ, ಸೇವೆ, ಆಪರೇಟಿಂಗ್ ಸಿಸ್ಟಮ್ಸ, ನೆಟ್‌ವರ್ಕ್, ಡಾಟಾಬೇಸ್, ಅಪ್ಲಿಕೇಶನ್, ಸ್ಟೋರೇಜ್ ಸಾಮರ್ಥ್ಯದಲ್ಲಿ ಹೆಚ್ಚಳವಾಗುತ್ತದೆ.

ಹಣಕಾಸು, ಅಕೌಂಟ್ಸ್
ದೇಶದ ಬೆಳೆಯುತ್ತಿರುವ ಆರ್ಥಿಕತೆಗೆ ಹಿಂದೆಂದೂ ಕಂಡರಿಯದಷ್ಟು ಅಕೌಂಟೆನ್ಸಿ, ಫೈನಾನ್ಸ್ ವೃತ್ತಿಪರರ ಅಗತ್ಯ ಕಂಡು ಬರುತ್ತಿದೆ. ಬದಲಾಗುತ್ತಿರುವ ಆರ್ಥಿಕತೆಯಲ್ಲಿ ಹಣಕಾಸು ಮತ್ತು ಅಕೌಂಟ್ಸ್ ಉದ್ದಿಮೆ ಸಂಸ್ಥೆಗಳ ಜೀವನಾಡಿಯಾಗುತ್ತಿದೆ. ಯಾವುದೇ ಸಂಘಟನೆ ಅಥವಾ ಕಂಪೆನಿಗೆ ನುರಿತ, ಪ್ರತಿಭಾವಂತ ಅಭ್ಯರ್ಥಿಗಳ ಅಗತ್ಯ ಇರುತ್ತದೆ.

ಫೈನಾನ್ಸ್ ಅಥವಾ ಅಕೌಂಟ್ಸ್‌ನಲ್ಲಿ  ನೀವು ವಿಶೇಷ ಪರಿಣತಿ ಪಡೆದಿದ್ದಲ್ಲಿ ಹಣಕಾಸು ಸೇವೆ ವಲಯದಲ್ಲಿ ನಿಮಗೆ ಹೇರಳ ಉದ್ಯೋಗಾವಕಾಶಗಳು ಕಾದಿರುತ್ತವೆ. ಈ ವಲಯದಲ್ಲಿ ಹೊಸಬರಿಗೂ ಉದ್ಯೋಗಾವಕಾಶಗಳು ಇರುತ್ತವೆ. ಅದು ಎಂಟ್ರಿ ಹಂತದಲ್ಲಿ ಇರಬಹುದು, ಅನುಭವ ಪಡೆದ ನಂತರದ ಹಂತ ಇರಬಹುದು, ನಿಮ್ಮ ಅರ್ಹತೆಗಳಿಗೆ ಸೂಕ್ತವಾಗುವ ಹುದ್ದೆಗಳು ಹಣಕಾಸು ಸೇವೆ ವಲಯದಲ್ಲಿ  ಸಿಗುತ್ತವೆ.

ಹಣಕಾಸು ಮತ್ತು ಅಕೌಂಟ್ಸ್‌ನಲ್ಲಿ ಹಲವಾರು ಆಯ್ಕೆಗಳು ಇರುತ್ತವೆ.  ಅಭ್ಯರ್ಥಿ ಬಿಕಾಂನಲ್ಲಿ ಪದವಿ ಪಡೆದಿರಬೇಕು ಅಥವಾ ಬಿಬಿಎಂ ಪಡೆದಿರಬೇಕು. ಬಿಕಾಂ ನಂತರ ಸ್ನಾತಕೋತ್ತರ ಪದವಿ ಡಿಪ್ಲೊಮಾ ಪಡೆದಿರಬಹುದು.

ಬಿಕಾಂ ನಂತರ ಎಂಕಾಂ, ಎಂಬಿಎ ಪಡೆಯಬಹುದು. ಹಣಕಸಿನಲ್ಲಿ ಪಿಜಿಡಿಎಂ, ಬ್ಯಾಂಕಿಂಗ್ ಮತ್ತು ಹಣಕಾಸು, ಕ್ಯಾಪಿಟಲ್ ಮಾರುಕಟ್ಟೆ, ವೆಲ್ತ್ ಮ್ಯೋನೇಜ್‌ಮೆಂಟ್, ವಿಮೆ, ರಿಸ್ಕ್ ಮ್ಯೋನೇಜ್‌ಮೆಂಟ್, ಸಿಎ, ಐಸಿಡಬ್ಲ್ಯುಎ, ಸಿಎಸ್, ಸಿಎಫ್‌ಪಿ, ಸಿಎಫ್‌ಎ ಕೋರ್ಸ್‌ಗಳನ್ನು ಮಾಡಬಹುದು.

ಹಣಕಾಸು ವಿಷಯದಲ್ಲಿ ಸೀಮಿತ ಅವಧಿಯ ಕೋರ್ಸ್‌ಗಳನ್ನು ಬಯಸುವವರು, ಎನ್‌ಎಸ್‌ಇ ಸರ್ಟಿಫಿಕೇಶನ್‌ಗೆ ಯತ್ನಿಸಬಹುದು. ಈ ಕಾರ್ಯಕ್ರಮ 100 ಗಂಟೆಗಳು ಮತ್ತು 20 ಗಂಟೆಗಳ ತರಬೇತಿಯನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗೆ : www.nse-india.com

ಬ್ಯಾಂಕ್‌ಗಳಲ್ಲಿ ರಿಲೇಶನ್‌ಶಿಪ್ ಮ್ಯೋನೇಜರ್/ವೆಲ್ತ್ ಮ್ಯೋನೇಜ್‌ಮೆಂಟ್ ಕಂಪನಿಗಳು, ವಿಮೆ, ಮ್ಯೂಚುವಲ್ ಫಂಡ್ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಬಯಸುವವರು ಸರ್ಟಿಫೈಡ್ ಫೈನಾನ್ಶಿಯಲ್ ಪ್ಲಾನಿಂಗ್ ಪ್ರೋಗ್ರಾಮ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಭಾರತದಲ್ಲಿ ಕೇವಲ 1300 ಸಿಎಫ್‌ಪಿಗಳಿದ್ದಾರೆ ಆದರೆ ಅಗತ್ಯ 50,000ರಷ್ಟಿದೆ. ಸರ್ಟಿಫಿಕೇಶನ್ 23 ರಾಷ್ಟ್ರಗಳಲ್ಲಿ ಮಾನ್ಯತೆ ಪಡೆದಿದೆ. ಫೈನಾನ್ಶಿಯಲ್ ಪ್ಲಾನಿಂಗ್ ಸ್ಟಾಂಡರ್ಡ್ಸ್ ಬೋರ್ಡ್ ಇಂಡಿಯಾ ( ಎಫ್‌ಪಿಎಸ್‌ಬಿ) ಈ ಕೋರ್ಸ್‌ಗಳಿಗೆ ಭಾರತದಲ್ಲಿ ಮಾನ್ಯತೆ ನೀಡುವ ಮಂಡಳಿಯಾಗಿದೆ.

ಈ ಕೋರ್ಸ್ 165 ಗಂಟೆಗಳ ಅವಯದ್ದಾಗಿದ್ದು, ಎಫ್‌ಪಿಎಸ್‌ಬಿಯ ಮಾನ್ಯತೆ ಪಡೆದ ಶೈಕ್ಷಣಿಕ ಪಾಲುದಾರರು ನೀಡುತ್ತಾರೆ. ಸಿಎಫ್‌ಪಿ ಅಭ್ಯರ್ಥಿ ಶೇ.30ರಷ್ಟು ಹೆಚ್ಚು ಸಂಬಳ ಪಡೆಯುತ್ತಾರೆ.  ಆ ಅಭ್ಯರ್ಥಿಗೆ ಎಫ್‌ಪಿಎಸ್‌ಬಿಯ ಚಾರ್ಟರ್ ಸದಸ್ಯತ್ವ ಪಡೆದಿರುವ ಡಚ್ ಬ್ಯಾಂಕ್, ಐಸಿಐಸಿಐ ಸೆಕ್ಯುರಿಟೀಸ್, ಕೊಟಾಕ್ ಮಹೀಂದ್ರಾ ಮುಂತಾದ ಕಡೆ ಆದ್ಯತೆ ಸಿಗುತ್ತದೆ. ಹೆಚ್ಚಿನ ಮಾಹಿತಿಗೆ :  www.fpsbindia.org

ಹಣಕಾಸು ಮತ್ತು ಅಕೌಂಟ್ಸ್‌ನಲ್ಲಿ  ಕೆರಿಯರ್ ಅವಕಾಶಗಳಿರುವ ವಿಭಾಗಗಳು:
ಕಾರ್ಪೊರೇಟ್ ಫೈನಾನ್ಸ್, ಬ್ಯಾಂಕಿಂಗ್, ಮನಿ ಮ್ಯೋನೇಜ್‌ಮೆಂಟ್, ಮ್ಯೂಚುವಲ್ ಫಂಡ್, ಸ್ಟಾಕ್ ಬ್ರೋಕಿಂಗ್, ಫೈನಾನ್ಶಿಯಲ್ ಪ್ಲಾನಿಂಗ್, ವಿಮೆ, ಇನ್‌ಫಾರ್ಮೇಶನ್ ಟೆಕ್ನಾಲಜಿ, ಗ್ಲೋಬಲ್ ಶೇರ್ಡ್‌ ಸರ್ವೀಸ್/ಬಿಪಿಒ, ಬಿಸಿನೆಸ್  ಅಡ್ವೈಸರಿ ಸರ್ವೀಸ್.

ಹಣಕಾಸು ವಲಯದ ನಾನಾ ಸ್ತರಗಳಲ್ಲಿ  ವಹಿಸಬೇಕಾದ ನಾನಾ ಪಾತ್ರಗಳು ಹಾಗೂ ಬೇಕಾದ ಕೌಶಲಗಳು ಕೆಳ ಕಂಡಂತಿವೆ.
ಅಕೌಂಟೆಂಟ್ : ಅಕೌಂಟಿಂಗ್ ಕೌಶಲ್ಯ ; ಫೈನಾನ್ಸ್ ಮ್ಯೋನೇಜರ್ : ವಿಶ್ಲೇಷಣಾ ಸಾಮರ್ಥ್ಯ ; ಖಜಾಂಚಿ : ಹಣಕಾಸು ನಿರ್ವಹಣೆ ; ಕಾಸ್ಟ್ ಅಕೌಂಟೆಂಟ್ : ಲೆಕ್ಕ ಪರಿಶೋಧನೆ ; ಇಂಟರ್ನಲ್ ಆಡಿಟರ್ : ಕಂಪ್ಯೂಟರ್ ಪರಿಣತಿ ; ಇನ್ವೆಸ್ಟರ್ ರಿಲೇಶನ್ಸ್ ಮ್ಯೋನೇಜರ್ : ಕಾಸ್ಟ್ ಅಕೌಂಟಿಂಗ್ ;  ಕಂಟ್ರೋಲರ್ : ಕಾರ್ಪೊರೇಟ್ ಮತ್ತು ತೆರಿಗೆ ಕಾನೂನು; ಈಕ್ವಿಟಿ ಅನಾಲಿಸ್ಟ್/ಫೈನಾನ್ಶಿಯಲ್ ಅನಾಲಿಸ್ಟ್  : ಹಣಕಾಸಿನಲ್ಲಿ  ಎಂಬಿಎ;  ಕಂಪ್ಲಯನ್ಸ್ ಅನಾಲಿಸ್ಟ್ : ಅಕೌಂಟಿಂಗ್ ಕೌಶಲ.

 ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಉತ್ತಮ ಅಂಕ ಗಳಿಸಿದ್ದಿದ್ದಲ್ಲಿ, ಉದ್ಯೋಗ ಕೌಶಲ ಹೆಚ್ಚಿಸುವ ತರಬೇತಿ ಕೇಂದ್ರಗಳಲ್ಲಿ  ತರಬೇತಿ ಹೊಂದಬಹುದು. ವೃತ್ತಿಪರ ತರಬೇತಿ ಕೇಂದ್ರಗಳು ಒಂದು ವರ್ಷಗಳ ಅವಧಿ  ಕೋರ್ಸ್‌ಗಳನ್ನು ನೀಡುತ್ತವೆ. ಅಕೌಂಟ್ಸ್, ಫೈನಾನ್ಸ್ ವಿಷಯದಲ್ಲಿ ತರಬೇತಿ ಒದಗಿಸುತ್ತವೆ.

ಕಂಪ್ಯೂಟರ್ ಫಂಡಮೆಂಟಲ್, ಟ್ಯಾಲಿ 9.0 ಇಆರ್‌ಪಿ, ಟ್ಯಾಕ್ಸೇಶನ್, ಕೋಸ್ಟ್ ಅಕೌಂಟಿಂಗ್, ಡಿಸಿಶನ್ ಫಾರ್ ಅಕೌಂಟಿಂಗ್, ಕಾರ್ಪೊರೇಟ್ ಆ್ಯಂಡ್ ಇಂಡಸ್ಟ್ರಿಯಲ್ ಲಾ, ಬ್ಯಾಂಕಿಂಗ್ ಆ್ಯಂಡ್ ಫೈನಾನ್ಸ್, ಇನ್‌ವೆಸ್ಟ್‌ಮೆಂಟ್ ಮತ್ತು ಸ್ಟಾಕ್ ಮಾರ್ಕೆಟ್ ಮತ್ತು ಸಾಫ್ಟ್ ಸ್ಕಿಲ್ಸ್ ಕೌಶಲ್ಯವನ್ನು ಬೋಧಿಸುತ್ತವೆ.

 (ಲೇಖಕರು ವಿಭಾಗೀಯ ಮುಖ್ಯಸ್ಥರು; ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜಾಬ್ ಟ್ರೈನಿಂಗ್ )


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT