ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ವರ್ಡ್ ವಿ.ವಿಗೆ ಬಾಂಬ್‌ ಬೆದರಿಕೆ

ವಿದ್ಯಾರ್ಥಿಗಳ ತೆರವು, ಪರೀಕ್ಷೆ ರದ್ದು
Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಪ್ರತಿಷ್ಠಿತ ಹಾರ್ವರ್ಡ್‌ ವಿಶ್ವವಿದ್ಯಾಲಯಕ್ಕೆ ಬಾಂಬ್‌ ಬೆದರಿಕೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ವಿ.ವಿ ಆವರಣದಲ್ಲಿದ್ದವರನ್ನು ತುರ್ತು ಸ್ಥಳಾಂತರ ಮಾಡಿದ್ದಾರೆ.

ವಿ.ವಿಯ ನಾಲ್ಕು ಕಟ್ಟಡಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂಬ ಮಾಹಿತಿಯು ಹಾರ್ವರ್ಡ್‌ ವಿ.ವಿ ಪೊಲೀಸರಿಗೆ ದೊರಕಿತ್ತು ಎಂಬ ಸಂದೇಶ ವಿ.ವಿ ವೆಬ್‌ಸೈಟ್‌ನಲ್ಲಿತ್ತು. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅನಧಿಕೃತ ಮೂಲಗಳಿಂದ ಈ ಮಾಹಿತಿ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಾಂಬ್‌ ಬೆದರಿಕೆ ಹಿನ್ನೆಲೆಯಲ್ಲಿ ಸೋಮವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ವಿ.ವಿ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ‘ಕೆ–9’ ಭದ್ರತಾ ತಂಡ ಮತ್ತು ಬಾಂಬ್‌ ನಿಷ್ಕ್ರಿಯ ದಳದವರು ಬಂದಿದ್ದಾರೆ. ಕೇಂಬ್ರಿಜ್‌ನ 210 ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿರುವ ಈ ವಿ.ವಿ ಯಲ್ಲಿ 6,700 ಪದವಿಪೂರ್ವ ತರಗತಿ ವಿದ್ಯಾರ್ಥಿಗಳು, 14,500 ಪದವಿ ವಿದ್ಯಾರ್ಥಿ­ಗಳು, ವೃತ್ತಿ ಪರ ಶಿಕ್ಷಣಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ವರ್ಗದವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT