ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಾಡಿ: ಪ್ರಥಮ ವರ್ಷದ ಕಂಬಳ

Last Updated 21 ಫೆಬ್ರುವರಿ 2012, 9:55 IST
ಅಕ್ಷರ ಗಾತ್ರ

ಸಿದ್ದಾಪುರ: ಜಾನಪದ ಸೊಗಡಿನ ಕ್ರೀಡೆಗಳಾದ ಕಂಬಳ, ಯಕ್ಷಗಾನಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವುಗಳನ್ನು ಉಳಿಸಿ ಬೆಳೆಸಬೇಕು ಎಂದು ಸಾಲಿಗ್ರಾಮ ಯಕ್ಷಗಾನ ಮೇಳದ ಭಾಗವತ ರಾಘವೇಂದ್ರ ಮಯ್ಯ ಹೇಳಿದರು.

ಹಾಲಾಡಿಯಲ್ಲಿ ಭಾನುವಾರ ಜರುಗಿದ ಕಂಬಳೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನತೆಯ ಜಾನಪದ ಸೊಗಡಿನ ಧಾರ್ಮಿಕ ಆಚರಣೆಯ ಹಲವು ಜಾನಪದ ಕಲೆಗಳಿಗೆ ವಿಶಿಷ್ಟ ಸ್ಥಾನಮಾನವಿದೆ. ಅದರ ಇತಿಮಿತಿಯಲ್ಲಿರುವ ಗ್ರಾಮೀಣ ಮನೋರಂಜನಾ ಕ್ರೀಡೆಗಳಿಗೆ ಉತ್ತೇಜನ ನೀಡಬೇಕು ಎಂದು ಅವರು ಹೇಳಿದರು.

ಶಂಕರನಾರಾಯಣ ಗ್ರಾ.ಪಂ. ಮಾಜಿ ಅಧ್ಯಕ್ಷ ಶಾಡಿಗುಂಡಿ ರಾಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಗಣಪಯ್ಯ ಶೆಟ್ಟಿ ತಲ್ಲೂರುಮಕ್ಕಿ, ನರಸಿಂಹ ಅಡಿಗ ಕಂಬಳೋತ್ಸವಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.

ಉದ್ಯಮಿ ಭುಜಂಗ ಶೆಟ್ಟಿ, ವರಶ್ರಿ ವಾದಿರಾಜ್ ಹೆಗ್ಗೋಡ್ಲು, ಹಾಲಾಡಿ ಪ್ರ.ದರ್ಜೆ ಕಾಲೇಜು ಪ್ರೌಢ ಶಾಲೆ ವಿಭಾಗ ಮುಖ್ಯ ಶಿಕ್ಷಕಿ ರೋಶನ್ ಬೀಬಿ, ಚೋರಾಡಿ ಕಂಬಳಗದ್ದೆ ವ್ಯವಸ್ಥಾಪಕ ಶಂಕರ ಶೆಟ್ಟಿ, ಲಕ್ಷ್ಮಿ ನರಸಿಂಹ ಸ್ವಸಹಾಯ ಸಂಘ ಕಾರ್ಯದರ್ಶಿ ಅಣ್ಣಪ್ಪ ಕುಲಾಲ್, ಧರ್ಮಸ್ಥಳ ಯೋಜನೆ ಹಾಲಾಡಿ ವಲಯ ಮೇಲ್ವಿಚಾರಕ ಸತೀಶ್ ಯು., ಪ್ರಭಾಕರ ದೇವಾಡಿಗ ಗೋಪಾಲ ಹಾಲಾಡಿ, ಪ್ರಕಾಶ್ ಅಡಿಗ, ರಾಘವೇಂದ್ರ, ಅಶೋಕ, ತಿಮ್ಮ, ಸಬ್ಬಾಗಿಲು ಸೂರ್ಯಪ್ರಕಾಶ್ ದಾಮ್ಲೆ, ಅಜಿತ್ ಶೆಟ್ಟಿ ರಟ್ಟಾಡಿ, ದೇವಣ್ಣ ನಾಯ್ಕ ಬಾಗೀಮನೆ, ಸಂಜೀವ ಆರ್ಡಿ, ಮಂಜುನಾಥ ಶೆಣೈ ಜನ್ನಾಡಿ ಮತ್ತಿತರರು ಇದ್ದರು.

ಫಲಿತಾಂಶ: ಕನೆ ಹಲಗೆ ವಿಭಾಗ: ಪ್ರಥಮ- ಶೇಖರ್ ದೇವಾಡಿಗ ಕೋಟ ಹರ್ಕಟ್ಟು, ದ್ವೀತಿಯ- ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರು.

ಹಗ್ಗ ಹಿರಿಯ ವಿಭಾಗ: ಸುಬ್ರಾಯ ನಾಯ್ಕ ಅಂಕ್ರಾಲು ಮುದ್ದೂರು (ಪ್ರ.), ಪ್ರತಾಪ್ ಹಾಲಾಡಿ (ದ್ವಿ).

ಹಗ್ಗ ಕಿರಿಯ ವಿಭಾಗ:
ಬ್ರಹ್ಮಬಂಟ ಹೋಸಾಳ ಬಾರ್ಕೂರು (ಪ್ರ), ರಘುರಾಮ್ ಶೆಟ್ಟಿ ಮೊಳಹಳ್ಳಿ (ದ್ವಿ).
ಹಗ್ಗ ಸಬ್ ಜ್ಯೂನಿಯರ್ ವಿಭಾಗ- ವರಶ್ರಿ ವಾದಿರಾಜ್ ಹಾಲಾಡಿ (ಪ್ರ.), ಹರ್ಷ ಭಟ್ ಕುಚ್ಚೂರು ಹೆಬ್ರಿ (ದ್ವಿ).

ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ:
ಕಂಬಳ ಫ್ರೆಂಡ್ಸ್ ಬೈಂದೂರು (ಪ್ರ), ಯುವಶಕ್ತಿ ಸ್ಪೋರ್ಟ್ಸ್ ಕ್ಲಬ್ ಹಾಯ್ಕೊಡಿ (ದ್ವಿ).

ಕೆಸರು ಗದ್ದೆ ಓಟ ಜ್ಯೂನಿಯರ್: ಪ್ರತಾಪ್ ಹಾಲಾಡಿ (ಪ್ರ), ಚೇತನ್  ಹಾಲಾಡಿ (ದ್ವಿ).
ಸೀನಿಯರ್: ಸಂತೋಷ ಕಾವಾಡಿ (ಪ್ರ), ಆದರ್ಶ ಹಾಯ್ಕೊಡಿ (ದ್ವಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT