ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ದರ ಏರಿಕೆ ಬೇಡ

Last Updated 13 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಕರ್ನಾಟಕ ಹಾಲು ಒಕ್ಕೂಟವು ಹಾಲಿನ ದರವನ್ನು ಏರಿಸಲು ನಿರ್ಧಾರ ಮಾಡಿದೆ ಎಂಬ ಸುದ್ದಿಯಿಂದ  ಆಘಾತಕಾರಿಯಾಗಿದೆ. ದಿನ ಕಳೆದಂತೆ ಜೀವನ ನಡೆಸುವುದು ನಮ್ಮಂತಹ ಮಧ್ಯಮ ವರ್ಗದವರಿಗೆ  ಕಷ್ಟವಾಗುತ್ತಿದೆ.

ಎಲ್ಲ ದಿನ ನಿತ್ಯದ ವಸ್ತುಗಳನ್ನೇ ಗುರಿಯಾಗಿಸಿ ಜನರ ಶೋಷಣೆ ಮಾಡುವುದು ಸರ್ಕಾರದ ಉದ್ದೇಶವೇ? ನೆರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಾಗಿದೆ, ಎಂಬ ಕಾರಣವನ್ನು ನೀಡುತ್ತ, ದರ ಏರಿಕೆಯನ್ನು ಸಮರ್ಥಿಸಿ ಕೊಳ್ಳುವುದು ಉತ್ತಮ ಆಡಳಿತದ ಲಕ್ಷಣವಲ್ಲ. 

ಮಕ್ಕಳಿಗೆ ಹಾಲು ಉಣಿಸಲಾಗದ ತಾಯಂದಿರ ಬವಣೆ ನೆನೆದು  ಬೇಸರವಾಗುತ್ತದೆ. ಈ ರೀತಿಯ ಬೆಲೆ ಏರಿಕೆಯಿಂದ ಕಡಿಮೆ ಆದಾಯ ಮತ್ತು ದಿನಗೂಲಿ ಮಾಡಿಕೊಂಡು ಬದುಕುವವರಿಗೆ ಬದುಕೇ ಭಾರ ಆಗುವುದಿಲ್ಲವೇ? ಆದ್ದರಿಂದ ಬಡವರೂ ಬದುಕುವ ವಾತಾವರಣ ಸೃಷ್ಟಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT