ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಪ್ಯಾಕೆಟ್ ಮೇಲೆ ತಪ್ಪು ಮಾಹಿತಿ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಗ್ರಾಹಕರ ಸಮೀಕ್ಷೆಯಲ್ಲಿ ಗಮನಕ್ಕೆ ಬಂದ ಅಚ್ಚರಿಯ ಸಂಗತಿಗಳಿವೆ ಕೆವಿನ್ಸ್ ಹಾಲನ್ನು ಕೇರಳದ ಪಾಲಕ್ಕಾಡ್‌ನಲ್ಲಿ 450 ಮಿ.ಲೀ (ಟೋನ್ಡ್) ಮತ್ತು 900 ಮಿ.ಲೀ (ಸ್ಟಾಂಡರ್ಡೆಸ್ಡ್) ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಬೇರೆ ಕಡೆಗಳಲ್ಲಿ ಈ ರೀತಿ ಇಲ್ಲ.

ಆವಿನ್ ಹಾಲಿನ ದರ ಬೇರೆಲ್ಲವುಗಳಿಗಿಂತ ಕಡಿಮೆ ಇದೆ. ಆದರೆ ರೀಟೈಲ್ ಅಂಗಡಿಗಳಲ್ಲಿ ಗ್ರಾಹಕರಿಗೆ ಅದನ್ನು ಗರಿಷ್ಠ ಮಾರಾಟ ದರಕ್ಕಿಂತಲೂ ಅಧಿಕ ದರದಲ್ಲಿ ಮಾರಾಟ ಮಾಡುತ್ತಿರುವುದು ಪತ್ತೆಯಾಯಿತು.

ದಿಕ್ಕುತಪ್ಪಿಸುವ ಚಿತ್ರಗಳು
ಆರೋಗ್ಯ(ಟೋನ್ಡ್ ಮತ್ತು ಸ್ಟ್ಯಾಂಡರ್ಡೈಸ್), ನಂದಿನಿ (ಟೋನ್ಡ್ ಮತ್ತು ಸ್ಟ್ಯಾಂಡರ್ಡೈಸ್), ವಿಜಯಾ (ಟೋನ್ಡ್) ಪ್ಯಾಕೆಟ್‌ಗಳ ಮೇಲೆ ಹಸುವಿನ ಹಾಗೂ ಕೆವಿನ್ಸ್ (ಟೋನ್ಡ್ ಮತ್ತು ಸ್ಟ್ಯಾಂಡರ್ಡೈಸ್ಡ್) ಪ್ಯಾಕೆಟ್ ಮೇಲೆ ಕೆಚ್ಚಲಿನ ಚಿತ್ರಗಳಿವೆ.
 
ಆದರೆ ಪ್ಯಾಕೆಟ್ ಮೂಲಕ ಗ್ರಾಹಕರನ್ನು ತಲುಪುವ ಈ ಬ್ರ್ಯಾಂಡ್‌ಗಳು ಸಂಸ್ಕರಿತ ಹಾಲಾಗಿರುವುದರಿಂದ ಹಾಗೂ ಜಾನುವಾರಿನಿಂದ ಕರೆದ ತಕ್ಷಣ ಗ್ರಾಹಕರನ್ನು ತಲುಪುವುದಿಲ್ಲವಾದ್ದರಿಂದ ಇವು ತಪ್ಪು ದಾರಿಗೆಳೆಯುವ ಚಿತ್ರಗಳಾಗಿವೆ.

ಕಾಯಿಸುವುದು ಕ್ಷೇಮ
ಈ ಕೆಳಗಿನ ಹಾಲುಗಳಲ್ಲಿ ಸ್ಟ್ಯಾಂಡರ್ಡ್ ಪ್ಲೇಟ್ ಮತ್ತು ಕೋಲಿಫಾರ್ಮ್ ಕಂಡುಬಂದಿವೆ. ಜತೆಗೆ, ಕೆಲವು ಬ್ರ್ಯಾಂಡ್‌ಗಳು ಪ್ಯಾಕೆಟ್ ಮೇಲೆ 500 ಮಿ.ಲೀ. ಪ್ಯಾಕೆಟ್ ಎಂದು ನಮೂದಿಸಿದ್ದರೂ ಅಳತೆ ಮಾಡಿ ನೋಡಿದಾಗ ಹಾಲು ಅದಕ್ಕಿಂತ ಕಡಿಮೆ ಇದ್ದುದು ಪತ್ತೆಯಾಯಿತು.
 ವಾಸ್ತವವಾಗಿ ಡೇರಿಯಿಂದ ಬರುವ ಪ್ಯಾಕೆಟ್ ಹಾಲು ಕಾಯಿಸದೆ ಸೇವಿಸಲು ಯೋಗ್ಯವಾಗಿರಬೇಕು.
 
ಹಾಲಿನಲ್ಲಿ ಟೋಟಲ್ ಕೌಂಟ್ ಬ್ಯಾಕ್ಟೀರಿಯಾ ಎಫ್‌ಎಸ್ ಎಸ್‌ಎಐ ನಿಗದಿಗೊಳಿಸಿದ ಮಟ್ಟಕ್ಕಿಂತ ಕಡಿಮೆ ಇದ್ದು, ಕೋಲಿಫಾರ್ಮ್ ರಹಿತವಾಗಿದ್ದರೆ ಹೀಗೆ ಮಾಡಬಹುದು. ಸ್ಟ್ಯಾಂಡರ್ಡ್ ಪ್ಲೇಟ್ ಕೌಂಟ್ ಪ್ರತಿ ಗ್ರಾಂಗೆ 30,000 ಕಾಲೊನಿ ಫಾರ್ಮಿಂಗ್ ಯುನಿಟ್‌ಗಳನ್ನು (ಸಿಎಫ್‌ಯು) ಮೀರಬಾರದು. ಹಾಗಿಲ್ಲದಿದ್ದರೆ ಹಾಲನ್ನು ಕುದಿಸದೆ ಕುಡಿಯಬಾರದು.

ಆದರೆ ನಮ್ಮ ಹಲವು ಬ್ರ್ಯಾಂಡ್‌ಗಳ ಹಾಲುಗಳಲ್ಲಿ ಇವುಗಳು ಅಧಿಕವಾಗಿರುವುದು ಕಂಡುಬಂದಿದೆ. ಸಮಾಧಾನದ ಸಂಗತಿ ಎಂದರೆ, ನಮ್ಮಲ್ಲಿ ಪ್ಯಾಕೆಟ್ ಹಾಲನ್ನು ಕೂಡ ಕುದಿಸದೆ ಕುಡಿಯುವ ರೂಢಿಯಿಲ್ಲ; ಹೀಗಾಗಿ, ಇದು ಆರೋಗ್ಯದ ಮೇಲೆ ಅಷ್ಟು ಸಮಸ್ಯೆ ಉಂಟು ಮಾಡುತ್ತಿಲ್ಲ ಎಂಬುದು ಸಮೀಕ್ಷೆ ನಡೆಸಿದ ತಜ್ಞರ ಅನಿಸಿಕೆ.

 



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT