ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕರ ಪ್ರೋತ್ಸಾಹಕ್ಕೆ ಕ್ರಮ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಯಲಹಂಕ: ಬೆಂಗಳೂರು ಹಾಲು ಒಕ್ಕೂಟ, ಸಾದೇನಹಳ್ಳಿ ಹಾಗೂ ಸುರಧೇನುಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸಾದೇನಹಳ್ಳಿ ಗ್ರಾಮದಲ್ಲಿ ಮಿಶ್ರತಳಿ ಕರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ದಿಬ್ಬೂರು ಜಯಣ್ಣ, ಹೈನುಗಾರಿಕೆ ಉದ್ಯಮ ಹಾಗೂ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ವ್ಯಾಪ್ತಿಯ 12 ತಾಲ್ಲೂಕುಗಳಲ್ಲಿ ವರ್ಷಕ್ಕೆ ಎರಡು ಬಾರಿ ಇಂತಹ ಪ್ರದರ್ಶನ ಮತ್ತು ಉತ್ತಮ ಮಿಶ್ರ ತಳಿ ಕರುಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಪ್ರದರ್ಶನ ಉದ್ಘಾಟಿಸಿದ ಶಾಸಕ ಎಸ್.ಆರ್.ವಿಶ್ವನಾಥ್, ವಿಜೇತ ಉತ್ತಮ ಮಿಶ್ರತಳಿ ಕರುಗಳ ಮಾಲೀಕರಿಗೆ ಬಹುಮಾನ ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ವಾಣಿಶ್ರೀ ವಿಶ್ವನಾಥ್, ಕೆ.ಎಂ.ಮಾರೇಗೌಡ, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಲಕ್ಷ್ಮಣ ರೆಡ್ಡಿ, ಸಾದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಟಾಲಪ್ಪ ಮೊದಲಾದವರು ಉಪಸ್ಥಿತರಿದ್ದರು.

ಬಹುಮಾನ: ಎಚ್‌ಎಫ್- ಪಡ್ಡೆ ಜಾತಿಯ ಕರು ವಿಭಾಗದಲ್ಲಿ ಸಾದೇನಹಳ್ಳಿ ಗ್ರಾಮದ ಎಚ್.ಮುನಿಯಪ್ಪ ಅವರ ಕರು ಪ್ರಥಮ, ಎ.ಪಟಾಲಪ್ಪ ಅವರ ಕರು ದ್ವಿತೀಯ ಹಾಗೂ ಜರ್ಸಿ ತಳಿ ಕರುಗಳ ವಿಭಾಗದಲ್ಲಿ ಜಯಮ್ಮ ಅವರ ಕರು ಪ್ರಥಮ ಬಹುಮಾನ ಪಡೆದವು.

ಜರ್ಸಿ ತಳಿ ಹಾಗೂ ಎಚ್‌ಎಫ್ ತಳಿಯ ಮೂರು ವಿಭಾಗ ಸೇರಿದಂತೆ ನಾಲ್ಕು ವಿಭಾಗಗಳ್ಲ್ಲಲೂ ಉತ್ತಮ ಮಿಶ್ರ ತಳಿ ಕರುಗಳ ಬಹುಮಾನ ಪಡೆದ ಸಾದೇನಹಳ್ಳಿಯ ಸುನಂದಮ್ಮ ರಾಮಾಂಜಿನಪ್ಪ ಅವರಿಗೆ ಸಮಗ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಒಕ್ಕೂಟಕ್ಕೆ ವರ್ಷದಲ್ಲಿ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಸಾದೇನಹಳ್ಳಿಯ ಮುನಿಯಪ್ಪ, ಶಿವಣ್ಣ ಹಾಗೂ ಮೀನಾ ರಾಜಣ್ಣ ಅವರಿಗೆ ಕ್ರಮವಾಗಿ ಮೊದಲ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ವಿಶ್ವನಾಥ ರೆಡ್ಡಿ ತೀರ್ಪುಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT