ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಳು ಸುರಿಯುತ್ತಿದೆ ಪೊಲೀಸ್‌ ಕ್ವಾಟರ್ಸ್

Last Updated 4 ಜನವರಿ 2014, 9:59 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕೊಳವೆ ಬಾವಿಯಿದ್ದರೂ ನೀರಿನ ಸೌಲಭ್ಯವಿಲ್ಲ, ನಾಯಿಗಳ ಕಾಟ, ಮಳೆ ಬಂದರೆ ಓಡಾಡಲು ಅಸಾಧ್ಯ, ಕಳೆಗಿಡಗಳು ಎಲ್ಲೆಂದರಲ್ಲಿ ಬೆಳೆ­ದಿರುವುದ­ರಿಂದ ಹಾವುಗಳ ಕಾಟ... – ಇದು ಪೊಲೀಸ್‌ ಕ್ವಾಟರ್ಸ್ ದುಃಸ್ಥಿತಿ. ಊರಿನ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವ ಪೊಲೀಸರು ತಮ್ಮ ಮನೆಗಳಿರುವ ಪ್ರದೇಶವನ್ನೇ ಸ್ವಚ್ಛವಾಗಿ­ಟ್ಟು­ಕೊಳ್ಳದಷ್ಟು ಅಸಹಾಯಕ­ರಾಗಿ­ದ್ದಾರೆಯೇ? ಎಂದು ನಾಗರಿಕ ಸಮು­ದಾಯ ಪ್ರಶ್ನಿಸುವಂತಾಗಿದೆ.

ಕ್ವಾಟರ್ಸ್‌ಗಳಲ್ಲಿ ಒಬ್ಬರು ಸರ್ಕಲ್ ಇನ್‌ಸ್ಪೆಕ್ಟರ್, ಇಬ್ಬರು ಸಬ್‌ ಇನ್‌ಸ್ಪೆಕ್ಟರ್, ಐವರು ಎಎಸ್‌ಐ ಸೇರಿದಂತೆ ಸುಮಾರು 60 ಪೊಲೀಸ್‌ ಕುಟುಂಬಗಳು ವಾಸವಿವೆ. ಆದರೆ ಕಸದ ರಾಶಿ, ಗುಜರಿ ವಾಹನಗಳ ಮೆರೆದಾಟ­ದಲ್ಲಿ ‘ಇದೇನ್ರೀ ಪೊಲೀಸ್ರು ಇಂಥ ಸ್ಥಿತೀಲಿ ಬದುಕ್ತಿದ್ದಾರೆ’ ಎಂದು ಊರಿನ ಜನ ಆಡಿಕೊಳ್ಳುವಂತಾಗಿದೆ.

ಕ್ವಾಟರ್ಸ್ ಆವರಣದಲ್ಲಿರುವ ನಲ್ಲಿಗೆ ನೀರು ಸರಬರಾಜಾ­ಗುತ್ತಿಲ್ಲ. ಟ್ಯಾಂಕರ್‌ ನೀರನ್ನು ಖರೀದಿಸಿ ಕಾಲ ತಳ್ಳುತ್ತಿದ್ದಾರೆ. ಶಿಥಿಲವಾಗಿರುವ ಕಾಂಪೌಂಡ್ ಹಲವೆಡೆ ಬಿದ್ದು ಹೋಗಿದೆ. ಪಾರ್ಥೇನಿಯಂ ಹಾಗೂ ಕಳೆಗಿಡಗಳು ಸಾಕಷ್ಟು ಬೆಳೆದಿರುವು­ದರಿಂದ ಹಾವುಗಳೂ ಓಡಾಡುತ್ತಿವೆ. ಮಕ್ಕಳು ಆಡುವಾಗ ಬೀದಿನಾಯಿಗಳ ಕಾಟದ ಜೊತೆಗೆ ವಾಹನಗಳ ಭಯವೂ ಇದೆ.

‘ನಮ್ಮ ಮನೆಯವರು ಜನ­ಸೇವಕರಾಗಿ ಖಾಕಿ ಬಟ್ಟೆ ತೊಟ್ಟು­ಕೊಂಡು ಹಗಲಿರುಳೂ ಕಾನೂನು ರಕ್ಷಣೆಗಾಗಿ ದುಡಿಯುತ್ತಾರೆ. ಆದರೆ ಮೂಲ ಸೌಕರ್ಯ ಕೊರತೆಯಿಂದ ನಾವು ಇಲ್ಲಿ ಕಷ್ಟಪಡುತ್ತಿದ್ದೇವೆ. ಕಾಂಪೌಂಡ್‌ ನಿರ್ಮಿಸುವುದರ ಜೊತೆಗೆ ನೀರಿನ ಸೌಲಭ್ಯ ಒದಗಿಸಿ­ಕೊಡಬೇಕು. ಕಾಂಪೌಂಡ್‌ ಒಳಗಿನ ಕಳೆಗಿಡ ನಿರ್ಮೂಲನೆಗೆ ಮತ್ತು ಬೀದಿ ದೀಪಕ್ಕೆ ಪುರಸಭೆ ಗಮನ ಹರಿಸ­ಬೇಕು’ ಎನ್ನುತ್ತಾರೆ ಪೊಲೀಸ್‌ ಕ್ವಾಟರ್ಸ್‌ನ ಮಹಿಳೆಯೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT