ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ನಾಡಹಬ್ಬ ಉತ್ಸವ 17ರಿಂದ

Last Updated 15 ಅಕ್ಟೋಬರ್ 2012, 6:05 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ನಾಡಹಬ್ಬ ಉತ್ಸವ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಅ. 17ಹಾಗೂ 18 ರಂದು ಎರಡು ದಿನಗಳ ಕಾಲ ಪ್ರಸಕ್ತ ವರ್ಷದ ನಾಡಹಬ್ಬ ಉತ್ಸವ ನಗರದ ಜಿಲ್ಲಾ ಗುರುಭವನದಲ್ಲಿ ನಡೆಯಲಿದೆ.

ಅ.17ರಂದು ಸಂಜೆ 6ಗಂಟೆಗೆ ಡಾ.ವಿ.ಕೃ.ಗೋಕಾಕ್ ವೇದಿಕೆಯಲ್ಲಿ ನಡೆಯುವ ನಾಡಹಬ್ಬವನ್ನು ಶಾಸಕ ನೆಹರೂ ಓಲೇಕಾರ ಉದ್ಘಾಟಿಸಲಿದ್ದು, ಹುಕ್ಕೇರಿಮಠದ ಸದಾಶಿವ ಶ್ರೀಗಳು, ಹಾಗೂ ಹೊಸಮಠದ ಬಸವಶಾಂತ ಲಿಂಗ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ನಾಡಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ ಹೆರೂರ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ, ಡಿಡಿಪಿಐ ಎಸ್.ಬಿ.ಕೊಡ್ಲಿ ಅತಿಥಗಳಾಗಿ ಆಗಮಿಸಲಿದ್ದಾರೆ.

ಜಾನಪದ ಸಾಹಿತಿ ಡಾ.ಶಂಭು ಬಳೆಗಾರ `ಕನ್ನಡ ಕನ್ನಡಿಗ ಹಾಗೂ ಕರ್ನಾಟಕ~  ವಿಷಯದ ಮೇಲೆ ಉಪನ್ಯಾಸ ನೀಡಲ್ದ್ದಿದು, ನಿಕಟಪೂರ್ವ ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಎಂ.ಪತ್ರಿ, ಜಿಲ್ಲಾ ವಾಣಿಜ್ಯ ಸಂಸ್ಥೆ ಅಧ್ಯಕ್ಷ ಪಿ.ಡಿ.ಶಿರೂರ, ವೈದ್ಯ ಡಾ. ಸತೀಶ ಪಂಡಿತ ಹಾಗೂ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ವಾಲಿಶೆಟ್ಟರ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ನಾಡು ನುಡಿಗೆ ಸೇವೆ ಸಲ್ಲಿಸಿದ ಭಾನುಪ್ರಕಾಶ ಕುಲ ಕರ್ಣಿ, ರತ್ನಮಾಲಾ ಜ್ಯೋತಿಬಣ್ಣದ, ಎಂ.ಬಿ.ಅಂಬಿಗೇರ, ಅರವಿಂದ ಪಾಟೀಲ್, ಮೇಘಾ ಪಾವಲಿ, ಹಾಗೂ ರಬಜ್‌ಸಾಬ ಕ್ವಾಟಿನಾಯಕ ಅವರನ್ನು ಸನ್ಮಾನಿಸಲಾಗುವುದು. ಅಂದು ರಾತ್ರಿ ವಿವಿಧ ಶಿಕ್ಷಣ ಸಂಸ್ಥೆಗಳ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರುಗಲಿದ್ದು, ಶಶಿಕಲಾ ಅಕ್ಕಿ ಮತ್ತು ಕಾಂಚನಾ ನಡುವಿನಮಠ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಅ.18ರಂದು ಸಂಜೆ 6ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯ ವನ್ನು ಗೌರಿಮಠದ ಶಿವಯೋಗಿ ಶಿವಾ ಚಾರ್ಯ ಶ್ರೀಗಳು, ಹರಸೂರ ಬಣ್ಣದಮಠದ ಅಭಿನವ ರುದ್ರಚನ್ನ ಮಲ್ಲಿಕಾರ್ಜುನ ಶ್ರೀಗಳು ವಹಿಸಲಿದ್ದು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಶಿಗ್ಗಾವಿ ಜಗದ್ಗುರು ರಂಭಾಪುರಿ ಕಾಲೇಜಿನ ಡಾ.ಶ್ರೀಶೈಲ ಹುದ್ದಾರ `ಕನ್ನಡ ಸಂಸ್ಕೃತಿ ಪರಂಪರೆ~ ವಿಷಯ ಕುರಿತು ಉಪನ್ಯಾಸ ನೀಡಲಿದ್ದು, ಜಿ.ಪಂ.ಅಧ್ಯಕ್ಷ ಶಂಕ್ರಣ್ಣ ಮಾತನವರ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಿರೀಶ ತುಪ್ಪದ, ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾ ಯಕಿ ನಿರ್ದೇಶಕಿ ಶಶಿಕಲಾ ಹುಡೇದ ಅತಿಥಿಗಳಾಗಿ ಆಗಮಿಸಲಿದ್ದಾರೆ.

ನಾಡಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ ಹೆರೂರ, ನ್ಯಾಯವಾದಿ   ಎನ್.ಎಂ. ಕುಲಕರ್ಣಿ, ಜಿಲ್ಲಾ ವಾರ್ತಾ ಧಿಕಾರಿ ಸಿ.ಪಿ.ಮಾಯಾಚಾರಿ, ನಿವೃತ್ತ ಪ್ರಾಧ್ಯಾಪಕ , ಪ್ರೊ.ಆರ್.ಕೆ.ಬೆಳ್ಳಿಗಟ್ಟಿ, ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಜಿ.ಎನ್. ಜಾವೂರ ಸಮಾ ರಂಭದಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT