ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್ ಎದುರು ಪ್ರತಿಭಟನೆ

Last Updated 14 ನವೆಂಬರ್ 2011, 8:05 IST
ಅಕ್ಷರ ಗಾತ್ರ

ಹಾವೇರಿ: ಸಮರ್ಪಕ ಆಹಾರ ಪೂರೈಸದ ಹಾಗೂ ಊಟ ನೀಡುವಂತೆ ಕೇಳಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದ ಮೇಲ್ವಿಚಾರಕರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ವಸತಿ ನಿಲಯದ ಎದುರು ಭಾನುವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ವಸತಿ ನಿಲಯದ ಅವ್ಯವಸ್ಥೆಯ ಗೂಡಾಗಿದ್ದು, ವಸತಿ ನಿಲಯದ ಮೇಲ್ವಿ ಚಾರಕ ಕೆ.ಎಫ್. ನದಾಫ್ ಅವರು ವಿದ್ಯಾರ್ಥಿಗಳೊಂದಿಗೆ ಅಸಹಕಾರ ದಿಂದ ವರ್ತನೆ ಮಾಡುತ್ತಾರೆ. ತಕ್ಷಣವೇ ಅವರನ್ನು ವಜಾಗೊಳಿಸ ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.  

ವಸತಿ ನಿಲಯದಲ್ಲಿ ಹಿಂದಿನಿಂದಲೂ ಸರಿಯಾಗಿ ಊಟ ನೀಡುವುದಿಲ್ಲ. ಕಳೆದ ಹಲವು ವರ್ಷಗಳಿಂದ ಇದೇ ರೀತಿ ಮಾಡಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳ ಅಧ್ಯಯನ ಮೇಲೆ ದುಷ್ಪರಿಣಾ ಬೀರುತ್ತಲಿದೆ. ಸರ್ಕಾರದ ನಿಯಮದ ಪ್ರಕಾರ ಏನೇನು ಕೊಡ ಬೇಕು. ಅವುಗಳನ್ನು ನೀಡದೇ ಕೇವಲ ಕಳಪೆ ಮಟ್ಟದ ಆಹಾರ ನೀಡಲಾಗು ತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಸುಮಾರು 4 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾ ರರು, ವಸತಿ ನಿಲಯದಲ್ಲಿ ಯಾವುದೇ ಮೂಲಸೌಲಭ್ಯಗಳಿಲ್ಲ. 80 ಜನ ವಿದ್ಯಾರ್ಥಿಗಳು ವಾಸಿಸಬೇಕಾದ ವಸತಿ ನಿಲಯದಲ್ಲಿ 200 ಜನರನ್ನು ಹಾಕ ಲಾಗಿದೆ. ಆದರೆ ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ನೀಡುತ್ತಿಲ್ಲ. ಹತ್ತು ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಈ ಕುರಿತಂತೆ ತಿಳಿಸಿದರೂ ಪ್ರಯೋಜನ ವಾಗಿಲ್ಲ ಎಂದು ಆರೋಪಿಸಿದರು.

ವಸತಿ ನಿಲಯದಲ್ಲಿ ನಿಗದಿತ ವೇಳಾ ಪಟ್ಟಿಗೆ ತಕ್ಕಂತೆ ಸರಿಯಾಗಿ ಹಾಗೂ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಬೇಕು. ಮೂಲ ಸೌಕರ್ಯ ಗಳನ್ನು ಕಲ್ಪಿಸಬೇಕು. ಅಡುಗೆ ಸಿಬ್ಬಂದಿ ಬದಲಾವಣೆ ಮಾಡಬೇಕು. ಮೇಲ್ವಿ ಚಾರಕ ವಸತಿ ನಿಲಯದಲ್ಲಿ ಕಾಯಂ ಇರುವಂತೆ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ಮತ್ತಿತರರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ, ಉಗ್ರ ಹೋರಾಟ ಮಾಡಲಾಗುವುದು ಎಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ನಾರಾಯಣ ಕಾಳೆ ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯ ದರ್ಶಿ ಜಿ.ಗೋವಿಂದಸ್ವಾಮಿ ಅವರು ದೂರವಾಣಿ ಮೂಲಕ ವಿದ್ಯಾರ್ಥಿ ಗಳನ್ನು ಸಂಪರ್ಕಿಸಿ ವಿದ್ಯಾರ್ಥಿಗಳು ಹಾಗೂ ವಸತಿ ನಿಲಯದ ಮೇಲ್ವಿ ಚಾರಕರ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ವಸತಿ ನಿಲಯದ ಎಲ್ಲ ಮೂಲ ಸೌಲಭ್ಯಗಳನ್ನು  ಕಲ್ಪಿಸು ವುದಾಗಿ ತಿಳಿಸಿದರು.

ಇದರಿಂದ ಪ್ರತಿಭಟನಾಕಾರರು ಹೋರಾಟದಿಂದ ಹಿಂದಕ್ಕೆ ಸರಿದರು ಅಲ್ಲದೇ ಬೇಡಿಕೆ ಈಡೇರದಿದ್ದಲ್ಲಿ ಮತ್ತೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ವಸತಿ ನಿಲಯದಲ್ಲಿ ಸಮರ್ಪಕ ಆಹಾರ ಪೂರೈಕೆಗೆ ಒತ್ತಾಯಿಸಿ ಶನಿವಾರ ರಾತ್ರಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ, ಏಕಾಏಕಿ ವಸತಿ ನಿಲಯಕ್ಕೆ ಬಂದ ಮೇಲ್ವಿಚಾರಕ ಹಾಗೂ ಅವರ ಪುತ್ರ ಬಂದು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಸಹ ಮೇಲ್ವಿಚಾರಕ ಹಾಗೂ ಅವರ ಪುತ್ರನನ್ನು ಥಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪೂಜಾರ, ತಾಲ್ಲೂಕು ಅಧ್ಯಕ್ಷ ಬಸವರಾಜ ಬಾರ್ಕಿ, ಶರೀಫ್ ಹನು ಮನಹಳ್ಳಿ, ಚಂದ್ರು ಬಾಲಣ್ಣನವರ, ಮಾಲತೇಶ ಸುಂಕಮ್ಮನವರ, ಕಾಳಿಂಗಪ್ಪ ಸುಗಮನವರ, ಪ್ರಭು ಮುಲ್ಕಿಗೌಡ್ರ, ಕಾಂತೇಶ ಅಗಸಿ ಬಾಗಿಲದ, ಆಂಜನೇಯ ಗುಡಿಗೇರಿ, ಗುಡ್ಡಪ್ಪ, ಮಂಜು ಎಂ., ಸಂತೋಷ ಚನ್ನಗಿರಿ ಮಲ್ಲಪ್ಪ ರಣತೂಕು, ಚಂದ್ರು ಕಡೆಮನಿ, ರಮೇಶ ಹೊಸಮನಿ, ಅಶೋಕ ಅಡಿವೆಕ್ಕನವರ, ಶಿವಣ್ಣ ಗಾಳೆಪ್ಪನವರ ಸೇರಿದಂತೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT