ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್ ಪಡಿತರ ಸಾಗಣೆ: ಹಲ್ಲೆ

Last Updated 20 ಜನವರಿ 2012, 5:45 IST
ಅಕ್ಷರ ಗಾತ್ರ

ತಿಪಟೂರು: ನಗರದ ಬಿಸಿಎಂ ಇಲಾಖೆ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯ ದಿಂದ ಗೋಧಿ ಮತ್ತು ಅಕ್ಕಿ ಚೀಲಗಳನ್ನು ಅಡುಗೆ ನೌಕರನ ಮೂಲಕ ಕದ್ದು ಸಾಗಿಸುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಗುರುವಾರ ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ನಗರದ ಹಾಲ್ಕುರಿಕೆ ರಸ್ತೆ ಬಿಸಿಎಂ ಕಾಲೇಜು ಹಾಸ್ಟೆಲ್ ಮುಂದೆ ಆಟೊಗೆ ನಾಲ್ಕು ಚೀಲ ಗೋಧಿ ಮತ್ತು ಒಂದು ಅಕ್ಕಿ ಚೀಲ ತುಂಬುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಹಿಂಬಾಲಿಸಿ ಹೋದಾಗ ಅವ್ಯವಹಾರ ಬೆಳಕಿಗೆ ಬಂದಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ಆಟೊ ನಿಲ್ಲಿಸಿ ಚೀಲಗಳನ್ನು ಬಸ್‌ನಲ್ಲಿ ಬೇರೆಡೆ ಸಾಗಿಸಲು ಪ್ರಯತ್ನಿಸಿದರು.

ಪಡಿತರ ಕದ್ದು ಸಾಗಿಸುವ ವಿಚಾರ ತಿಳಿದು  ಸಾರ್ವಜನಿಕರು ಅವರಿಗೆ ಧರ್ಮದೇಟು ನೀಡಿ ಬಾಯಿ ಬಿಡಿಸಲು ಪ್ರಯತ್ನಿಸಿದರು. ಚಿಕ್ಕನಾಯನಹಳ್ಳಿ ತಾಲ್ಲೂಕು ಮತಿಘಟ್ಟ ಗ್ರಾಮದ ಸ್ವಾಮಿ ಮತ್ತು ಶಿವಬಸವಯ್ಯ ಎಂದು ಹೆಸರು ತಿಳಿಸಿದ್ದಾರೆ.

ಚೀಲಗಳನ್ನು ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡುವ ರವಿ ತಮಗೆ ಕೊಟ್ಟರು. ಪ್ರತಿ ಚೀಲ ಗೋಧಿಗೆ ತಲಾ ರೂ. 500 ಮತ್ತು ಅಕ್ಕಿಗೆ 700 ಹಣ ಪಡೆದಿದ್ದಾರೆ ಎಂದು ತಿಳಿಸಿದರು.

ಸ್ಥಳಕ್ಕೆ ಫುಡ್ ಇನ್ಸ್‌ಪೆಕ್ಟರ್ ರಂಗಸ್ವಾಮಿ ಆಗಮಿಸಿ ವಿಚಾರಿಸಿದರು. ನಂತರ ಅವರನ್ನು ಸಾರ್ವಜನಿಕರು ನಗರಠಾಣೆ ಪೊಲೀಸರಿಗೆ ಒಪ್ಪಿಸಿದರು.

ಬಿಸಿಎಂ ಬಾಲಕಿಯರ ಹಾಸ್ಟೆಲ್‌ನಿಂದ ಪಡಿತರ ಚೀಲಗಳು ಕಳ್ಳ ಸಾಗಣೆ ಆಗಿದ್ದ ಪ್ರಕರಣ ಈಚೆಗೆ ಬೆಳೆಕಿಗೆ ಬಂದಿತ್ತು. ಹಾಸ್ಟೆಲ್‌ನ ಅಡುಗೆ ಸಹಾಯಕ ರವಿ ಹೊರಗುತ್ತಿಗೆ ನೌಕರನಾಗಿದ್ದು, ಇದೇ ವ್ಯಕ್ತಿಯ ತಂದೆ ರಂಗಸ್ವಾಮಿ ಅದೇ ಹಾಸ್ಟೆಲ್‌ನಲ್ಲಿ ಕಾಯಂ ಅಡುಗೆ ಸಿಬ್ಬಂದಿ.

ನಗರ ಪೊಲೀಸ್ ಠಾಣೆಯಲ್ಲಿ ಹಾಸ್ಟೆಲ್ ವಾರ್ಡನ್ ಶಂಕರ ನಾರಾಯಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT