ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯಮಯ ಚಿತ್ರದಲ್ಲಿ ಸೈಫ್

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹಾಸ್ಯಮಯ ರೊಮ್ಯಾಂಟಿಕ್ ಚಿತ್ರವೊಂದರ ಸಿದ್ಧತೆಯಲ್ಲಿ ಸೈಫ್ ಅಲಿ ಖಾನ್ ನಿರತರಾಗಿದ್ದಾರೆ. ರಾಜ್ ನಿದಿಮೋರು ಹಾಗೂ ಡಿ.ಕೆ. ಕೃಷ್ಣ ಅವರ ಜಂಟಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಚಿತ್ರದಲ್ಲಿ ಸೈಫ್ ನಾಯಕ ಹಾಗೂ ನಿರ್ಮಾಪಕ ಎರಡೂ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ.

`ಕಲ್ ಹೋ ನಾ ಹೋ', `ಹಮ್ ತುಮ್', `ಸಲಾಮ್ ನಮಸ್ತೆ', `ಲವ್ ಆಜ್‌ಕಲ್' ಸೇರಿದಂತೆ ಉತ್ತಮ ರೊಮ್ಯಾಂಟಿಕ್ ಚಿತ್ರಗಳನ್ನು ನೀಡಿರುವ ಸೈಫ್, ಈಗಾಗಲೇ ಈ ಸೆಟ್ಟೇರದ ಚಿತ್ರದ ಕಥೆ ಆಲಿಸುವಲ್ಲಿ ನಿರತರಾಗಿದ್ದಾರಂತೆ. ನಿದಿಮೊರು ಹಾಗೂ ಕೃಷ್ಣ ಅವರೊಂದಿಗೆ ಸೈಫ್‌ಗೆ ಇದು ಎರಡನೇ ಚಿತ್ರ. ಈ ಮೊದಲು `ಗೋ ಗೋವಾ ಗಾನ್' ಎಂಬ ಚಿತ್ರದಲ್ಲಿ ನಟಿಸಿದ್ದು, ಅದು ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಅದೇ ಉತ್ಸಾಹದಲ್ಲಿ ಮತ್ತೊಂದು ಚಿತ್ರಕ್ಕೆ ಕೈಹಾಕಿರುವ ಈ ತಂಡ ಈ ಬಾರಿ ಪ್ರೇಮ ಹಾಗೂ ಹಾಸ್ಯವನ್ನು ನವಿರಾಗಿ ಬೆರೆಸುವ ಇರಾದೆ ಹೊಂದಿದೆ. ಈಗ ತೆರೆ ಕಾಣಬೇಕಿರುವ `ಗೋ ಗೋವಾ ಗಾನ್' ಚಿತ್ರಕ್ಕಿಂತ ಸಂಪೂರ್ಣ ಭಿನ್ನವಾಗಿರುವ ಈ ಚಿತ್ರದ ಕಥೆಯ ಎಳೆಯೇ ಸೊಗಸಾಗಿದೆ ಎಂದು ತಂಡ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT