ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಭಾಷೆ ಕಲಿಕೆಗೆ ತಮಿಳುನಾಡು ವಿರೋಧ

Last Updated 18 ಸೆಪ್ಟೆಂಬರ್ 2014, 10:56 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ):  ವಿಶ್ವವಿದ್ಯಾಲಯಗಳಲ್ಲಿ ಹಿಂದಿ ಭಾಷೆ  ಅನುಷ್ಠಾನ ಕುರಿತಂತೆ ಯುಜಿಸಿ ಹೊರಡಿಸಿರುವ ಸುತ್ತೊಲೆಯನ್ನು ತಮಿಳುನಾಡು ಸರ್ಕಾರ ವಿರೋಧಿಸಿದೆ.

ಯುಜಿಸಿ ಸುತ್ತೊಲೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದ ಅಣ್ಣಾ ವಿಶ್ವವಿದ್ಯಾಲಯ ಮತ್ತು ಅಲಗಪ್ಪ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿರುವ ತಮಿಳುನಾಡು ಸರ್ಕಾರ ’ ಯುಜಿಸಿ ಸುತ್ತೊಲೆಯನ್ನು ಅನುಷ್ಠಾನ’ಗೊಳಿಸದಿರಲು ಸೂಚಿಸಿದೆ.

ಗುಜರಾತ್‌ನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಯಾಕೆ ಹಿಂದಿಯನ್ನು ಕಲಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಜಯಲಲಿತಾ ಅವರು ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿ ಭಾಷಾ ಕಲಿಕೆ ಸಮಂಜಸವಾದುದಲ್ಲ ಎಂದು ಹೇಳಿದ್ದಾರೆ.

ಬಲವಂತವಾಗಿ ಹಿಂದಿ ಹೇರಿಕೆ ಕುರಿತಂತೆ ವಿರೋಧ ಪಕ್ಷ ಡಿಎಂಕೆ ಮೌನವಾಗಿರುವುದರ ಹಿಂದಿನ ಉದ್ದೇಶ ಏನು ಎಂದು ಜಯಲಲಿತಾ ಡಿಎಂಕೆ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT