ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹಿಂದುಳಿದ ವರ್ಗಗಳ ಕಡೆಗಣನೆ'

Last Updated 7 ಡಿಸೆಂಬರ್ 2012, 6:44 IST
ಅಕ್ಷರ ಗಾತ್ರ

ಹಾಸನ: ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಅಭಿವೃದ್ಧಿಯನ್ನು ಕಡೆಗಣಿಸಿ ಸಂವಿಧಾನದ ಮೂಲ ಆಶಯವನ್ನು ಈಡೇರಿಸುವಲ್ಲಿ ವಿಫಲವಾಗಿವೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ವೆಂಕಟಗಿರಿಯಯ್ಯ ಬೇಸರ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಗರದ ಹಾಸ ನಾಂಬ ಕಲಾಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಅವರ 56ನೇ ಪರಿನಿರ್ವಾಣ ದಿನದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. `ಸಂವಿಧಾನದ ವ್ಯವಸ್ಥೆಯೊಳಗೆ ಪ್ರತಿ ಯೊಬ್ಬರೂ ಸ್ನೇಹ, ಸಹೋದ ರತೆಯ ಭಾವನೆಯಿಂದ ಇರಬೇಕು ಹಾಗೂ ಜಾತ್ಯಾತೀತ ದೇಶವಾಗಿ ಭಾರತ ಇಡೀ ವಿಶ್ವದಲ್ಲಿ ಗಮನ ಸೆಳೆಯಬೇಕು ಎಂಬ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವಲ್ಲಿ ರಾಜಕೀಯ ನಾಯಕರು ವಿಫಲರಾಗಿದ್ದಾರೆ. ಇಂದು ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸುವ ನಾಯ ಕರು ಇಲ್ಲ ಎಂದರು.


ಮೈಸೂರು ವಿವಿಯ ಪ್ರಾಧ್ಯಾಪಕರಾ ದ ಡಾ.ಎಂ.ಷಣ್ಮುಗಂ, ಡಾ.ಮಹೇಶ್ ಚಂದ್ರಗುರು ಅಂಬೇಡ್ಕರ್, ರಾಜ್ಯ ಸಂಚಾಲಕರಾದ ಎಂ.ಸೋಮಶೇಖರ್, ಪುಟ್ಟರಾಜು, ರಂಗನಾಥ್ ಇದ್ದರು.

`ಅಂಬೇಡ್ಕರ್ ಆದರ್ಶ ಅಳವಡಿಸಿಕೊಳ್ಳಿ'
ಸಕಲೇಶಪುರ: ಶೋಷಿತರಿಗೆ ಶಿಕ್ಷಣ, ಸಾಮಾಜಿಕ ನ್ಯಾಯ ಕಲ್ಪಿಸಲು ಹೋರಾಡಿದ ಮಹನೀಯ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳ ಬೇಕು ಎಂದು ಉಪನ್ಯಾಸಕ ವೆಂಕಟೇಶ್‌ಮೂರ್ತಿ ಹೇಳಿದರು.

ತಾಲ್ಲೂಕು ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವತಿಯಿಂದ ಗುರುವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತಿ ಆಧಾರಿತ ದೇಶವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿಸಲು ಅಂಬೇಡ್ಕರ್ ರಚಿಸಿದ ಸಂವಿಧಾನ ಪ್ರಪಂಚದಲ್ಲಿ ಸರ್ವ ಶ್ರೇಷ್ಠವಾಗಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಡಿ.ಸಿ.ಸಣ್ಣಸ್ವಾಮಿ,  ಮುನಿಸ್ವಾಮಿ, ಹಾನುಬಾಳು ಭಾಸ್ಕರ್, ಕಾಂಗ್ರೆಸ್ ಮುಖಂಡರಾದ ಸಿದ್ದವೀರಪ್ಪ, ದೊಡ್ಡೀರಯ್ಯ, ಸುಂದರಮ್ಮ, ಕೌಸಲ್ಯ ಲಕ್ಷ್ಮಣ್‌ಗೌಡ, ಶಿವಮ್ಮ ಇದ್ದರು.

ಪ್ರತಿಮೆ ಸ್ಥಾಪಿಸಲು ಆಗ್ರಹ
ಹೊಳೆನರಸೀಪುರ: ಪಟ್ಟಣದ ಹೃದಯ ಭಾಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿ ಸಬೇಕು ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಸಮಿತಿಯ ಸದಸ್ಯರು ಡಾ.ಬಿ.ಆರ್. ಅಂಬೇಡ್ಕರ್ ಅವರ 56ನೇ ಪರಿ ನಿರ್ವಾಣ ದಿನವಾದ ಗುರುವಾರ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲ್ಲೂಕು ಸಂಚಾಲಕ ಧರ್ಮಪಾಲ್, ಜಿಲ್ಲಾ ಸಂಘಟನಾ ಸಂಚಾಲಕ ಎಚ್.ಆರ್. ನಾಗೇಂದ್ರ, ಆರ್.ಮೋಹನ್, ಅಂಬ ರೀಶ್, ಆರ್.ಲೋಕೇಶ್, ಮಾದೇಶ್,  ದೇವರಾಜು, ಚಂದ್ರ ಶೇಖರ್, ರವಿ ಕುಮಾರ್, ಲೋಕೇಶ್ ಇದ್ದರು.
ದಲಿತ ಸಂಘರ್ಷ ಸಮಿತಿಯ ಸದಸ್ಯರು ಇಲ್ಲಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಿದರು.

`ಅಂಬೇಡ್ಕರ್ ಭವನ ನಿರ್ಮಾಣ ವಿಳಂಬ'
ಚನ್ನರಾಯಪಟ್ಟಣ: ಪಟ್ಟಣದಲ್ಲಿ  ನಿರ್ಮಾಣ ಹಂತದಲ್ಲಿರುವ  ಅಂಬೇಡ್ಕರ್ ಭವನದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಪ್ಪ ಅಸಮಾಧಾನ ವ್ಯಕ್ತ ಪಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಪರಿ ನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣ ಕ್ಕೂ ಕಾಮಗಾರಿ ಕುಂಠಿತಗೊಳ್ಳಬಾರದು. ಲಭ್ಯವಿರುವ ಅನುದಾನ ಬಳಸಿಕೊಂಡು ಭವನದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.

ಅದೇ ರೀತಿಯಲ್ಲಿ ಹೊಳೆನರಸೀಪುರ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ಶೀಘ್ರದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಎನ್.ಬಿ. ಮಂಜಣ್ಣ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ 101 ವರ್ಗಗಳಿವೆ. ಇನ್ನೂ ಹಲವು ಜಾತಿಗಳನ್ನು ಇದಕ್ಕೆ ಸೇರ್ಪಡೆ ಮಾಡುವುದು ಸರಿಯಲ್ಲ ಎಂದರು.

ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಚಂದ್ರು ಕಾಳೇನಹಳ್ಳಿ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ತಹಶೀಲ್ದಾರ್ ಎಚ್.ಎಸ್. ಸತೀಶ್‌ಬಾಬು, ತಾಲ್ಲೂಕು ಪರಿಶಿಷ್ಟಜಾತಿ -ವರ್ಗಗಳ ನೌಕರ ಸಂಘದ ಅಧ್ಯಕ್ಷ ಲಕ್ಷ್ಮಯ್ಯ ಮಾತನಾಡಿದರು.

ಪುರಸಭಾ ಸದಸ್ಯ ಸಿ.ಕೆ.ಗೋಪಾಲಕೃಷ್ಣ, ದಲಿತ ಮುಖಂಡರಾದ ರಾಜು, ಕೆ.ಎನ್. ನಾಗೇಶ್, ಲಕ್ಷ್ಮಣ್, ಕುಮಾರ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸತ್ತಿಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿ.ಎನ್.ಮಂಜುನಾಥ್, ಸದಸ್ಯ ಎನ್. ಬಸವರಾಜು ಇದ್ದರು.

ಅಂಬೇಡ್ಕರ್ ವಿಚಾರಧಾರೆ ಮನವರಿಕೆಗೆ ಸಲಹೆ
ಬೇಲೂರು: ಶೋಷಿತ ವರ್ಗದ ಆಶಾಕಿರಣವಾಗಿದ್ದ ಡಾ.ಬಿ.ಆರ್.ಅಂಬೇ ಡ್ಕರ್ ಅವರ ವಿಚಾರ ಧಾರೆಗಳನ್ನು ಜನತೆಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಪರ್ವತಯ್ಯ ಹೇಳಿದರು.

53ನೇ ಪುಣ್ಯತಿಥಿ ಅಂಗವಾಗಿ ಪಟ್ಟಣದಲ್ಲಿನ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದರು. ಸಂವಿಧಾನದ ಮೂಲ ತತ್ವಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಅಗತ್ಯವಿದೆ ಎಂದರು.

ತಾಲ್ಲೂಕು ಬಿಜೆಪಿ ಘಟಕ ಅಧ್ಯಕ್ಷ ರೇಣುಕುಮಾರ್, ಬಿಜೆಪಿ ಮುಖಂಡ ದಾಸಪ್ಪ, ಮಧು, ಶ್ರೀನಿವಾಸ್, ಪಾಪಣ್ಣಿ, ಗುರುರಾಜ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT