ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರಿಗೆ ಬಡ್ತಿ ಮೀಸಲು: ಮಾಯಾ ಬೆಂಬಲ

Last Updated 23 ಡಿಸೆಂಬರ್ 2012, 12:17 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ):  ಸರ್ಕಾರ  ಹಿಂದುಳಿದ ವರ್ಗದವರಿಗೆ ಹುದ್ದೆಗಳಲ್ಲಿ  ಬಡ್ತಿ ಮೀಸಲಾತಿ ತರಲು ಉದ್ದೇಶಿಸಿದರೆ ನಮ್ಮ ಪಕ್ಷ  ಮಸೂದೆಗೆ ಬೆಂಬಲಿಸುವುದಾಗಿ  ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ವರಧಿಗಾರರಿಗೆ ತಿಳಿಸಿದರು.

  ಉತ್ತರ ಪ್ರದೇಶದ ಚುನಾವಣೆ ಸಮಯದಲ್ಲಿ ಸಮಾಜವಾದಿ ಪಕ್ಷದ ಅಖಿಲೇಷ್ ಯಾದವ್ ಅವರು  ತಮ್ಮ ಪಕ್ಷದ ಚುನಾವಣ ಪ್ರಣಾಳಿಕೆಯಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಶೇಕಡ 18 ರಷ್ಟು ಹುದ್ದೆಗಳನ್ನು ಮುಸ್ಲಿಮರಿಗೆ ನೀಡುವ ಬರವಸೆ ನೀಡಿತ್ತು. ಮುಸ್ಲಿಮರಿಗೆ ಮೀಸಲಾತಿ ಒದಗಿಸಲು ಶಿಫಾರಸು ಮಾಡಿದ್ದ ಸಾಚಾರ್ ಸಮಿತಿ ಶಿಫಾರಸುಗಳನ್ನು ಜಾರಿಗೆ ತರುವುದಾಗಿ ಹೇಳಿತ್ತು  ಎಂದು ಮಾಯಾವತಿ ಅವರು ತಿಳಿಸಿದರು.

ಚಳಿಗಾಲದ ಅಧಿವೇಶನದ ಸಮಯದಲ್ಲಿ ಯುಪಿಎ ಸರ್ಕಾರ ಬಡ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಮಂಡಿಸಿತ್ತು ಇದಕ್ಕೆ ಸಮಾಜವಾದಿ ಪಕ್ಷ ತೀವ್ರ ವಿರೋದ ವ್ಯಕ್ತ ಪಡಿಸಿತ್ತು. ಅಲ್ಲದೆ ಸರ್ಕಾರಿ ಹುದ್ದೆಗಳಲ್ಲಿ ಒಬಿಸಿ ಹಾಗೂ ಮುಸ್ಲೀಂರಿಗೂ ಬಡ್ತಿಯಲ್ಲಿ ಮೀಸಲಾತಿಗೆ ಅಗ್ರಹಿಸಿತ್ತು.

ನಮ್ಮ ಪಕ್ಷ ಸರ್ವ ಜನ  ಹಿತವನ್ನು ಬಯಸುವುದರಿಂದ  ಮೇಲ್ವರ್ಗದ ಜಾತಿಗಳಲ್ಲಿನ  ಬಡವರಿಗೂ ಮೀಸಲಾತಿ ನೀಡಿದರೆ ನಾವು ಬೆಂಬಲಿಸುವುದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT