ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರು ಒಗ್ಗೂಡಬೇಕು

Last Updated 18 ಅಕ್ಟೋಬರ್ 2012, 19:35 IST
ಅಕ್ಷರ ಗಾತ್ರ

ಬೆಂಗಳೂರು: `ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಿಂದುಳಿದ ಜಾತಿಗಳ ಜನರು ಒಗ್ಗಟ್ಟಾಗಬೇಕಾದ ಅನಿವಾರ್ಯವಿದೆ~ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಕನ್ನಡ ವೇದಿಕೆಯು ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಸವಿತಾ ಸಮಾಜ ಸಾಂಸ್ಕೃತಿಕ ಸಂಗೀತೋತ್ಸವ~ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಹಿಂದುಳಿದ ವರ್ಗಗಳ ಜನರು ವಿವಿಧ ಕಾರಣಗಳಿಂದಾಗಿ ಹಂಚಿ ಹೋಗಿದ್ದಾರೆ. ಹೀಗಾಗಿ ತಮ್ಮ ರಾಜಕೀಯ ಪ್ರಾತಿನಿಧ್ಯಕ್ಕೆ ಹಿಂದುಳಿದ ಜಾತಿಗಳ ಜನರು ಒಗ್ಗಟ್ಟಾಗಬೇಕಾಗಿದೆ. ಹಿಂದುಳಿದ ಜಾತಿಗಳ ಜನರು ಒಂದಾದಾಗ ಮಾತ್ರ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ~ ಎಂದು ಅವರ ಹೇಳಿದರು.

ಡೋಲು ವಾದಕ ಡಾ.ಆರ್.ಮುನಿರತ್ನಂ ಮಾತನಾಡಿ, `ತಮಿಳುನಾಡಿನಲ್ಲಿ ಸವಿತಾ ಸಮಾಜದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಅಲ್ಲಿ ನಾದಸ್ವರ, ಡೋಲು ಸೇರಿದಂತೆ ವಿವಿಧ ವಾದ್ಯಗಳ ಕಲಿಕೆಗೆ ಸಂಗೀತ ಶಾಲೆಗಳನ್ನು ತೆರೆಯಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಸಂಗೀತ ಶಾಲೆಗಳನ್ನು ತೆರೆಯಬೇಕು~ ಎಂದು ಒತ್ತಾಯಿಸಿದರು.

`ಡೋಲು ಹಾಗೂ ನಾದಸ್ವರ ವಾದಕರಿಗೆ ಬದುಕು ಸಾಗಿಸಲು ಅಗತ್ಯವಿರುವಷ್ಟು ಮಾಸಾಶನ ನೀಡಬೇಕು. ರಾಜ್ಯ ಸರ್ಕಾರ ಕಲಾವಿದರಿಗೆ ಗೌರವಯುತ ಜೀವನ ನಡೆಸಲು ಅನುಕೂಲವಾಗುವ ಹೊಸ ಸೌಲಭ್ಯಗಳನ್ನು ಒದಗಿಸಬೇಕು~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT