ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಒಂದಾಗುವುದೆಂದು Test

Last Updated 21 ಜನವರಿ 2011, 16:50 IST
ಅಕ್ಷರ ಗಾತ್ರ

‘ಹಿಂದೂ ಎಲ್ಲಾ ಒಂದು’ ಆಗುವುದನ್ನು ಯಾರೂ ಬೇಡ ಅನ್ನುವುದಿಲ್ಲ. ಇದಕ್ಕಾಗಿ ಬೇರೆ ಧರ್ಮವನ್ನು ದ್ವೇಷಿಸುವ ಅಗತ್ಯವಿಲ್ಲ. ಬದಲಾಗಿ ಹಿಂದೂ ಧರ್ಮಕ್ಕೆ ಪ್ರೀತಿ ಪೂರ್ವಕ ಬರುವವರನ್ನು ಸ್ವಾಗತಿಸಬೇಕು.

ಈಗ ಹಿಂದೂ ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವಿಭಾಗಗಳಿವೆ. ಅವು ರದ್ದಾಗಬೇಕು. ಆಗ ಹಿಂದು ಎಲ್ಲಾ ಒಂದಾಗುತ್ತಾರೆ.

1932ರಲ್ಲೇ ಮಹಾತ್ಮ ಗಾಂಧಿ ಹೇಳಿದ್ದು, ‘ಇದೀಗ ವರ್ಣ ವ್ಯವಸ್ಥೆಯು ಮುರಿದು ಬಿದ್ದಿದೆ. ಈಗ ನಿಜವಾದ ಬ್ರಾಹ್ಮಣ, ಕ್ಷತ್ರಿಯಾ, ವೈಶ್ಯ ಯಾರೂ ಇಲ್ಲ. ಹಿಂದೂಗಳೆಲ್ಲರೂ ಶೂದ್ರರಾಗಿ ಒಂದೇ ವರ್ಣದವರಾಗಿದ್ದೇವೆ. ಜೊತೆಗೆ ಅಸ್ಪೃಶ್ಯತೆಯನ್ನು ತೆಗೆದು ಹಾಕತಕ್ಕದ್ದು. ಇದರಿಂದ ಉತ್ತಮರು - ಕನಿಷ್ಠರು, ಮೇಲು- ಕೀಳು ಎಂಬ ಭಾವನೆ ನಾಶವಾಗುತ್ತದೆ’ ಎಂದಿದ್ದಾರೆ. ಆಗ ಹಿಂದೂ ಎಲ್ಲಾ ಒಂದು ಎಂಬುದು ಅರ್ಥಪೂರ್ಣವಾಗುತ್ತದೆ. ಇದನ್ನು ಕಾಯಾ- ವಾಚಾ- ಮನಸಾ ಎಲ್ಲರೂ ಅನುಸರಿಸತಕ್ಕದ್ದು.

ಸಹಪಂಕ್ತಿ ಭೋಜನ ಮತ್ತು ಅಂತರ್‌ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವುದು ಮತ್ತು ಭಾಗವಹಿಸುವುದು.
ಈ ಸುಧಾರಣೆಗಳಿಗೆ ಒಪ್ಪಿ- ಆಚರಣೆಯಲ್ಲಿ ತರುವವರಿಗೆ ಮಾತ್ರ ಎಲ್ಲಾ ರೀತಿಯ ಚುನಾವಣೆಗಳಲ್ಲಿ ಮತ ನೀಡತಕ್ಕದ್ದು.
ಈ 5 ಅಂಶಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇದಕ್ಕೆ ಎಲ್ಲರ ಸಹಕಾರ- ಪ್ರೋತ್ಸಾಹ- ಬೆಂಬಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT