ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಧರ್ಮದ ಏಕತೆಗೆ ಶ್ರಮಿಸಿ

Last Updated 12 ಜನವರಿ 2012, 8:00 IST
ಅಕ್ಷರ ಗಾತ್ರ

ಜಗಳೂರು: ಹಿಂದೂ ಧರ್ಮದ ಒಗ್ಗಟ್ಟು ಕಾಪಾಡಿಕೊಳ್ಳಬೇಕಾದಲ್ಲಿ ಜಾತಿ, ಭಾಷೆ, ಪ್ರಾಂತ ಭೇದವನ್ನು ಮೊದಲು ತೊಗಿಸಬೇಕು ಎಂದು ಧರ್ಮ ಜಾಗರಣಾ ಪ್ರಾಂತ ಪ್ರಮುಖ್ ಮುನಿಯಪ್ಪ ಹೇಳಿದರು.

ಧರ್ಮ ಜಾಗರಣಾ ಸಮನ್ವಯ ವಿಭಾಗದ ವತಿಯಿಂದ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮಶಕ್ತಿ ಸಂಗಮ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ ಸಮಾಜವನ್ನು ದುರ್ಬಲಗೊಳಿಸಲು ಕೆಲವು ಶಕ್ತಿಗಳು ವ್ಯವಸ್ಥಿತ ಸಂಚು ರೂಪಿಸುತ್ತಿವೆ. ಹಿಂದೂಗಳನ್ನು ಬೇರೆ ಧರ್ಮಗಳಿಗೆ ಮತಾಂತರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈಚೆಗೆ ಸಿಂದಗಿಯಲ್ಲಿ ಪಾಕಿಸ್ತಾನದ ದ್ವಜಾರೋಹಣ ಮಾಡುವ ಮೂಲಕ ಪ್ರಚೋದನೆ ಉಂಟು ಮಾಡಲಾಗಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಹಿಂದೂಗಳಲ್ಲಿ ಜಾತಿ, ಭಾಷೆ, ಪ್ರಾಂತ ಭೇದಗಳನ್ನು ಮರೆತು ಏಕತೆ ಮೂಡಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

 ಸಮಾರಂಭದ ನೇತೃತ್ವ ವಹಿಸಿದ್ದ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನೆಯೇ ಮೊದಲ ಪಾಠಶಾಲೆಯಾಗಬೇಕು. ಮಕ್ಕಳಿಗೆ ಒತ್ತಡ ಮುಕ್ತ ಕಲಿಕೆ ಅಗತ್ಯ ಎಂದು ಹೇಳಿದರು.

ಗವಿಮಠದಲ್ಲಿ  ಬರುವ ಜ. 15ರಂದು  ಸಂಕ್ರಾಂತಿಯ ಹಬ್ಬದಂದು ಲೋಕಕಲ್ಯಾಣಕ್ಕಾಗಿ ವಿವಿಧ ಪೂಜೆ, ಹೋಮ, ಯಾಗಗಳನ್ನು ನೆರವೇರಿಸಲಾಗುತ್ತದೆ ಎಂದರು.

ಸಮಾರಂಭಕ್ಕೂ ಮುನ್ನ ದಿನವಿಡೀ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ, ಮುಂತಾದ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಶಾಸಕ ಎಸ್.ವಿ. ರಾಮಚಂದ್ರ ದಂಪತಿ ಸೇರಿದಂತೆ 600ಕ್ಕೂ ಹೆಚ್ಚು ದಂಪತಿ ಪಾಲ್ಗೊಂಡಿದ್ದರು.

ಆದಿಜಾಂಬವ ಪೀಠದ ಷಡಾಕ್ಷರಿ ಸ್ವಾಮೀಜಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ, ಜಿ.ಪಂ. ಸದಸ್ಯೆ ಜಯಲಕ್ಷ್ಮೀ ಮಹೇಶ್, ಪ.ಪಂ. ಅಧ್ಯಕ್ಷೆ ನಾಗರತ್ನಾ, ಕಾಂಗ್ರೆಸ್ ಮುಖಂಡ ಎಚ್.ಪಿ. ರಾಜೇಶ್, ಬಿಜೆಪಿ ಅಧ್ಯಕ್ಷ ಎಸ್.ಕೆ. ಮಂಜುನಾಥ್, ಶಿವಕುಮಾರಸ್ವಾಮಿ, ಬಿ.ಎನ್.ಎಂ. ಸ್ವಾಮಿ, ಕರಿಬಸಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT