ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆಗಿಳಿದ ಪ್ರೇಕ್ಷಕರು: ಬಾಗನ್- ಬೆಂಗಾಲ್ ಪಂದ್ಯ ರದ್ದು

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಮೋಹನ್ ಬಾಗನ್ ಮತ್ತು ಈಸ್ಟ್ ಬೆಂಗಾಲ್ ತಂಡಗಳ ನಡುವಿನ ಐ-ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯ ಅರ್ಧದಲ್ಲೇ ರದ್ದಾಗಿದೆ. ಉಭಯ ತಂಡಗಳ ಪ್ರೇಕ್ಷಕರು ಹಿಂಸಾಚಾರಕ್ಕಿಳಿದದ್ದು ಇದಕ್ಕೆ ಕಾರಣ.

ಘಟನೆಯಲ್ಲಿ ಪೊಲೀಸರು ಒಳಗೊಂಡಂತೆ 40 ಪ್ರೇಕ್ಷಕರು ಗಾಯಗೊಂಡಿದ್ದಾರೆ. ಅದೇ ರೀತಿ ಈಸ್ಟ್ ಬೆಂಗಾಲ್ ಬೆಂಬಲಿಗನೊಬ್ಬ ಎಸೆದ ಕಲ್ಲೊಂದು ಬಾಗನ್ ತಂಡದ ಆಟಗಾರ ಸಯ್ಯದ್ ರಹೀಮ್ ನಬಿ ಮುಖಕ್ಕೆ ಬಡಿದು ಗಾಯಗೊಂಡರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಬಲಕಿವಿ ಮತ್ತು ಗಲ್ಲದ ನಡುವೆ ಆಳವಾದ ಗಾಯವಾಗಿದ್ದು, ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ.

ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯವನ್ನು ವೀಕ್ಷಿಸಲು ಯುವ ಭಾರತಿ ಕ್ರೀಡಾಂಗಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಸೇರಿದ್ದರು. ಪಂದ್ಯದ 43ನೇ ನಿಮಿಷದಲ್ಲಿ ಹರ್ಮನ್‌ಜೋತ್ ಗೋಲು ಗಳಿಸಿ ಈಸ್ಟ್ ಬೆಂಗಾಲ್ ತಂಡಕ್ಕೆ ಮುನ್ನಡೆ ತಂದಿತ್ತರು. ಇದಾದ ಅಲ್ಪ ಸಮಯದ ಬಳಿಕ ಬಾಗನ್ ನಾಯಕ ಒಡಾಫ ಒಕೊಲಿ ರೆಡ್ ಕಾರ್ಡ್ ಪಡೆದು ಹೊರನಡೆದರು. ಇದು ಕಾವೇರಿದ ವಾತಾವರಣಕ್ಕೆ ಕಾರಣವಾಯಿತಲ್ಲದೆ, ಪ್ರೇಕ್ಷಕರು ಕೈಗೆ ಸಿಕ್ಕ ವಸ್ತುಗಳನ್ನು ಮೈದಾನಕ್ಕೆ ಎಸೆಯಲಾರಂಭಿಸಿದರು. ರಹೀಮ್ ನಬಿ ಗಾಯಗೊಂಡ ಕಾರಣ ಬಾಗನ್ ಪಂದ್ಯದ ಎರಡನೇ ಅವಧಿಯಲ್ಲಿ ಕಣಕ್ಕಿಳಿಯಲು ನಿರಾಕರಿಸಿತು.

ಬಾಗನ್ ಮತ್ತು ಬೆಂಗಾಲ್ ನಡುವಿನ ಪಂದ್ಯದ ವೇಳೆ ಈ ಹಿಂದೆಯೂ ಹಲವು ಸಲ ಅಹಿತಕರ ಘಟನೆಗಳು ನಡೆದಿದ್ದವು. ಆದರೆ 1980ರ ಆಗಸ್ಟ್ 16 ರಂದು ನಡೆದ ಘಟನೆ ಈಗಲೂ ಭಾರತದ ಫುಟ್‌ಬಾಲ್‌ನ ಕರಾಳ ಅಧ್ಯಾಯವಾಗಿ ಉಳಿದುಕೊಂಡಿದೆ. ಅಂದು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಬಳಿಕ ಉಂಟಾದ ಕಾಲ್ತುಳಿತದಲ್ಲಿ 16 ಮಂದಿ ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT