ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಪ್ಪು ನೇರಳೆ ಕೊಯ್ಲಿಗೆ ಯಂತ್ರ

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಬೇಸಾಯದ ಕೆಲಸಗಳಿಗೆ ಈಗ ಕೂಲಿಗಳು ಸಿಗುವುದಿಲ್ಲ. ಸಿಕ್ಕರೂ ಅವರು ಕೇಳುವಷ್ಟು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಚೈತನ್ಯ ಅನೇಕ ರೈತರಿಗೆ ಇಲ್ಲ. ಕೂಲಿಗಳು ಮಾಡುವ ಕೆಲಸವನ್ನು ನಿರ್ವಹಿಸುವ ಯಂತ್ರಗಳು ಮಾರುಕಟ್ಟೆಗೆ ಬಂದಿವೆ. ಕೆಲ ಸಣ್ಣ ಪುಟ್ಟ ಯಂತ್ರಗಳಂತೂ ರೈತರಿಗೆ ಹೆಚ್ಚು ಸಹಾಯಕವಾಗುತ್ತವೆ.

ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ರೈತ ಎಚ್. ಜಿ. ಗೋಪಾಲಗೌಡರು ಹಿಪ್ಪು ನೇರಳೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. ಅವರು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು. ಹಿಪ್ಪು ನೇರಳೆ ಸೊಪ್ಪು ಕೊಯ್ಯಲು ಆಳುಗಳು  ಕೊರತೆಗೆ ಪರಿಹಾರವಾಗಿ ಅವರು ಪುಟ್ಟ ಯಂತ್ರವನ್ನು ಬಳಸುತ್ತಾರೆ.

 ಹಿಪ್ಪು ನೇರಳೆ ಗಿಡದ ಬುಡ ಕತ್ತರಿಸುವ ಓಲಿಯೊಮ್ಯಾಕ್ ಯಂತ್ರ ಒಂದು ವರ್ಷದ ಹಿಂದೆ ಮಾರುಕಟ್ಟೆಗೆ ಬಂದಾಗ ಅದರ  ಪ್ರಾತ್ಯಕ್ಷಕೆಯನ್ನು ಅವರು ನೋಡಿದ್ದರು. ಈ ಯಂತ್ರ ಖರೀದಿಸುವ ರೈತರಿಗೆ ಸರ್ಕಾರ ಸಹಾಯ ಧನ ನೀಡುತ್ತದೆ ಎಂಬುದನ್ನು ತಿಳಿದು ಅವರೂ ಒಂದು ಯಂತ್ರ ಖರೀದಿಸಿದರು.

ಓಲಿಯೊಮ್ಯಾಕ್ ಯಂತ್ರವನ್ನು ರತ್ನಗಿರಿ ಇಂಪೆಕ್ಸ್ ಕಂಪನಿ ರೂಪಿಸಿದೆ. ಕಂಪೆನಿಯ ತರಬೇತುದಾರರು ಗೋಪಾಲಗೌಡರಿಗೆ ಯಂತ್ರದ ಬಳಕೆ, ಹಿಪ್ಪುನೇರಳೆ ಗಿಡದಿಂದ ಸೊಪ್ಪು ಕತ್ತರಿಸುವುದನ್ನು ಕಲಿಸಿದರು. ಎರಡು ದಿನಗಳ ಬಳಕೆಯ ನಂತರ ಗೌಡರು ಸಫಲರಾದರು.

ರೇಷ್ಮೆ ಹುಳು ಸಾಕಣೆಯಲ್ಲಿ ಹುಳುಗಳಿಗೆ ಸೊಪ್ಪು ಸಮರ್ಪಕವಾಗಿ ಒದಗಿಸುವುದು ಅತ್ಯಂತ ಮುಖ್ಯ. ಎಂಟು ಎಕರೆ ಹಿಪ್ಪು ನೇರಳೆ ತೋಟವಿರುವ ಗೌಡರಿಗೆ ಈ ಯಂತ್ರ ಅನಿವಾರ್ಯವಾಗಿತ್ತು.  ಒಂದು ಎಕರೆ ಜಮೀನಿನಲ್ಲಿ ಹಿಪ್ಪು ನೇರಳೆ ಕತ್ತರಿಸಲು 6 ಕೂಲಿಯಾಳುಗಳು  ಬೇಕು. ಈಗ ಒಬ್ಬ ಆಳನ್ನು ಇಟ್ಟುಕೊಂಡು ಯಂತ್ರದಿಂದ ಸೊಪ್ಪು ಕತ್ತರಿಸುತ್ತಾರೆ. ಅವರಿಗೆ ಐದು ಆಳುಗಳಿಗೆ ಕೊಡುತ್ತಿದ್ದ ಹಣ ಉಳಿತಾಯವಾಗಿದೆ.

ಓಲಿಯೊಮ್ಯಾಕ್ ಯಂತ್ರ ಖರೀದಿಸುವವರಿಗೆ ರಾಜ್ಯ ಸರ್ಕಾರವು ಶೇ 75ರಷ್ಟು ಸಹಾಯಧನ ನೀಡುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್ -94483 96893.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT