ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಕುಸಿತ- 9 ಜನರ ರಕ್ಷಣೆ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶ್ರೀನಗರ (ಪಿಟಿಐ): ಮೂರು ದಿನಗಳಿಂದ ಭಾರಿ ಪ್ರಮಾಣದಲ್ಲಿ ಹಿಮಕುಸಿತ ಮತ್ತು ಹಿಮಪಾತ ಸಂಭವಿಸುತ್ತಿರುವ ಕಾಶ್ಮೀರ ಕಣಿವೆಯ ಸೋನಮಾರ್ಗ್ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಒಂಬತ್ತು ನಾಗರಿಕರನ್ನು ಸೇನೆಯ ನೆರವಿನಿಂದ ಶುಕ್ರವಾರ ರಕ್ಷಿಸಲಾಗಿದೆ.

 ಈ ಮಧ್ಯೆ, ಗುರೆಜ್ ಕಣಿವೆಯಲ್ಲಿ ಬುಧವಾರ ಸಂಭವಿಸಿದ ಹಿಮ ಕುಸಿತದಲ್ಲಿ ನಾಪತ್ತೆಯಾಗಿರುವ ಮೂವರು ಯೋಧರು ಇನ್ನೂ ಪತ್ತೆಯಾಗಿಲ್ಲ.

`ಮೂವರು ಸರ್ಕಾರಿ ನೌಕರರು ಸೋನಮಾರ್ಗ್‌ನಿಂದ ಗಂದೆರ್‌ಬಾಲ್‌ಗೆ ಕಾಲ್ನಡಿಗೆಯಲ್ಲಿ ಬುಧವಾರ ಹೊರಟಿದ್ದರು. ದಾರಿ ಮಧ್ಯೆ  ಭಾರಿ ಹಿಮಪಾತ ಮತ್ತು ಹಿಮಕುಸಿತದಿಂದಾಗಿ ಇಬ್ಬರು ಕಣ್ಮರೆಯಾಗಿದ್ದರು.

ಒಬ್ಬರು ಮಾತ್ರ ಗಂದೆರ್‌ಬಾಲ್‌ಗೆ ತಲುಪಿ, ಕಣ್ಮರೆ ಆದವರ ಬಗ್ಗೆ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದರು~ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಘಟಕದ ಸಂಚಾಲಕರಾಗಿರುವ ಅಮೀರ್ ಅಲಿ ಹೇಳಿದ್ದಾರೆ.

`ನಾಪತ್ತೆಯಾಗಿದ್ದವರಲ್ಲಿ ಒಬ್ಬರು ಸ್ಥಳೀಯ ಆಡಳಿತವನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶಿಟ್ಕಾರಿ ಸೇತುವೆಯ ಕೆಳಗೆ ಆಶ್ರಯ ಪಡೆದಿರುವುದಾಗಿ ಮಾಹಿತಿ ನೀಡಿದರು. ತಕ್ಷಣ ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಇಬ್ಬರು ಸರ್ಕಾರಿ ನೌಕರರು ಸೇರಿದಂತೆ ಒಂಬತ್ತು ಜನರು ಅಲ್ಲಿದ್ದರು~ ಎಂದು ಅಲಿ ತಿಳಿಸಿದರು.

`ಒಂಬತ್ತು ಜನರನ್ನು ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಯಿತು~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT