ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಗರಿಕರ ಅಲಕ್ಷ್ಯ ಅಪರಾಧ

Last Updated 12 ಅಕ್ಟೋಬರ್ 2011, 4:30 IST
ಅಕ್ಷರ ಗಾತ್ರ

ನ್ಯಾಮತಿ: ಸಮಾಜದಲ್ಲಿನ ಹಿರಿಯ ನಾಗರಿಕರನ್ನು ಗೌರವಿಸದಿರುವುದು ಕಾನೂನು ಪ್ರಕಾರ ಅಪರಾಧ ಆಗುತ್ತದೆ ಎಂದು ಹೊನ್ನಾಳಿ ಸಿವಿಲ್ ಮತ್ತು ಜೆಎಂಸಿ ನ್ಯಾಯಾಧೀಶ ರವೀಂದ್ರ ಎಲ್. ಹೊನೋಲೆ ತಿಳಿಸಿದರು.

ಸಮೀಪದ ಕೋಡಿಕೊಪ್ಪ ಗ್ರಾಮದಲ್ಲಿ ಬುಧವಾರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್ಸೆಸ್ ವಿಶೇಷ ಶಿಬಿರ ಮತ್ತು ಹೊನ್ನಾಳಿ ತಾಲ್ಲೂಕು ಕಾನೂನು ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಹಿರಿಯ ನಾಗರಿಕರ ದಿನಾಚರಣೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಪೂರ್ವಜರಿಗೆ ಗೌರವ ಸ್ಥಾನ ಇತ್ತು,  ಅವರ ಬುದ್ದಿವಂತಿಕೆ, ಅನುಭವ, ಮಾರ್ಗದರ್ಶನ,  ಪಡೆಯುವ ಮೂಲಕ ಸಮಾಜದಲ್ಲಿ ಶಾಂತಿ ನೆಲಸಿತ್ತು, ಆದರೇ, ವಿದೇಶಿ ನಾಗರಿಕತೆ ಬಂದ ನಂತರ ಹಿರಿಯರಿಗೆ ಜೀವನಾಂಶ ನೀಡುವುದಕ್ಕೆ ಕಾನೂನು ಬರಬೇಕಾಯಿತು ಎಂದು ವಿಷಾದಿಸಿದರು.

ಇದೇ ಸಂದರ್ಭದಲ್ಲಿ ಕೋಡಿಕೊಪ್ಪ ಗ್ರಾಮಸ್ಥರ ಪರವಾಗಿ ನ್ಯಾಯಾಧೀಶರನ್ನು ಸನ್ಮಾನಿ ಸಲಾಯಿತು.
ವಕೀಲರಾದ ಎಚ್. ಕರುಣಾಕರ, ಶಾಂತವೀರಪ್ಪ,  ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಯತಿರಾಜ್, ನೀಲಕಂಠಸ್ವಾಮಿ ವಿವಿಧ ಕಾನೂನುಗಳ ಪರಿಚಯ ಮಾಡಿಕೊಟ್ಟರು.

ಪ್ರಾಂಶುಪಾಲ ಸಿ.ಎಂ. ಮಹಾದೇವರಾವ್, ಕನ್ನಡ ಉಪನ್ಯಾಸಕ ಎಸ್.ಆರ್. ಬಸವರಾಜಪ್ಪ, ಘಟಕಾಧಿಕಾರಿ ಎಂ. ಸಾಕಮ್ಮ, ಸಿ.ಎನ್. ಜಗದೀಶ, ಕೆ. ಲೋಕೇಶ್ವರಪ್ಪ, ಎಚ್. ಸಿದ್ದೇಶ್ವರಪ್ಪ, ಕೆ.ಜಿ. ರುದ್ರೇಶಪ್ಪ, ಕೆ. ಸೋಮಶೇಖರಪ್ಪ, ರತ್ನಮ್ಮ, ಲೀಲಾ ಗೌರಮ್ಮ ಉಪಸ್ಥಿತರಿದ್ದರು.

ಗ್ರಾ.ಪಂ. ಸದಸ್ಯ ಉಮೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು.
ಕೆ.ಬಿ. ಯತಿರಾಜ್ ಮತ್ತು ಮಾಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.

ಕಾಮಗಾರಿಗೆ ಚಾಲನೆ
ಸಮೀಪದ ಫಲವನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ರಂಗನಾಥಸ್ವಾಮಿ, ಹಳದಮ್ಮ ಮತ್ತು ಚೌಡಮ್ಮ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಗುರುವಾರ ವಿಜಯದಶಮಿಯಂದು ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಹೊನ್ನಾಳಿ ತಾಲ್ಲೂಕು ಬಿಜೆಪಿ ಮುಖಂಡ ಎಂ.ಪಿ. ರಮೇಶ್ ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ, ಸಮಿತಿಯ ರಂಗಪ್ಪ, ಸಿದ್ದಪ್ಪ, ಬಿ.ಕೆ. ಸತ್ಯನಾರಾಯಣ, ನಿವೃತ್ತ ಶಿಕ್ಷಕ ಗಿರಿಯಪ್ಪ, ಜೆ. ಹಳದಪ್ಪ, ಎ.ಕೆ. ರಂಗಪ್ಪ, ದೊಡ್ಡರಾಮನಾಯ್ಕ, ಬಿ. ಹನುಮಂತಪ್ಪ, ವಿಷ್ಣುಪ್ಪ ಪೂಜಾರ್, ಎಚ್. ಮಲ್ಲಪ್ಪ, ಮಾಜಿ ಉಪಾಧ್ಯಕ್ಷ ಟಿ.ಕೆ. ರಂಗಪ್ಪ, ಎಂ.ಕೆ. ರಂಗಪ್ಪ   ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT