ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಗರಿಕರಿಗೆ ಲೇಖನ ಸ್ಪರ್ಧೆ

Last Updated 16 ಸೆಪ್ಟೆಂಬರ್ 2013, 6:11 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಎಎಸ್ಎಂ ಟ್ರಸ್ಟ್‌ನ ಕೃಷ್ಣ ಸನ್ನಿಧಿ (ಹಿರಿಯ ನಾಗರಿಕರ ವಿಶ್ರಾಂತಿ ಧಾಮ) ಸಂಸ್ಥೆಯು ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ ಹಿರಿಯ ನಾಗರಿಕರ ರಾಜ್ಯಮಟ್ಟದ ಲೇಖನ ಸ್ಪರ್ಧೆ ಆಯೋಜಿಸಿದೆ. ‘ಪೀಳಿಗೆಯ ಅಂತರಗಳು’ ಹಾಗೂ ‘ವೃದ್ಧಾಪ್ಯ ಮತ್ತು ಜೀವನ ಸಂತೃಪ್ತಿ’ ವಿಷಯ ಕುರಿತು 60 ವರ್ಷ ಮಿರಿದ ಹಿರಿಯ ನಾಗರಿಕರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

ಈ ಮುಂಚೆ ಪ್ರಕಟವಾಗಿರದ, ಸಾವಿರ ಪದಗಳಿಗೆ ಮೀರದ ಲೇಖನವನ್ನು ಕಳುಹಿಸಬಹುದು. ಒಬ್ಬರು ಒಂದೇ ವಿಷಯ ಕುರಿತ ಲೇಖನ ಕಳುಹಿಸಬಹುದು. ಲೇಖನವನ್ನು ಇಂಗ್ಲಿಷ್ ಅಥವಾ ಕನ್ನಡದಲ್ಲಿ ಬರೆಯಬಹುದು. ಹಾಳೆಯ ಒಂದೇ ಮಗ್ಗುಲಲ್ಲಿ ಬರೆಯುವುದು ಕಡ್ಡಾಯ. ಬೆರಳಚ್ಚು ಪ್ರತಿ ಬೇಡ. ಇ– -ಮೇಲ್ ಮೂಲಕ ಕಳುಹಿಸುವುದಾದರೆ ನುಡಿ ತಂತ್ರಾಂಶ ಬಳಕೆ ಕಡ್ಡಾಯ.

ಲೇಖನಗಳನ್ನು ಯಾವುದೇ ಮಾಧ್ಯಮದಲ್ಲಿ ಬಳಸಲು ಸಂಸ್ಥೆಗೆ ಸಂಪೂರ್ಣ ಹಕ್ಕು ಇರುತ್ತದೆ. ಉತ್ತಮ ಲೇಖನಗಳಿಗೆ ಮೂರು ಬಹುಮಾನ ನೀಡಲಾಗುವುದು. ಆಸಕ್ತರು ಸೆ. 28 ರೊಳಗಾಗಿ ‘ಅಧ್ಯಕ್ಷರು ಕೃಷ್ಣ ಸನ್ನಿಧಿ (ಹಿರಿಯ ನಾಗರಿಕರ ವಿಶ್ರಾಂತಿ ಧಾಮ) ಚೌಧರಿ ಕಾಂಪ್ಲೆಕ್ಸ್ ಎದುರು, ಗೀತಾ ನರ್ಸಿಂಗ್‌ ಹೋಂ ಬಳಿ, ಕೆ.ಸಿ. ರಸ್ತೆ, ಬಳ್ಳಾರಿ– -583101 ಈ ವಿಳಾಸಕ್ಕೆ ಕಳುಹಿಸಬೇಕು.

ಮಾಹಿತಿಗೆ ದೂರವಾಣಿ ಸಂಖ್ಯೆ (08392) -270777, ಮೊಬೈಲ್‌– 98450– 14229, 94496– 11319, ಸಂಪರ್ಕಿಸಬಹುದು ಎಂದು ಟ್ರಸ್ಟ್ ಅಧ್ಯಕ್ಷೆ ಡಾ. ಎ.ನಾಗರತ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT