ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ಜೆಡಿಎಸ್ ಸೇರ್ಪಡೆಗೆ ಹಿಂದೇಟು

Last Updated 28 ಫೆಬ್ರುವರಿ 2011, 7:00 IST
ಅಕ್ಷರ ಗಾತ್ರ

ದೇವದುರ್ಗ: ಪೂರ್ವ ನಿಗದಿಯಂತೆ ಪಕ್ಷದ ಸೇರ್ಪಡೆ ಮುಹೂರ್ತಕ್ಕೆ ಭಾನುವಾರ ಪಟ್ಟಣಕ್ಕೆ ಆಗಮಿಸ ಬೇಕಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಅನಿವಾರ್ಯ ಕಾರಣಗಳಿಂದ ಆಗಮಿಸದೇ ಇರುವುದರಿಂದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಾಜಿ ಶಾಸಕ ಯಲ್ಲಪ್ಪ ಅಕ್ಕರಕಿ ಮತ್ತು ಎ. ಮಲ್ಲಿಕಾರ್ಜುನ ಪಾಟೀಲ ಅವರು ಸ್ಥಳೀಯ ಪಕ್ಷದ ಮುಖಂಡರ ಸಮುಖದಲ್ಲಿ ಸೇರ್ಪಡೆಗೊಳ್ಳದೆ ಇರುವುದು ಕಂಡು ಬಂದಿತು.

ಫೆ. 27 ರಂದು ದೇವದುರ್ಗ ಪಟ್ಟಣಕ್ಕೆ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಆಮಿಸಲು ಒಪ್ಪಿಗೆ ಸೂಚಿಸಿದ ನಂತರವೇ ಇವರ ಅಧಿಕೃತ ಸೇರ್ಪಡೆ ಮೂಹರ್ತ ನಿಗದಿಯಾಗಿತ್ತು. ಇಬ್ಬರು ಮುಖ್ಯಮಂತ್ರಿಗಳು ಬರುವುದಿಲ್ಲ ಎಂದು ಗೊತ್ತಾದ ನಂತರ ನಿರಾಶೆ ಉಂಟಾಯಿತು. ಪಟ್ಟಣದ ಎ. ಮಲ್ಲಿಕಾರ್ಜುನ ಪಾಟೀಲ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಏರ್ಪಡಿಸಲಾಗಿದ್ದ ಸೇರ್ಪಡೆ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಯಲ್ಲಪ್ಪ ಅಕ್ಕರಿಕಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗಾಗಿ ಆಗಮಿಸಿದ್ದರು. ಇಬ್ಬರು ಮುಖ್ಯಮಂತ್ರಿಗಳು ಗೈರು ಹಾಜರಾದ ಬಗ್ಗೆ ತಿಳಿದ ನಂತರ ವಾಪಸ್ ನಡೆದರು.

ಸೇರ್ಪಡೆ: ಕಾಂಗ್ರೆಸ್ ಪಕ್ಷದ ಮಾಜಿ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್ ದೇಸಾಯಿ, ಹಿರಿಯ ಮುಖಂಡ ವೀರಣ್ಣ ಬಳೆ, ತಾ.ಪಂ. ಮಾಜಿ ಉಪಾಧ್ಯಕ್ಷ ಖಾಸಿಂಸಾಬ ಅಂಜಳ, ಮಾಜಿ ಸದಸ್ಯರಾದ ಮೌನಪ್ಪ ನಾಯಕ, ಆದನಗೌಡ ಪಾಟೀಲ, ಜಂಬಣ್ಣ ನೀಲಗಲ್ ಹಾಗೂ ಪುರಸಭೆ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಚರ್ಚೆಗೆ ಗ್ರಾಸ: ಜೆಡಿಎಸ್ ಪಕ್ಷದ ಜಿ.ಪಂ ಸದಸ್ಯ ಶರಣಬಸವ ನಾಯಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವುದು ಕಂಡು ಬಂದಿತು ಪಕ್ಷದ ಜಿಲ್ಲಾ ಅಧ್ಯಕ್ಷ ಶೇಖ ರಿಜ್ವಾನ್, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಪಾಟೀಲ, ಜಿ.ಪಂ, ಸದಸ್ಯರಾದ ಶಿವಣ್ಣತಾತ, ದಾನಪ್ಪ ಆಲ್ಕೋಡ್, ಪ್ರಕಾಶ ಪಾಟೀಲ, ಮಹಾಂತೇಶ, ಶಾಮರಾವ್ ಕುಲ್ಕರ್ಣಿ, ಅಮರೇಶ ಬಲ್ಲಿದವ್, ನಾಗರಾಜ ಅಕ್ಕರಿಕಿ, ಶಿವಶಂಕರ ವಕೀಲ, ಎಚ್. ಶಿವರಾಜ, ನೂರಮಹ್ಮದ್ ಮಸರಕಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT