ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಮಾಹಿತಿ ಕೇಂದ್ರ ಉದ್ಘಾಟನೆ.ಭಾರತೀಯ ಜೀವವಿಮಾ ನಿಗಮ ಶ್ರೇಷ್ಠ ಸಂಸ್ಥೆ.

Last Updated 16 ಫೆಬ್ರುವರಿ 2011, 5:00 IST
ಅಕ್ಷರ ಗಾತ್ರ

ಹಿರಿಯೂರು: ಭಾರತೀಯ ಜೀವ ವಿಮಾ ನಿಗಮ ಸರ್ವಶ್ರೇಷ್ಠ ಆರ್ಥಿಕ ಸಂಸ್ಥೆಯಾಗಿದ್ದು, ` 11,52,000 ಕೋಟಿ ಆಸ್ತಿ ಹೊಂದಿದೆ ಎಂದು ಹಿರಿಯ ಶಾಖಾಧಿಕಾರಿ ಎನ್. ಕಮಲ್‌ರಾಜ್ ಹೇಳಿದರು.ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಮಂಗಳವಾರ ಭಾರತೀಯ ಜೀವ ವಿಮಾ ನಿಗಮದ ಲೈಫ್ ಪ್ಲಸ್ ಕಂತು ಪಾವತಿ ಹಾಗೂ ಮಾಹಿತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ನಿಗಮವು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಅಪರಿಮಿತ ಕೊಡುಗೆ ನೀಡುತ್ತಾ ಬಂದಿದ್ದು, ಕಳೆದ ಮಾರ್ಚ್ ಅಂತ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭದ್ರತಾ ಠೇವಣಿಯಲ್ಲಿ  ` 5,01,611 ಕೋಟಿ ಹೂಡಿದೆ. ವಿವಿಧ ಪಂಚವಾರ್ಷಿಕ ಯೋಜನೆಗಳಲ್ಲಿ ಇದುವರೆಗೆ ಹೂಡಿರುವ ಮೊತ್ತ ` 8,65,365 ಕೋಟಿ ಆಗಿದೆ. ಸರಕಾರಿ ತೆರಿಗೆಯನ್ನು ನೀಡುವ ಸಂಸ್ಥೆಗಳಲ್ಲಿ ನಿಗಮ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು.

ಗ್ರಾಹಕರು ಈಗ ಆರಂಭಿಸಿರುವ ಕೇಂದ್ರದಲ್ಲಿ ಕಂತು ತುಂಬುವ ಜತೆಗೆ ತಮ್ಮ ಪಾಲಿಸಿಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ಪಡೆಯಬಹುದು ಎಂದು ಕಮಲ್‌ರಾಜ್ ತಿಳಿಸಿದರು.ನಾಗರಾಜ ನಾಯ್ಕ, ರಂಗಮ್ಮ, ಎಚ್.ಎನ್. ವೆಂಕಟೇಶ್, ಎಂ.ಬಿ. ತಿಪ್ಪೇಸ್ವಾಮಿ, ಕೆ. ಕೃಷ್ಣನಾಯ್ಕ, ಪಿ. ಶೇಷಾದ್ರಿ, ಮಮತಾ, ಇಂದಿರಾ, ಗಿರ್ವಾಣಿ ಮತ್ತಿತರರು ಕಾರ್ಯಕ್ರಮದಲ್ಲಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT