ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದಿಷ್ಟು ವಿಶೇಷಗಳು...

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರಿನ ವಿಜಯದಶಮಿಯು ವಿಶ್ವಪ್ರಸಿದ್ಧವಾಗಲು ಜಂಬೂ ಸವಾರಿಯ ಜೊತೆಗೆ ಇನ್ನೂ ಹಲವು ಕಾರಣಗಳಿವೆ. ಇಲ್ಲಿ ರಾಜಮಹಾರಾಜರ ಕಾಲದಿಂದಲೂ ನಡೆದುಕೊಂಡು ಬಂದ ಕ್ರೀಡೆಗಳು, ಕುಸ್ತಿಗಳು, ಸಾಹಸ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೂ ಈ ಪ್ರಸಿದ್ಧಿಗೆ ಕಾರಣ.

ಕ್ರೀಡಾಕೂಟವನ್ನೇ ತೆಗೆದುಕೊಂಡರೆ ಇಲ್ಲಿ ಮೂರು ವಿಭಾಗಗಳಲ್ಲಿ ದಸರಾ ಕ್ರೀಡಾ ಜಾತ್ರೆ ನಡೆಯುತ್ತದೆ. ಒಂದು ದಸರಾ ಕ್ರೀಡಾಕೂಟ. ಇನ್ನೊಂದು ದಸರಾ ಕುಸ್ತಿ ಪಂದ್ಯಾವಳಿ, ಮತ್ತೊಂದು ಸಾಹಸ ಕ್ರೀಡೆಗಳು.

ಅಥ್ಲೆಟಿಕ್ಸ್, ಈಜು, ವೇಟ್‌ಲಿಫ್ಟಿಂಗ್, ದೇಹದಾರ್ಢ್ಯ, ಹಾಕಿ, ಜಿಮ್ನಾಸ್ಟಿಕ್ಸ್, ಹಾಫ್ ಮ್ಯಾರಥಾನ್ ಸ್ಪರ್ಧೆಗಳನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು ನಡೆಸುತ್ತದೆ.

ಈ ಬಾರಿ ಹಾಫ್   ಮ್ಯಾರಥಾನ್‌ಗೆ ಲೈಫ್ ಈಸ್ ಕಾಲಿಂಗ್ ಸ್ಪೋರ್ಟ್ಸ್ ಸಂಸ್ಥೆಯು ಪ್ರಾಯೋಜಕತ್ವ ನೀಡಿತ್ತು. ಇದಕ್ಕೆ ಉತ್ತಮ ಸ್ಪಂದನೆಯೂ ಸಿಕ್ಕಿತ್ತು. ಜೊತೆಗೆ ಸಾಂಪ್ರದಾಯಿಕ ಆಟಗಳನ್ನೂ ಸೇರ್ಪಡೆ ಮಾಡಲಾಗಿತ್ತು.

ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ(ಜೇತನಾ)  ಮಾರ್ಗದರ್ಶನದಲ್ಲಿ ಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತದೆ. ಅದರಲ್ಲಿ ಸೈಕ್ಲಿಂಗ್, ಡರ್ಟ್ ಟ್ರ್ಯಾಕ್ ರೇಸ್, ಪ್ಯಾರಾಸೇಲಿಂಗ್, ಗ್ಲೈಡಿಂಗ್, ಸೈಕಲ್ ಪೋಲೊ, ಜಲಸಾಹಸ ಕ್ರೀಡೆಗಳು ಮತ್ತಿತರ ಆಟಗಳನ್ನು ಸೇರಿಸಲಾಗಿದೆ.

ಇನ್ನು ದಸರಾ ಕುಸ್ತಿ ಉಪಸಮಿತಿಯ ಆಶ್ರಯದಲ್ಲಿ ನಾಡಕುಸ್ತಿ ಮತ್ತು ಪಾಯಿಂಟ್ ಕುಸ್ತಿಗಳೆರಡೂ ನಡೆಯುತ್ತವೆ. ಇದರಲ್ಲಿ ನಡೆಯುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಪಾಯಿಂಟ್ ಕುಸ್ತಿಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪಂದ್ಯಾವಳಿ ನಡೆಯುತ್ತವೆ.

ಪರಂಪರಾಗತವಾದ ನಾಡಕುಸ್ತಿಯೂ ನಡೆಯುತ್ತದೆ. ಇವೆರಡಕ್ಕೂ ಉತ್ತಮ ಸ್ಪಂದನೆಯೂ ಸಿಕ್ಕಿದೆ. ಈ ಎಲ್ಲ ಕ್ರೀಡೆಗಳನ್ನು ಪ್ರತ್ಯೇಕವಾಗಿಯೇ ನಡೆಸಿದರೂ, ಕೆಓಎದ ಮಾನ್ಯತೆಯ ಚೌಕಟ್ಟಿನಲ್ಲಿ ತರುವ ಅಗತ್ಯವೂ ಇದೆ.

ಇದರಿಂದ ಈ ಎಲ್ಲ ಆಟಗಳಲ್ಲಿ ಪ್ರತಿವರ್ಷವೂ ಭಾಗವಹಿಸುವ ಸುಮಾರು 4000 ಆಟಗಾರರ ಭವಿಷ್ಯ ರೂಪಿಸಲು ಭವ್ಯ ವೇದಿಕೆ ನಿರ್ಮಿಸಿದಂತಾಗುತ್ತದೆ.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT