ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಥ್ರೂ ವಿಮಾನ ನಿಲ್ದಾಣದಲ್ಲಿ ಯೋಗ ಗುರು ಬಾಬಾ ರಾಮದೇವ್ ಗೆ ದಿಗ್ಬಂಧನ - ಬಿಡುಗಡೆ

Last Updated 21 ಸೆಪ್ಟೆಂಬರ್ 2013, 8:28 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್ಎಸ್): ಲಂಡನ್ ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ಕಸ್ಟಮ್ಸ್ ಅಧಿಕಾರಿಗಳಿಂದ ಎಂಟು ಗಂಟೆಗಳ ಕಾಲ ಸ್ಥಾನಬದ್ಧತೆಗೆ ಒಳಗಾದ ಯೋಗಗುರು ಬಾಬಾ ರಾಮದೇವ್ ಅವರನ್ನು ಶನಿವಾರ ಬಿಡುಗಡೆ ಮಾಡಲಾಯಿತು.

'ಯಾವ ಪ್ರಶ್ನೆಯನ್ನೂ ಅವರ ಬಳಿ ಕೇಳಲಿಲ್ಲ ಅಥವಾ ಅವರ ಸರಕುಗಳನ್ನೂ ತಪಾಸಣೆ ಮಾಡಲಿಲ್ಲ' ಎಂದು ರಾಮದೇವ್ ಅವರ ವಕ್ತಾರ ಎಸ್.ಕೆ. ತೇಜರಿವಾಲಾ ಹೇಳಿದರು. 'ಸ್ವಾಮೀಜಿ ಅಲ್ಲಿ ಕಿರಿಕಿರಿ ಅನುಭವಿಸಿದರು' ಎಂದು ವಕ್ತಾರ ನುಡಿದರು.

ವ್ಯವಹಾರ ವೀಸಾ ಬದಲು ಸಂದರ್ಶಕ ವೀಸಾದಲ್ಲಿ ಬ್ರಿಟನ್ ಗೆ ಪ್ರಯಾಣ ಮಾಡಿದ್ದ ರಾಮದೇವ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಪ್ರಶ್ನಿಸಿದರು ಎಂದು ಹೇಳಲಾಗಿತ್ತು. ತಮ್ಮ ಜೊತೆಗೆ ಅವರು ಒಯ್ದಿದ್ದ ಕೆಲವು ಔಷಧಗಳ ಬಗೆಗೂ ರಾಮದೇವ್ ಬಳಿ ಪ್ರಶ್ನಿಸಲಾಯಿತು ಎಂದು ವರದಿಯಾಗಿತ್ತು.

'ಜೀವಮಾನದಲ್ಲೇ ಏನೂ ತಪ್ಪು ಮಾಡದ ತಮ್ಮನ್ನು ಸ್ಥಾನಬದ್ಧತೆಯಲ್ಲಿ ಇಟ್ಟಿರುವುದೇಕೆ ಎಂಬುದಾಗಿ ಅವರು (ರಾಮದೇವ್) ಹಲವಾರು ಬಾರಿ ವಲಸೆ ಅಧಿಕಾರಿಗಳನ್ನು ಕೇಳಿದರು. ಆದರೆ ಅಧಿಕಾರಿಗಳು ತುಟಿ ಬಿಚ್ಚಲಿಲ್ಲ, ಯಾವುದೇ ಉತ್ತರವನ್ನೂ ನೀಡಲಿಲ್ಲ' ಎಂದು ತೇಜರವಾಲಾ ನುಡಿದರು.

'ಸ್ವಾಮೀಜಿ ಕೇವಲ ನಾಲ್ಕು ಜೊತೆ ಬಟ್ಟೆಯನ್ನು ಮತ್ತು ತಮ್ಮ ಚಳವಳಿ ಹಾಗೂ ಚಲನವಲನಗಳಿಗೆ ಸಂಬಂಧಿಸಿದ ವಿವರಗಳು, ಸಂಸ್ಕೃತ ಮತ್ತು ಹಿಂದಿಯಲ್ಲಿ ಬರೆಯಲಾಗಿದ್ದ ವೇದ ಮಂತ್ರಗಳಿದ್ದ ದಿನಚರಿ ಪುಸ್ತಕವನ್ನು ಮಾತ್ರ ಇಟ್ಟುಕೊಂಡಿದ್ದರು' ಎಂದು ಅವರು ಹೇಳಿದರು.

'ಈ ಘಟನೆ 125 ಕೋಟಿ ಭಾರತೀಯರ ಸ್ವಾಭಿಮಾನ ಮತ್ತು ಪ್ರತಿಷ್ಠೆಗೆ ಮಾಡಿದ ಅಪಮಾನ. ಸ್ವಾಮೀಜಿ ಕಳೆದ ಏಳು ವರ್ಷಗಳಿಂದ ಹಲವಾರು ಬಾರಿ ಇಂಗ್ಲೆಂಡ್ ಗೆ ಭೇಟಿ ನೀಡಿ ಹಲವಾರು ಯೋಗ ಶಿಬಿರಗಳನ್ನು ನಡೆಸಿದ್ದಾರೆ' ಎಂದು ತೇಜರವಾಲಾ ಹೇಳಿಕೆಯಲ್ಲಿ ತಿಳಿಸಿದರು.

ಸ್ವಾಮಿ ವಿವೇಕಾನಂದ ಅವರ 120ನೇ ಜನ್ಮದಿನೋತ್ಸವ ಅಂಗವಾಗಿ ಪತಂಜಲಿ ಯೋಗಪೀಠವು ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಮದೇವ್ ಅವರು ಮುಂಬೈಯಿಂದ ಲಂಡನ್ ಗೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT