ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಗ್ಗೇನಹಳ್ಳಿ: ಕಾಡಾನೆ ಕಂಡು ಗ್ರಾಮಸ್ಥರು ಆತಂಕ

Last Updated 3 ಏಪ್ರಿಲ್ 2013, 9:31 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿಯ ಗಡಿ ಗ್ರಾಮವಾದ ಹುಗ್ಗೇನಹಳ್ಳಿ ಬಳಿಯ ಗೊರಟಿಕೆರೆಯಲ್ಲಿ ಮಂಗಳ ವಾರ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು, ಸುತ್ತ ಮುತ್ತಲ ಗ್ರಾಮಸ್ಥರಲ್ಲಿ ಭೀತಿ ಮೂಡಿದೆ.

ಎರಡು ದಿನಗಳ ಹಿಂದೆ ಈ ಆನೆಗಳು ಅರಸೀಕೆರೆ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದವು. ಚನ್ನರಾಯ ಪಟ್ಟಣ ತಾಲ್ಲೂಕಿನ ವಳಗೇರಹಳ್ಳಿಯಲ್ಲಿದ್ದ ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ಸೋಮವಾರ ಸಂಜೆ ಬೆದರಿಸೊ ಓಡಿಸಿದ್ದರಿಂದ ರಾತ್ರಿ ವೇಳೆಗೆ ಹೋಬಳಿಯ ಕಬ್ಬಳಿ, ಮಂಡಕ್ಕನಹಳ್ಳಿ, ಕೆ.ಕಾಮಘಟ್ಟದ ಮೂಲಕ ತುರುವೇಕೆರೆ ತಾಲ್ಲೂಕಿನ ಬೇವಿನಹಳ್ಳಿ, ಬಿಗನೇನಹಳ್ಳಿ ತಲುಪಿವೆ. ನಂತರ ಹಿಂದಿರುಗಿರುವ ಈ ಕಾಡಾನೆಗಳು ಮಂಗಳವಾರ ಬೆಳಿಗ್ಗೆ ಹುಗ್ಗೇನಹಳ್ಳಿ ಜಮೀನಿನಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿ ಮೂಡಿಸಿವೆ.

ಜನರ ಕೂಗಾಟಕ್ಕೆ ಬೆದರಿದ ಆನೆಗಳು ಪಕ್ಕದಲ್ಲಿರುವ ಗೊರಟಿ ಕೆರೆಯೊಳಗೆ ಇಳಿದಿವೆ. ಸುತ್ತಮುತ್ತಲ ಗ್ರಾಮಗಳ ಜನರು ಕೆರೆಯ ಸುತ್ತ ಬೆಂಕಿ ಹೊತ್ತಿಸಿ ಆನೆಗಳು ಕೆರೆಯಿಂದ ಹೊರಗೆ ಬರದಂತೆ ಮಾಡಿದ್ದಾರೆ. ಈ ಗ್ರಾಮವು ಹಾಸನ ಜಿಲ್ಲೆ ಮತ್ತು ತುಮಕೂರು ಜಿಲ್ಲೆಗಳ ಗಡಿಯಲ್ಲಿದೆ. ಚನ್ನರಾಯಪಟ್ಟಣ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕು ಅರಣ್ಯ ಸಿಬ್ಬಂದಿ ಹಾಗೂ ತುರುವೇಕೆರೆ ಮತ್ತು ಹಿರೀಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ಈ ಕಾಡಾನೆಗಳು ಬನ್ನೇರುಘಟ್ಟ ಮೀಸಲು ಅರಣ್ಯದಿಂದ ದಾರಿ ತಪ್ಪಿ ಬಂದಿವೆ, ಎರಡು ತಾಲ್ಲೂಕಿನ ಅರಣ್ಯ ಸಿಬ್ಬಂದಿ ಒಟ್ಟಾಗಿ ಕಾರ್ಯಾಚರಣೆ ಕೈಗೊಂಡು ಆನೆಗಳನ್ನು ಓಡಿಸುವರು ಎಂದು ಚನ್ನರಾಯಪಟ್ಟಣ ವಲಯ ಅರಣ್ಯಾಧಿಕಾರಿ ಎ.ಈ.ಧರ್ಮಪ್ಪ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT