ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: ಮಾರುಕಟ್ಟೆಗೆ ಬಂದ ಸೇಬು, ದಾಳಿಂಬೆ

Last Updated 5 ಸೆಪ್ಟೆಂಬರ್ 2013, 6:29 IST
ಅಕ್ಷರ ಗಾತ್ರ

ಹುಣಸಗಿ: ಸಿರಿವಂತರು ಮಾತ್ರ ಹೆಚ್ಚು ಬಳಸುತ್ತಾರೆ ಎಂದು ಕರೆಯಲಾಗುತ್ತಿರುವ ಸೇಬು, ಈಗ ಸಾಮಾನ್ಯ ಜನರಿಗೂ ಕೈಗೆಟಕುವ ಬೆಲೆಗೆ ಹುಣಸಗಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಇದರಿಂದಾಗಿ ಹುಣಸಗಿ ಪಟ್ಟಣದಲ್ಲಿ ಸೇಬು ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆದಿದೆ.

ಒಂದು ವಾರದಿಂದ ತರತರಹದ ಸೇಬು ಹಣ್ಣುಗಳು ಹುಣಸಗಿಗೆ ಬಂದಿದ್ದು, ಕೇವಲ ರೂ. 5 ರಿಂದ 10 ಕ್ಕೆ ಒಂದರಂತೆ ಸಿಗುತ್ತಿದೆ. ಇದರಿಂದಾಗಿ ಕೂಲಿ, ಕೃಷಿ ಕಾರ್ಮಿಕರು ಸಹ ತಮ್ಮ ಮಕ್ಕಳಿಗೆ ಸೇಬು ತೆಗೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ.

ದಿನಸಿ, ತರಕಾರಿ, ಹಾಲು ಸೇರಿದಂತೆ ಇತರ ಹಣ್ಣುಗಳ ಬೆಲೆ ಗಗನಕ್ಕೇರಿದೆ. ರೂ.200 ತೆಗೆದುಕೊಂಡು ಸಂತೆಗೆ ಹೋದರೆ ಸಣ್ಣ ಬ್ಯಾಗ್‌ನಲ್ಲಿ ತರಕಾರಿ ತರುವಂತಾಗಿದೆ. ಆದರೆ ಸೇಬು ಕಡಿಮೆ ಬೆಲೆಗೆ ಸಿಗುತ್ತಿದ್ದು, ಅವುಗಳನ್ನೇ ತೆಗೆದುಕೊಳ್ಳುತ್ತಿದ್ದೇನೆ ಎಂದು ಗ್ರಾಹಕ ನೀಲಕಂಠ ಹೊನಕಲ್ಲ ಹೇಳುತ್ತಾರೆ.

ಮೊದಲು ರೂ. 40 ರಿಂದ 50 ಕ್ಕೆ ಒಂದರಂತೆ ಮಾರಿರುತ್ತಿದ್ದರು. ಆದರ ಈಗ ಮಾರುಕಟ್ಟೆಯಲ್ಲಿ ನಮಗೂ ಕಡಿಮಿ ರೇಟ್‌ಗ ಸಿಗಲಿಕತ್ತಾವರೀ. ಅದಕ್ಕ ನಾವು ಕಡಿಮೆ ದರಕ್ಕೆ ಕೊಡುತ್ತೇವೆ ಎಂದು ಹಣ್ಣಿನ ವ್ಯಾಪಾರಿಗಳಾದ ಹನುಮಂತ ಮತ್ತು ಶಾಂತಮ್ಮ ತಿಳಿಸಿದರು. ಕಾಶ್ಮೀರದಿಂದ ಬರುವ ಹಣ್ಣು ಹುಣಸಗಿಗೆ ಬಾಗಲಕೊಟೆ, ಬೆಳಗಾವಿ, ವಿಜಾಪುರದಿಂದ ಸರಬರಾಜು ಆಗುತ್ತಿದೆ. ಬೆಲೆ ಏರಿಕೆಯ ಮಧ್ಯೆಯೂ ಕಡಿಮೆ ಬೆಲೆಗೆ ಸೇಬು ಸಿಗುತ್ತಿದ್ದರಿಂದ ನಿತ್ಯ ಗ್ರಾಹಕರ ಬಾಯಿ ಮಾತ್ರ ಸಿಹಿಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT