ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುನಗುಂದ: ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳು

Last Updated 18 ಏಪ್ರಿಲ್ 2013, 12:48 IST
ಅಕ್ಷರ ಗಾತ್ರ

ಹುನಗುಂದ(ಅಮೀನಗಡ): ಮೇ 5ರಂದು ನಡೆಯುವ ವಿಧಾನಸಭೆ ಚುನಾವಣಾ ಅಖಾಡಕ್ಕೆ ಧುಮುಕಲು ಕೊನೆಯ ದಿನವಾದ ಬುಧವಾರ ಹುನ ಗುಂದ ಮತಕ್ಷೇತ್ರದಲ್ಲಿ ಆಯ್ಕೆ ಬಯಸಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿ 10 ಜನ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು.

ಕಳೆದ ಸೋಮವಾರ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ ಬುಧವಾರ ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ ಮತ್ತೇ ಎರಡು ನಾಮಪತ್ರ ಸಲ್ಲಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಅಬ್ದುಲ್‌ಜಬ್ಬಾರ ಕಲಬುರ್ಗಿ ಆಝಾದ ನಗರದಿಂದ ಮೆರವಣಿಗೆ ಆರಂಭಿಸಿ, ಹಳೆ ತಹಶೀಲ್ದಾರ್ ಕಚೇರಿ, ಮಾರ್ಕೆಟ್ ರಸ್ತೆ, ವಿಜಯ ಮಹಾಂತೇಶ ವೃತ್ತ, ಬಸ್‌ನಿಲ್ದಾಣ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ತಲುಪಿ ನಾಮಪತ್ರ ಸಲ್ಲಿಸಿದರು.

ಜೆಡಿಎಸ್ ಮುಖಂಡರಾದ ನಾಗರಾಜ  ಹೊಂಗಲ್, ಶಿವಪ್ರಸಾದ ಗದ್ದಿ, ಅಬ್ದುಲ್ ರಜಾಕ್ ರೇಶ್ಮಿ, ಆಯಿಶಾ ಅಬ್ದುಲ್‌ಜಬ್ಬಾರ್ ಕಲಬುರ್ಗಿ, ಉಮೇಶ ಶಿರೂರ, ಸಂಗಮೇಶ ಭಾವಿಕಟ್ಟಿ, ಶಿವು ಶಿರಗುಂಪಿ, ಮೈಬೂಬ ಸರಕಾವಸ, ಕಾಶೀಂ ಚೌವಣಿ, ಮುತ್ತು ಚಳಗೇರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ನಗರದ ಬಸವ ಮಂಟಪದಿಂದ ಆರಂಭಗೊಂದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಸಂಗಣ್ಣ ಎಚ್. ಗೌಡರ ಅವರ ಮೆರವಣಿಗೆ ವಿಜಯಮಹಾಂತೇಶ ವೃತ್ತ, ಬಸ್‌ನಿಲ್ದಾಣ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ತಲುಪಿ ನಾಮಪತ್ರ ಸಲ್ಲಿಸಿದರು. ಪಕ್ಷದ ಮುಖಂಡರಾದ ಅಶೋಕ ನಾಲತವಾಡ, ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಸೌಭಾಗ್ಯ ಬನ್ನಿ, ಡಿ.ಬಿ. ವಿಜಯಶಂಕರ, ನಾರಾಯಣಪ್ಪ ಮಿಣಜಗಿ, ಮಲ್ಲಯ್ಯ ಹಿರೇಮಠ, ವಿರೇಶ ಬಾದವಾಡಗಿ, ರಾಮಣ್ಣ ಕತ್ತಿ ಮತ್ತಿತರರು ಪಾಲ್ಗೊಂಡಿದ್ದರು.

ಪುಳಜಾಪೂರದ ಸಂಗಪ್ಪ ಯಮನಪ್ಪ ಚಲವಾದಿ (ಪಕ್ಷೇತರ), ಹುನಗುಂದದ ಅಮರೇಶಪ್ಪ ಮಲ್ಲೇಶಪ್ಪ ನಾಗೂರ (ಜೆಡಿಯು), ಖಾಜೇಸಾಬ ಶಾಮಿದ್‌ಸಾಬ ಮೇಕಮಂಗಲಿ (ಪಕ್ಷೇತರ), ಸೂಳೇಭಾವಿಯ ಕೃಷ್ಣಗೌಡ ವೆಂಕಣಗೌಡ ಹಲಗತ್ತಿ (ಕೆಜೆಪಿ), ಹುನಗುಂದದ ಶರಣಬಸಪ್ಪ ಮಹಾಂತಪ್ಪ ಮೆಟೆಕಟಿ (ಪಕ್ಷೇತರ), ಇಳಕಲ್ಲದ ಖಾಜೇಸಾಬ ಹುಸೇನಸಾಬ ಸೈಂ (ಬಿಎಸ್‌ಪಿ) ಬುಧವಾರ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT