ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುನಗುಂದ ತಾಲ್ಲೂಕು ಸಮಗ್ರ ನೀರಾವರಿಗೆ ಸಂಕಲ್ಪ: ಕಾಶಪ್ಪನವರ

Last Updated 16 ಸೆಪ್ಟೆಂಬರ್ 2013, 9:05 IST
ಅಕ್ಷರ ಗಾತ್ರ

ಹುನಗುಂದ:’ ಬಹು ವರ್ಷಗಳಿಂದ ತಾಲ್ಲೂಕು ನೀರಾವರಿ ವಂಚಿತ­ವಾಗಿದೆ. ಸದ್ಯ ಮಂಜೂರಾದ ಕೊಪ್ಪಳ ಮತ್ತು ನಂದವಾಡಗಿ ನೀರಾವರಿ ಯೋಜನೆಗಳಿಂದ ತಾಲ್ಲೂಕು ಸಮಗ್ರ ನೀರಾವರಿ  ಪ್ರದೇಶವಾಗಲಿದೆ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

  ಲಕ್ಷ್ಮಿ ವೆಂಕಟೇಶ್ವರ ಮಂಗಲಭವನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ತಮ್ಮ ಸರ್ಕಾರ ಕೃಷ್ಣಾ ಕೊಳ್ಳದ ನೀರು ಬಳಕೆಗೆ ಮುಂದಾಗಿ ವರ್ಷಕ್ಕೆ ಒಂದು ಸಾವಿರ ಕೋಟಿ ಅನುದಾನ ಕೊಡಲಿದೆ. ಈ ಸಂಬಂಧ ಕಾರ್ಯ ಪ್ರಗತಿಯಲ್ಲಿದೆ. ವಿವಿಧ ಯೋಜನೆಗಳ ಬಡವರ ಮನೆ ಮತ್ತು ನಿವೇಶನ ವಿಷಯದಲ್ಲಿ ಬಿಜೆಪಿ ಕೊಡುವ ತಪ್ಪು ಮಾಹಿತಿಗಳಿಗೆ ಜನರು ಕಿವಿಗೊಡಬಾರದು ಎಂದರು.

  ಬ್ಲಾಕ್ ಅಧ್ಯಕ್ಷ ಸಿದ್ದಪ್ಪ ಹೊಸೂರ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ಅವಾರಿ, ಎಂ.ಎಲ್. ಶಾಂತಗೇರಿ, ರಹೆಮಾನ್ ದೊಡಮನಿ, ಮಹಾಂತೇಶ ಹಳ್ಳೂರ ಮತ್ತು ವಸಂತ ದೇಶಪಾಂಡೆ ಮಾತನಾಡಿದರು.  ಜಿಪಂ ಸದಸ್ಯ ಮಹಾಂತೇಶ ನರಗುಂದ, ಬಸವರಾಜ ಅಂಗಡಿ, ಶೇಖರಪ್ಪ ಬಾದ­ವಾಡಗಿ, ಗಂಗಣ್ಣ ಬಾಗೇವಾಡಿ, ಶಂಕ್ರಪ್ಪ ನೇಗಲಿ, ಶಂಕ್ರಣ್ಣ ಕೋರಿ, ಚಂದಪ್ಪ ಕಡಿವಾಲ, ಭೀಮರಾವ ಬಿರಾದಾರ, ಎಂ.ಆರ್. ಕಾಶಪ್ಪನವರ, ಗಂಗಾ­ಧರ ದೊಡಮನಿ, ಎ.ಕೆ. ಉಪನಾಳ, ಶಿವಾನಂದ ಕಂಠಿ, ಅಪ್ಪಾಜಿ ನಾಡಗೌಡ, ಗುರನಗೌಡ ಪಾಟೀಲ, ದಾನಮ್ಮ ಹಾದಿಮನಿ, ಮುದಿಗೌಡ ಮೇಟಿ ಉಪಸ್ಥಿತರಿದ್ದರು.

ಸತ್ಕಾರ: ಇದೇ ಸಂದರ್ಭದಲ್ಲಿ ಇಳಕಲ್ ನಗರಸಭೆ ಅಧ್ಯಕ್ಷ ದೇವಾನಂದ ಕಾಶಪ್ಪನವರ, ಹುನಗುಂದ ಪಪಂ ಅಧ್ಯಕ್ಷ ರಾಜಕುಮಾರ ಬಾದವಾಡಗಿ ಮತ್ತು ಉಪಾಧ್ಯಕ್ಷೆ ನಿಂಗವ್ವ ಮುಕ್ಕಣ್ಣವರ ಅವರನ್ನು ಸತ್ಕರಿಸಲಾಯಿತು. ಸೇರ್ಪಡೆ: ಇಳಕಲ್ ನಗರಸಭೆ ಸದಸ್ಯರಾದ ಮಹಾಂತೇಶ ಹನಮನಾಳ ಮತ್ತು ಕಮಲಾಬಾಯಿ ಅರವಾ ಕಾಂಗ್ರೆಸ್ ಪಕ್ಷ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT