ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ ಕಿತ್ತೂರು ಚನ್ನಮ್ಮ ವಸತಿ ಶಾಲೆ

Last Updated 11 ಫೆಬ್ರುವರಿ 2012, 5:45 IST
ಅಕ್ಷರ ಗಾತ್ರ

ಹುಮನಾಬಾದ್: ಮೂಲ ಸೌಕರ್ಯ ಕೊರತೆ ಕಾರಣ ಕಿತ್ತೂರು ಚೆನ್ನಮ್ಮ ವಸತಿಶಾಲೆ ವಿದ್ಯಾರ್ಥಿಗಳು ಆರಂಭದಿಂದಲೂ ಪರದಾಡುತ್ತಿದ್ದಾರೆ.

2008- 09ನೇ ಸಾಲಿನಲ್ಲಿ ಆರಂಭಗೊಂಡ ಕಿತ್ತೂರಚೆನ್ಮಮ್ಮ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಡೆಸ್ಕ್, ಮಲಗುವುದಕ್ಕೆ ಕಾಟ್ ಮತ್ತು ಪುಸ್ತಕ, ಬಟ್ಟೆ ಮೊದಲಾದ ಸಾಮಗ್ರಿ ಇಟ್ಟುಕೊಳ್ಳಲು ಸೂಕ್ತ ಭದ್ರತೆ ಇಲ್ಲ.

ಈ ಎಲ್ಲದರ ಜೊತೆಗೆ ಕಟ್ಟಡ ಮೇಲಿಂದ ಸ್ಥಳಾಂತರಗೊಳ್ಳುವ ಕಾರಣ ವಿದ್ಯಾರ್ಥಿಗಳ ಅಭ್ಯಾಸಕ್ಕೂ ತೊಂದರೆ ಆಗುತ್ತಿದೆ. ಕಳೆದ ಒಂದು ತಿಂಗಳ ಹಿಂದಿನವರೆಗೂ ಸ್ವಂತ ಕಟ್ಟಡ ದೂರದ ಮಾತು . ಉತ್ತಮವಾದ ಬಾಡಿಗೆ ಕಟ್ಟಡ ಇಲ್ಲದ ಕಾರಣ ಆಗಾಗ ಕಟ್ಟಡ ಸ್ಥಳಾಂತರ ಆಗುತ್ತಿರುವ ಕಾರಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಗಂಭೀರವಾದ ಆರೋಪ ಪಾಲಕ ವರ್ಗದಿಂದ ಕೇಳಿಬರುತ್ತಿದೆ.

ಒಟ್ಟು 150 ಜನ ವಿದ್ಯಾರ್ಥಿನಿಯರನ್ನು ಹೊಂದಿರುವ ವಸತಿಶಾಲೆಯ ವಾಸ್ತವ ಸ್ಥಿತಿ ವೀಕ್ಷಿಸಲು ಈಚೆಗೆ `ಪ್ರಜಾವಾಣಿ~ ಪ್ರತಿನಿಧಿ ಭೇಟಿ ನೀಡಿದಾಗ ಜೂನ್, ಜುಲೈ ತಿಂಗಳಲ್ಲಿ ಮಕ್ಕಳಿಗೆ ವಿತರಿಸಬೇಕಿದ್ದ ಬೂಟು, ಸಾಕ್ಸ್, ಬೆಲ್ಟ್ ಮತ್ತು ಟೈ ಈವರೆಗೂ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂತು. ಈವರೆಗೆ ಹೇಳಿದ್ದು ಮಕ್ಕಳ ಕಥೆ ಆದರೇ ಸಿಬ್ಬಂದಿ ಕಥೆ ಕೂಡಾ ಅವರಿಗೆ ಭಿನ್ನವಿಲ್ಲ.

ಇಲ್ಲಿ ಸೇವೆ ಸಲ್ಲಿಸುವ ಪ್ರಾಚಾರ್ಯರರು ಸೇರಿದಂತೆ ಶೇ. 60ಪ್ರತಿಶತ ಸಿಬ್ಬಂದಿಗೆ ಕಳೆದ ಹಲವು ತಿಂಗಳಿಂದ ಸಂಬಳ ನೀಡದಿರುವ ವಿಷಯ ಬೆಳಕಿಗೆ ಬಂತು. ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಗೆ ಸರ್ಕಾರವೇ ಹಣವನ್ನು ಬಿಡುಗಡೆ ಮಾಡದಿದ್ದರೇ ಈ ಸಮಸ್ಯೆ ಉದ್ಭವ ಆಗುತ್ತಿರ್ಲ್ಲಲಿಲ್ಲ.

ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ಸೇರಿದಂತೆ ಇಡೀ ಸಿಬ್ಬಂದಿಗೆ ಪ್ರತಿಂಗಳು ಸಕಾಲಕ್ಕೆ ಸಂಬಳ ಸಂದಾಯ ಆಗುತ್ತದೆ. ಸಂಬಳ ನೀಡದಿರುವ ಕುರಿತು ತಾಲ್ಲೂಕು ಅಧಿಕಾರಿ ಅವರನ್ನು ವಿಚಾರಿಸಿದಾಗ ಹಣದ ಕೊರತೆ ನೆಪ ಹೇಳಿ ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಕಿತ್ತೂರು ಚೆನ್ನಮ್ಮ ವಸತಿಶಾಲೆಯ ಪ್ರಾಚಾರ್ಯರು ವಿಸ್ತೃತವಾಗಿ ವಿವರಿಸಿದರು.

ಕಳೆದ ಎರಡು ತಿಂಗಳ ಹಿಂದೆ ವಿಷಪೂರಿತ ಆಹಾರ ಸೇವಿಸಿ, ಮಕ್ಕಳ ಅಸ್ವಸ್ಥಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಬಲ್ಲ ಮೂಲಗಳ ಪ್ರಕಾರ ಈ ಅವ್ಯವಸ್ಥೆ ಕೇವಲ ಕಿತ್ತೂರು ಚೆನ್ನಮ್ಮ ಮಾತ್ರ ತಾಲ್ಲೂಕಿನಲ್ಲಿ ಇರುವ ಮುರಾರ್ಜಿ ದೇಸಾಯಿ ಮೊದಲಾದ ವಸತಿಶಾಲೆಗಳ ಸ್ಥಿತಿಯೂ ಇದಕ್ಕೆ ಭಿನ್ನವಿಲ್ಲ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈಗ ವಸತಿಶಾಲೆ ಬಾಡಿಗೆ ಕಟ್ಟದಿಂದ ಸ್ಥಳಾಂತರಗೊಂಡು ಒಂದುವರೆ ತಿಂಗಳು ಗತಿಸಿದರೂ ಕಟ್ಟಡದ ಮೇಲೆ ಕಿತ್ತೂರು ಚೆನ್ನಮ್ಮ ವಸತಿ ಶಾಲೆಗೆ ಸಂಬಂಧಿಸಿದ ನಾಮಫಲಕ ಬರೆಸಿಲ್ಲ.

ಈ ಎಲ್ಲ ಕುರಿತು ತಾಲ್ಲೂಕು ಅಧಿಕಾರಿ ಅವರನ್ನು ವಿಚಾರಿಸಿದಾಗ ಅವರು ಹೇಳುವುದೇ ಬೇರೆ ಸಂಬಳ ಕಾರಣಾಂತರ ಎರಡು ತಿಂಗಳ ಸಂಬಳ ವಿಳಂಬ ಆಗಿದೆ. ಅದನ್ನು ಶೀಘ್ರದಲ್ಲೇ ನೀಡಲಾಗುವುದು. ಇನ್ನೂ ಡೆಸ್ಕ್ ಜಿಲ್ಲೆಯ ಬೇರೆ ತ್ಲ್ಲಾಲೂಕಿನಲ್ಲೂ ಈ ಸಮಸ್ಯೆ ಇದೆ.

ಸೌಕರ್ಯ ಕಲ್ಪಿಸುವುದು ಸರ್ಕಾರದ ಮಟ್ಟದ ಕೆಲಸ, ಬೂಟು, ಸಾಕ್ಸ್, ಟೈ, ಇತ್ಯಾದಿ ಒದಗಿಸುವ ಸಂಬಂಧ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ಪ್ರತಿಕ್ರಿಯಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಹಾಗೂ ಸಿಬ್ಬಂದಿಗೆ ಸಕಾಲಕ್ಕೆ ಸಂಬಳ ವಿತರಿಸುವ ವ್ಯವಸ್ಥೆಗೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಅಂಬೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT