ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್‌ ಬಂದ್‌ ಯಶಸ್ವಿ

Last Updated 25 ಸೆಪ್ಟೆಂಬರ್ 2013, 6:10 IST
ಅಕ್ಷರ ಗಾತ್ರ

ಹುಮನಾಬಾದ್: ಆಂಧ್ರಪ್ರದೇಶದ ಎಂ.ಐ.ಎಂ ಪಕ್ಷದ ಶಾಸಕ ಅಕ್ಬರುದ್ದಿನ್‌ ಓವೈಸಿ ನಗರದಲ್ಲಿ ಅಶಾಂತಿ ಸೃಷ್ಟಿಸುವುದಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಪಟ್ಟಣ ನಾಗರಿಕ ಸಮಿತಿ ವತಿಯಿಂದ ಮಂಗಳವಾರ ಕರೆ ನೀಡಿದ್ದ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು.

ಘಟನೆ ವಿವರ: ಓವೈಸಿ ಗುಲ್ಬರ್ಗದ ಖಾಜಾ ಬಂದೇ ನವಾಜ್‌ ಉರುಸ್‌ ಮುಗಿಸಿ ಹೈದರಾಬಾದ್‌ಗೆ ತೆರುಳುವ ಮಾರ್ಗಮಧ್ಯ ಸೋಮವಾರ ರಾತ್ರಿ ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿಯ ಡಾಬಾದಲ್ಲಿ ಊಟ ಮಾಡುತ್ತಿದ್ದರು. ಅವರು ನಗರಕೆ್ಕ ಆಗಮಿಸಿರುವ ವಿಷಯ ತಿಳಿದ ಪಟ್ಟಣದ ಕೆಲವು ಯುವಕರು ಬೈಕ್‌ ರಾಲಿಯೊಂ ದಿಗೆ ಘೋಷಣೆ ಕೂಗುತ್ತಾ ನಗರದ ಪ್ರವಾಸಿಮಂದಿರದಿಂದ ಶಿವಾಜಿ ವೃತ್ತದ ವರೆಗೆ ಅವರ ಮೆರವಣಿಗೆ ನಡೆಸಿದರು.

ಇದರಿಂದ ಕುಪಿತಗೊಂಡ ನಗರದ ಮತ್ತೊಂದು ಯುವಕರ ಗುಂಪು ಭೀಮರಾವ ಪಾಟೀಲ, ಡಾ.ಸಿದು್ದ ಪಾಟೀಲ ಅವರ ನೇತೃತ್ವದಲಿ್ಲ ಪಟ್ಟಣದ  ಪೊಲೀಸ್‌ ಠಾಣೆಗೆ ತೆರಳಿ, ಓವೈಸಿ ಹಾಗೂ ಅವರನು್ನ ಸಾ್ವಗತಿಸಿದವರ ಬಂಧನಕ್ಕೆ ಒತಾ್ತಯಿಸಿತು. ಘಟನೆ ಖಂಡಿಸಿ ತಡರಾತಿ್ರವರೆಗೆ ಧರಣಿ ನಡೆಸಿ ದರು. ಒತ್ತಡಕೆ್ಕ ಮಣಿದ ಪೊಲೀಸರು ಸೋಮವಾರ ರಾತಿ್ರ 10ಕೂ್ಕ ಹೆಚ್ಚು ಮಂದಿಯನ್ನು ಹಾಗೂ ಎಂಟು ವಾಹನಗಳನ್ನು ತಮ್ಮ ವಶಕೆ್ಕ ಪಡೆದರು.

ಉಳಿದವರ ಬಂಧನಕ್ಕೆ ಒತಾ್ತಯಿಸಿ, ಸೋಮವಾರ ರಾತಿ್ರ ಹುಮನಾಬಾದ್‌ ನಾಗರಿಕ ಸಮಿತಿ ಬಂದ್‌ ಕರೆ ನೀಡಿತು್ತ.
ಬೃಹತ್‌ ರಾ್ಯಲಿ: ಮಂಗಳವಾರ ಮಧಾ್ಯಹ್ನ 12ಕೆ್ಕ ವೀರಭದೆ್ರೇಶ್ವರ ದೇಗಲದಿಂದ ಬಸವೇಶ್ವರ ವೃತ್ತ, ಬಾಲಾಜಿ ವೃತ್ತ, ಸರ್ದಾರ್ ವಲ್ಲಭಭಾಯಿ ಪಟೇಲ ವೃತ್ತದ ಮಾರ್ಗ ವಾಗಿ ಡಾ. ಬಿ.ಆರ್‌. ಅಂಬೇಡ್ಕರ ವೃತ್ತ, ಕೇಂದ್ರ ಬಸ್‌ ನಿಲಾ್ದಣ, ಎ.ಪಿ.ಎಂ.ಸಿ ಮಾರ್ಗವಾಗಿ ಶಿವಚಂದ್ರ ನೆಲೊ್ಲಗಿ ವೃತ್ತದವರೆಗೆ ಮೆರವಣಿಗೆ ನಡೆಯಿತು.

‘ಅಮಾಯಕರನು್ನ ಬಂಧಿಸಿ, ಶಿಕ್ಷೆಗೆ ಒಳಪಡಿಸದೆ ನಿಜವಾದ ಆರೋಪಿಗಳನ್ನು ಬಂಧಿಸಬೇಕು‘ ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಆಗ್ರಹಿಸಿ ದರು. ಪಕ್ಷಾತೀತವಾಗಿ ನಡೆದ ರಾ್ಯಲಿ ಯಲಿ್ಲ ವಾ್ಯಪಾರಸ್ಥರು, ಸಾರ್ವಜನಿಕರು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದರು.

ವಾ್ಯಪಾರಸ್ಥರು ಮಂಗಳವಾರ ಅಂಗಡಿ ಮುಂಗಟು್ಟ ಮುಚಿ್ಚ ಬಂದ್‌ಗೆ ಸಹಕರಿಸಿ ದರು. ಶಾಲಾ– ಕಾಲೇಜು ಗಳು ಸ್ವಯಂ ಪೆ್ರೇರಣೆಯಿಂದ ರಜೆ ಘೋಷಿಸಿದ್ದವು. ಬಸ್‌ ಸಂಚಾರ ಎಂದಿನಂತೆ ಸಾಮಾನ್ಯ ವಾಗಿತು್ತ. ಅಹಿತಕರ ಘಟನೆ ಸಂಭವಿಸದಂತೆ ಡಿ.ವೈ.ಎಸ್ಪಿ ಅಮರನಾಥರೆಡಿ್ಡ ಬಿಗಿ ಪೊಲೀಸ್‌ ಬಂದು ಬಸ್ತ್‌ ಕಲಿ್ಪಸಿದ್ದರು. ಬಂದ್‌ ಶಾಂತಿಯುತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT