ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಚರ್ಮ ಸಾಗಣೆ: ನಾಲ್ವರ ಬಂಧನ

Last Updated 19 ಅಕ್ಟೋಬರ್ 2012, 7:50 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಹುಲಿಚರ್ಮ ಸಾಗಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಳಂದೂರು ತಾಲ್ಲೂಕು ಗೌಡಳ್ಳಿ ರಮೇಶ್, ಕೊಳ್ಳೇಗಾಲ ರಾಜಶೇಖರ್, ಅಬ್ಬಾಸ್, ಚಂದ್ರು ಬಂದಿತ ಆರೋಪಿಗಳು. ಯಳಂದೂರು ತಾಲ್ಲೂಕು ಆಮೆಕೆರೆದೊಡ್ಡಿ ಸೋಮಣ್ಣ ತಲೆತಪ್ಪಿಸಿಕೊಂಡಿದ್ದಾನೆ.

ಘಟನೆ ವಿವರ: 6 ತಿಂಗಳ ಹಿಂದೆ ಬಿಳಿಗಿರಿರಂಗನಬೆಟ್ಟ ಹುಲಿ ಅಭಯಾರಣ್ಯದಲ್ಲಿ ವಿಷಹಾಕಿ ಹುಲಿಯೊಂದನ್ನು ಸಾಯಿಸಿ ಚರ್ಮ ಸಂಗ್ರಹಿಸಿದ್ದ ತಂಡವೊಂದು ರೂ. 40 ಲಕ್ಷಕ್ಕೆ ಹುಲಿಚರ್ಮ ಮಾರಾಟ ಮಾಡಲು ಮುಂದಾಗಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆ ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಸಬ್ ಇನ್‌ಸ್ಪೆಕ್ಟರ್ ಮಹೇಶ್ ಮತ್ತು ತಂಡ ತ್ಲ್ಲಾಲೂಕಿನ ಮೈಸೂರು ರಸ್ತೆಯಲ್ಲಿ ದಾಳಿ ನಡೆಸಿ ಕಟ್ನವಾಡಿ ಪಾಲದ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಹುಲಿ ಚರ್ಮ ಹಾಗೂ ಉಗುರು ವಶಪಡಿ ಸಿಕೊಳ್ಳಲಾಗಿದೆ. ಹುಲಿ ಕೊಂದು ಚರ್ಮವನ್ನು ಒಣಗಿಸಿ ಹದ ಮಾಡಿ ಮನೆಯಲ್ಲಿಟ್ಟುಕೊಂಡಿದ್ದ ಪ್ರಮುಖ ಆರೋಪಿ ಆಮೆಕೆರೆದೊಡ್ಡಿ ವಾಸಿ ಸೋಮಣ್ಣ ತಲೆತಪ್ಪಿಸಿಕೊಂಡ್ದ್ದಿದಾನೆ.

ಮಡಿಕೇರಿ ಸಿಐಡಿ ಅರಣ್ಯ ವಿಭಾಗದ ಎಸ್‌ಪಿ ಅಶೋಕ್ ಎ ಅನ್ವೇಕರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಮುಖ ಆರೋಪಿ ಬಂಧನಕ್ಕೆ ಸೂಕ್ತ ಮಾರ್ಗದರ್ಶನ         ನೀಡಿ ದರು. ದಾಳಿಯಲ್ಲಿ ಸಬ್ ಇನ್‌ಸ್ಪೆಕ್ಟರ್ ಮಹೇಶ್ ಸಿಬ್ಬಂದಿ ಗಳಾದ ಪ್ರಕಾಶ್, ನಿಂಗರಾಜು, ಶ್ರೀಕಂಠ, ರವಿ, ನಿಂಗರಾಜಪ್ಪ, ಜಯಶಂಕರ್, ಹರೀಶ್, ರಾಘವೇಂದ್ರ ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT