ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸೇನ್ ಮರಳು ಶಿಲ್ಪ ನಾಶ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಅಹಮದಾಬಾದ್, (ಐಎಎನ್‌ಎಸ್): ಉತ್ತರ ಪ್ರದೇಶದಲ್ಲಿ ಕಲಾವಿದರೊಬ್ಬರು ಎಂ.ಎಫ್.ಹುಸೇನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ನಿರ್ಮಿಸುತ್ತಿದ್ದ ಮರಳು ಶಿಲ್ಪವನ್ನು ದುಷ್ಕರ್ಮಿಗಳು ಶುಕ್ರವಾರ ನಾಶ ಮಾಡಿದ್ದಾರೆ.

ಪ್ರಸಿದ್ಧ ಮರಳು ಶಿಲ್ಪಿ ಆರ್.ಕೆ.ಚಿತೆರಾ ಎಂಟು ಅಡಿ ಉದ್ದದ ಶಿಲ್ಪವನ್ನು ಗಂಗಾ ನದಿ ದಂಡೆಯಲ್ಲಿ ನಿರ್ಮಿಸುತ್ತಿದ್ದರು. ಅದಿನ್ನೂ ಅಪೂರ್ಣವಾಗಿತ್ತು. ಅಷ್ಟರಲ್ಲಿ ಈ ಘಟನೆ ನಡೆದಿದೆ.

`ದೂರದಲ್ಲಿ ಗುಂಪೊಂದು ನನ್ನನ್ನು ಗಮನಿಸುತ್ತಿತ್ತು. ಬಳಿಕ ಸುಮಾರು ಮೂರು ಜನ ನನ್ನತ್ತ ಓಡಿ ಬಂದು ಕಾಲಿನಿಂದ ಶಿಲ್ಪವನ್ನು ಹಾಳು ಮಾಡಿದರು~ ಎಂದು ಚಿತೆರಾ ಸುದ್ದಿಗಾರರಿಗೆ ತಿಳಿಸಿದರು. `ನಾನು ಹುಸೇನ್ ಅವರಿಗೆ ಗೌರವ ಸಲ್ಲಿಸಲು ಯಾವುದೇ ಕಾರ್ಯಕ್ರಮ ಏರ್ಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯನ್ನೂ ಅವರು ಒಡ್ಡಿದರು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT