ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಗೆ ರಾಜ್ಯ ಪ್ರಶಸ್ತ: ಎಫ್‌ಕೆಸಿಸಿಐ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಒಟ್ಟಾರೆ ಆಂತರಿಕ ಉತ್ಪಾದನೆಯಲ್ಲಿ ಕೈಗಾರಿಕೆ ಕೊಡುಗೆ ಸದ್ಯ ಶೇ 16ರಷ್ಟಿದೆ. ಈ ಕೊಡುಗೆಯನ್ನು 2025ರ ವೇಳೆಗೆ ಶೇ 25ಕ್ಕೆ ಕೊಂಡೊಯ್ಯುವ ಕೇಂದ್ರ ಸರ್ಕಾರದ ಗುರಿಯಿಂದಾಗಿ 2022ರ ವೇಳೆಗೆ ಉತ್ಪಾದನಾ ವಲಯದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು `ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ~(ಎಫ್‌ಕೆಸಿಸಿಐ) ಅಧ್ಯಕ್ಷ ಶಿವಷಣ್ಮುಗಂ ಹೇಳಿದರು.

ಸಂಘದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದ ಜನಸಂಖ್ಯೆಯಲ್ಲಿ ಕೇವಲ ಶೇ 5ರಷ್ಟು ಜನರು ಕರ್ನಾಟಕದಲ್ಲಿದ್ದರೂ, `ಜಿಡಿಪಿ~ಗೆ ರಾಜ್ಯದ ಕೊಡುಗೆ ಶೇ 6ರಷ್ಟಿದೆ. ಬಂಡವಾಳದಲ್ಲಿ ಶೇ 7, ರಫ್ತು ಕ್ಷೇತ್ರಕ್ಕೆ ಶೇ 13ರಷ್ಟು ಕೊಡುಗೆ ಇದೆ. ರಾಜ್ಯದ `ಜಿಡಿಪಿ~ಗೆ ಇಲ್ಲಿನ ಕೈಗಾರಿಕೆಗಳ ಕೊಡುಗೆ ಶೇ 30ರಷ್ಟಿದೆ. ಉದ್ಯಮ ಆರಂಭಿಸಲು, ಬಂಡವಾಳ ಹೂಡಿಕೆಗೆ ರಾಜ್ಯ ಪ್ರಶಸ್ತ ತಾಣ. ಇದೆಲ್ಲದಕ್ಕಾಗಿ 96 ವರ್ಷಗಳಿಂದ `ಎಫ್‌ಕೆಸಿಸಿಐ~ ಶ್ರಮಿಸುತ್ತಿದೆ ಎಂದರು.

ಆದರೆ, ಕೃಷಿ ಕ್ಷೇತ್ರದ ಕೊಡುಗೆ 2004ರಲ್ಲಿ ಶೇ 16ರಷ್ಟಿತ್ತು. 2011ರಲ್ಲಿ ಶೇ 12ಕ್ಕಿಳಿದಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಎಫ್‌ಕೆಸಿಸಿಐ ಸಹ ಶ್ರಮಿಸಲಿದೆ. ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿ, ಕೌಶಲ-ರಫ್ತು ಉದ್ಯಮಶೀಲತೆ ತರಬೇತಿ, ಪೂರ್ಣ ಪ್ರಮಾಣದ ವಾಣಿಜ್ಯ ಸಂಶೋಧನಾ ಘಟಕ ಸ್ಥಾಪನೆ ಮೊದಲಾದ ಕಾರ್ಯಕ್ರಮಗಳಿಗೂ ಸಂಸ್ಥೆ ಒತ್ತು ನೀಡಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT