ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಶಸ್ತ್ರಚಿಕಿತ್ಸೆಗೆ ಬೇಕಿದೆ ಸಹಾಯ ಹಸ್ತ

Last Updated 17 ಜನವರಿ 2012, 5:50 IST
ಅಕ್ಷರ ಗಾತ್ರ

ಸೋಮವಾರಪೇಟೆ: ಎಲ್ಲರಂತೆ ಶಾಲೆಯಲ್ಲಿಆಟವಾಡಿಕೊಂಡಿದ್ದ ಜೀವನ್ ಹೃದಯದೊಳಗೆ ತಲೆದೋರಿದ ರಂದ್ರದಿಂದಾಗಿ ಮಂಕಾಗಿದ್ದಾನೆ.

ಸೋಮವಾರಪೇಟೆ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಬಳಗುಂದ ಗ್ರಾಮದ ಕಾಫಿತೋಟದ ಲೈನ್ ಮನೆಯೊಂದರಲ್ಲಿ ವಾಸವಿರುವ ನಾರಾಯಣ ಮತ್ತು ಜಯ ದಂಪತಿಯ ಪುತ್ರ ಜೀವನ್. ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈತನಿಗೆ ಶಾಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಸಂದರ್ಭ ಹೃದಯದೊಳಗೆ ರಂದ್ರವಿರುವ ವಿಷಯ ತಿಳಿಯಿತು. ವೈದ್ಯರು ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ಹೋಗಲು ಶಿಫಾರಸ್ಸು ಮಾಡಿದ್ದಾರೆ.

ಅದರಂತೆ ಜೀವನ್‌ನನ್ನು ಮೈಸೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಿದ ನಂತರ ಹೆಚ್ಚಿನ ತಪಾಸಣೆಗೆ ಬೆಂಗಳೂರಿನ ಜಯದೇವ  ಹೃದ್ರೋಗ ವಿಜ್ಞಾನ  ಸಂಸ್ಥೆಗೆ ದಾಖಲಿಸಲಾಯಿತು.

ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ಜೀವನ್‌ಗೆ  ಶೀಘ್ರ ವಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸೂಚಿಸಿ, ತಪ್ಪಿದ್ದಲ್ಲಿ ಪ್ರಾಣಾಪಾಯ                 ಆಗಬಹುದೆಂದು ಎಚ್ಚರಿಸಿದ್ದಾರೆ. ಅದರಂತೆ ಶಸ್ತ್ರಚಿಕಿತ್ಸೆಗೆ 70 ಸಾವಿರ, ಆಸ್ಪತ್ರೆ ಖರ್ಚು 10 ಸಾವಿರ, ಎ.ಟಿ.ಎಸ್.ಎ.ಪಿ. ವಾಲ್ವ್ 95 ಸಾವಿರ ಹೀಗೆ ಒಟ್ಟು 1.75 ಲಕ್ಷ ರೂ. ಗಳು ವೆಚ್ಚವಾಗುತ್ತದೆ. ಈ ಬಗ್ಗೆ ಸ್ವತಃ ವೈದ್ಯರೇ ಪಟ್ಟಿ ನೀಡಿದ್ದಾರೆ.
 
ಈ ನಡುವೆ ಕೂಲಿ ಕೆಲಸ ಮಾಡುತ್ತಿರುವ ಕುಟುಂಬ ಅಲ್ಲಿ ಇಲ್ಲಿ ಸಾಲ ಮಾಡಿ ಜೀವನ್‌ನ ಚಿಕಿತ್ಸೆಗೆ ಈಗಾಗಲೆ 30 ಸಾವಿರ ವ್ಯಯಿಸಿದ್ದೇವೆ. ಇನ್ನೂ 1.75 ಲಕ್ಷ ರೂಪಾಯಿಗಳು ಬೇಕಿದೆ.

ಇವರಿಗೆ ಸಹಾಯ ಹಸ್ತ ಚಾಚುವ ಹೃದಯವಂತರು ಸೋಮವಾರಪೇಟೆಯ ವಿಜಯಾ ಬ್ಯಾಂಕ್‌ನ 115601011000211 ಖಾತೆ ಸಂಖ್ಯೆಗೆ ಹಣ ಸಂದಾಯ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT