ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತಕ್ಕೆ ತಕ್ಷಣ ಚಿಕಿತ್ಸೆಯ ಮಾತ್ರೆ!

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಹೃದಯಾಘಾತವಾದರೆ ಕ್ಷಣ ಮಾತ್ರದಲ್ಲಿ ಅದಕ್ಕೆ ಚಿಕಿತ್ಸೆ ನೀಡುವಂತಹ  ದಿವ್ಯೌಷಧವೊಂದನ್ನು ಇಲ್ಲಿನ ವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ.

ಲಂಡನ್ ವಿಶ್ವವಿದ್ಯಾಲಯ ಕಾಲೇಜಿನ ಒಂದು ತಂಡವು ಮಾತ್ರೆಯೊಂದನ್ನು ಸಂಶೋಧಿಸುತ್ತಿದೆ. ಹೃದಯಸ್ತಂಭನವಾದ ಕೂಡಲೇ ಈ ಮಾತ್ರೆಯನ್ನು ನುಂಗಿದರೆ ನಿಶ್ಚೇಷಿತವಾದ ಹೃದಯ ಕೂಡಲೇ ಮಿಡಿಯುತ್ತದೆ. ಹಾಗಾಗಿ ಇದು ಮಹತ್ವದ ಸಂಶೋಧನೆ ಎಂದು  ಸಂಶೋಧನಾ ತಂಡ ಹೇಳಿಕೊಂಡಿದೆ.

ಈ ಮಾತ್ರೆಯು ಘಾಸಿಯಾದ ಹೃದಯಕ್ಕೆ ತಂತಾನೆ ಚಿಕಿತ್ಸೆ ಮಾಡಿಕೊಳ್ಳುವ ಶಕ್ತಿಯನ್ನು ನೀಡುತ್ತದೆ ಎಂದು ಈ ಸಂಶೋಧನೆಯ ಕುರಿತು ವರದಿ ಮಾಡಿರುವ `ಡೈಲಿ ಟೆಲಿಗ್ರಾಫ್~ ಪತ್ರಿಕೆ ಹೇಳಿದೆ. ತಾವು ಕಂಡುಹಿಡಿಯುತ್ತಿರುವ ಈ ಮಾತ್ರೆಯಲ್ಲಿ ಪ್ರೋಟೀನ್ ಅಂಶವಾದ `ತೈಮೋಸಿನ್ ಬಿಟಾ 4~ ಇದೆ. ಇದು ಘಾಸಿಯಾದ ಹೃದಯವನ್ನು ಪುನಶ್ಚೇತನಗೊಳಿಸುತ್ತದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.

ಈ ಪ್ರಯೋಗವನ್ನು ಇಲಿಗಳ ಮೇಲೆ ನಡೆಸಿದ್ದು, ಇಲಿಗಳ ಹೃದಯವು ಶೇ 25ರಷ್ಟು ಚೇತನಾಶೀಲವಾಗಿವೆ. ಹಾಗಾಗಿ ಸಂಶೋಧಕರು ಈ ಪ್ರಯೋಗವನ್ನು ಇನ್ನು ಕೆಲವು ವರ್ಷಗಳಲ್ಲಿ ಮನುಷ್ಯರ ಮೇಲೆ ನಡೆಸಲು ಬಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT