ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ನೆರವು ಕೋರಿದ ವಿಕಾಸ್

Last Updated 6 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಂಡನ್  ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನಿಟ್ಟಿನಲ್ಲಿ ಕಠಿಣ ತರಬೇತಿ ನಡೆಸುತ್ತಿರುವ ಡಿಸ್ಕಸ್ ಥ್ರೋ ಸ್ಪರ್ಧಿ ವಿಕಾಸ್ ಗೌಡ ತಮಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಒಲಿಂಪಿಕ್ಸ್‌ವರೆಗಿನ ತರಬೇತಿಯ ಖರ್ಚನ್ನು ಭರಿಸಲು ಇನ್ನಷ್ಟು ನೆರವು ನೀಡುವಂತೆ ಅವರು ಕೋರಿದ್ದಾರೆ. ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ವಿಕಾಸ್, `ಲಂಡನ್ ಒಲಿಂಪಿಕ್ಸ್‌ಗೆ ನನ್ನ ತಯಾರಿ ಸರಿಯಾದ ದಿಕ್ಕಿನಲ್ಲೇ ನಡೆಯುತ್ತಿದೆ. ಕರ್ನಾಟಕ ಸರ್ಕಾರ ನೀಡುತ್ತಿರುವ ಬೆಂಬಲ ನನಗೆ       ಹೆಚ್ಚಿನ ಉತ್ತೇಜನ ನೀಡಿದೆ. ಈ ನೆರವನ್ನು ಎಂದಿಗೂ ಮರೆಯಲಾರೆ~ ಎಂದಿದ್ದಾರೆ.

ಇದುವರೆಗಿನ ತರಬೇತಿಗಾಗಿ ಸಾಕಷ್ಟು ಹಣ ಖರ್ಚಾಗಿದೆ. ಒಲಿಂಪಿಕ್ಸ್‌ವರೆಗೆ ಅಭ್ಯಾಸ ನಡೆಸಲು ಇನ್ನಷ್ಟು             ವೆಚ್ಚವಾಗಲಿದೆ. ಆದ್ದರಿಂದ ಜನವರಿಯಿಂದ ಒಲಿಂಪಿಕ್ಸ್‌ವರೆಗಿನ ಖರ್ಚನ್ನು ಭರಿಸಲು 50 ಲಕ್ಷ ರೂ. ನೀಡುವಂತೆ ವಿಕಾಸ್ ರಾಜ್ಯ ಸರ್ಕಾರವನ್ನು ಕೋರಿದ್ದಾರೆ.

ಆಗ್ರಹ: ಪ್ರಸಕ್ತ ಅಮೆರಿಕಾದಲ್ಲಿ ತರಬೇತಿ ಪಡೆಯುತ್ತಿರುವ ರಾಜ್ಯದ ವಿಕಾಸ್‌ಗೌಡ ಅವರು ಜಗತ್ತಿನ ಅಗ್ರಮಾನ್ಯ ಡಿಸ್ಕಸ್ ಎಸೆತಗಾರರಲ್ಲಿ ಒಬ್ಬರಾಗಿದ್ದು, ಅವರ ಮನವಿಗೆ ಸ್ಪಂದಿಸಬೇಕೆಂದು ಬೆಂಗಳೂರು ಗ್ರಾಮಾಂತರ ಅಥ್ಲೆಟಿಕ್ ಸಂಸ್ಥೆಯ ಪದಾಧಿಕಾರಿಗಳು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ಮುನಿಸಂಜೀವಪ್ಪ,  ಕಾರ್ಯದರ್ಶಿ ಆಂಜನೇಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಾಜರಿದ್ದ ಅಖಿಲ ಭಾರತ ಅಥ್ಲೆಟಿಕ್ ಫೆಡರೇಷನ್‌ನ ಖಜಾಂಚಿ ಸತ್ಯನಾರಾಯಣ ಅವರು ವಿಕಾಸ್‌ಗೌಡ ಸಾಧನೆಯ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT