ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಚುಂಬಿಸುವ ಪತ್ನಿಗೆ ಪತಿ ಮೇಲೆ ಹೆಚ್ಚು ಪ್ರೀತಿ!

Last Updated 13 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾಳೆಯೇ ಎನ್ನುವುದನ್ನು ನೀವು ತಿಳಿಯಬೇಕೇ? ಹಾಗಿದ್ದರೆ ಅವಳು ನಿಮಗೆ ಹೇಗೆ ಚುಂಬಿಸುತ್ತಾಳೆ ಅಥವಾ ತಬ್ಬಿಕೊಳ್ಳುತ್ತಾಳೆ ಎಂಬುದನ್ನು ಇಂದಿನಿಂದಲೇ ಗಮನಿಸಲು ಶುರು ಮಾಡಿ!

ಪತಿಯನ್ನು ಹೆಚ್ಚಾಗಿ ಪ್ರೀತಿಸುವ ಪತ್ನಿಯು ಪತಿಗೆ ಕಿರಿಕಿರಿ ಉಂಟು ಮಾಡುವುದಿಲ್ಲ ಮತ್ತು ಅನೇಕ ಸಲ ಚುಂಬಿಸುತ್ತಾಳೆ ಅಥವಾ ತಬ್ಬಿಕೊಳ್ಳುತ್ತಾಳೆ ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗೆ ನಡೆಸಿದ ಹೊಸ ಸಮೀಕ್ಷೆಯಲ್ಲಿ ಈ ಅಂಶ ಕಂಡುಕೊಂಡಿದ್ದಾರೆ.

ಪುರುಷರು ಸ್ವಾಭಾವಿಕವಾಗಿ ರಸಿಕರಾಗಿರುವುದಿಲ್ಲ. ಆದರೆ, ಅವರು ಮನೆಯ ಸಣ್ಣಪುಟ್ಟ ಕೆಲಸಗಳಲ್ಲಿ ಕೈಜೋಡಿಸುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಎನ್ನುವುದನ್ನು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಸಮೀಕ್ಷೆ ಸಂದರ್ಭದಲ್ಲಿ 168 ಜೋಡಿಗಳನ್ನು ಅವರ ಮದುವೆ ವಿಚಾರವಾಗಿ ಪ್ರಶ್ನಿಸಲಾಗಿತ್ತು. ಪುರುಷರು ಅವರ ಸಂಗಾತಿ ಬಗ್ಗೆ ಹಲವು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ನಕಾರಾತ್ಮಕ ವಿಚಾರಗಳನ್ನು ಬಹಿರಂಗ ಮಾಡದಿರುವ ಮೂಲಕ ಮಹಿಳೆಯರು ತಮ್ಮ ಪ್ರೀತಿ ತೋರಿಸಿಕೊಳ್ಳುತ್ತಾರೆ. ಅದೇ ಪುರುಷರ ವಿಚಾರಕ್ಕೆ ಬಂದಾಗ ಅವರು ಲೈಂಗಿಕ ಚಟುವಟಿಕೆ ಮತ್ತು ಸಣ್ಣಪುಟ್ಟ ಕೆಲಸಗಳಲ್ಲಿ ಸಂಗಾತಿಗೆ ಸಹಕಾರ ನೀಡುತ್ತ ವಿವಾಹ ಜೀವನವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಬಯಸುತ್ತಾರೆ ಎಂದು ಅಧ್ಯಯನದಿಂದ ತಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT