ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ತರಂಗಾಂತರಕ್ಕೆ ಶುಲ್ಕ ನಿಗದಿ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  4.4 ಮೆಗಾಹರ್ಟ್ಸ್‌ಗಿಂತ ಮೇಲ್ಪಟ್ಟ ತರಂಗಾಂತರ ಹಂಚಿಕೆಯನ್ನು ಇನ್ನು ಮುಂದೆ ಹರಾಜಿನ ಮೂಲಕ ನಡೆಸಲು ಸರ್ಕಾರ ನಿರ್ಧರಿಸಿದ್ದು, ಈ ಕ್ರಮದಿಂದ ಹಿಂದಿನ ಜಿಎಸ್‌ಎಂ ನಿರ್ವಾಹಕರಿಗೆ ಭಾರಿ ಲಾಭವಾಗಲಿದೆ.

ದೂರಸಂಪರ್ಕ ಆಯೋಗವು ಹೊಸ ನಿರ್ವಾಹಕರಿಗೆ ಶುಲ್ಕ ವಿಧಿಸಲು ನಿರ್ಧರಿಸಿದೆ. 4.4 ಮೆಗಾಹರ್ಟ್ಸ್‌ಗಿಂತ ಮೇಲ್ಪಟ್ಟ ಹೆಚ್ಚುವರಿ ತರಂಗಾಂತರಗಳನ್ನು ಹರಾಜಿನ ಮೂಲಕ ಖರೀದಿಸಬೇಕಾಗುತ್ತದೆ. ಟಾಟಾಸ್, ಆರ್‌ಕಾಂ, ಸಿಸ್ಟೆಮಾ ಶ್ಯಾಂ, ಯುನಿನಾರ್ ಹಾಗೂ ಇತರ ಹೊಸ ನಿರ್ವಾಹಕರು ಈ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತಪಡಿಸಿ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರಿಗೆ ಪತ್ರ ಬರೆದಿದ್ದರು.

4.4 ಮೆಗಾಹರ್ಟ್ಸ್ ಮೇಲ್ಪಟ್ಟ ಹೆಚ್ಚುವರಿ ತರಂಗಾಂತರಗಳಿಗೆ ಶುಲ್ಕ ವಿಧಿಸುವುದು ತಾರತಮ್ಯದ ಕ್ರಮವಾಗುತ್ತದೆ ಎಂದು ಆಕ್ಷೇಪಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT