ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳಿಗೇಕೆ ಈ ದುಃಸ್ಥಿತಿ?

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಸುಮಾರು ಎರಡು ಮತ್ತು ಮೂರು ವರ್ಷದ ಪುಟ್ಟ ಹೆಣ್ಣುಮಕ್ಕಳ ದೇಹ ಗುಬ್ಬಿ ತಾಲ್ಲೂಕು ಕಡಬ ಕೆರೆಯಲ್ಲಿ ಪತ್ತೆಯಾಗಿರುವ ಸುದ್ದಿ ಕರುಳು ಕಿವಿಚಿದಂತಾಯಿತು. ಹೆಣ್ಣು ಮಕ್ಕಳೆಂದೋ, ಸಾಕಲಾಗದ ಅಸಹಾಯಕತೆಗೋ ಅಥವಾ ಇನ್ಯಾವುದೋ ಕಾರಣಕ್ಕೋ  ಈ ಪುಟ್ಟ ಕಂದಮ್ಮಗಳನ್ನು ಸಾಯಿಸಿರುವುದು ಅಮಾನುಷ.
 
ಹೆಣ್ಣನ್ನು ಹುಟ್ಟುವ ಮೊದಲೇ ಗರ್ಭದಲ್ಲೇ ಇನ್ನಿಲ್ಲವಾಗಿಸಿ ಬಿಡುತ್ತಾರೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಂತೂ ಹೆಚ್ಚುತ್ತಲೇ ಇವೆ. ಈ ಕಾರಣಗಳಿಂದ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.
 
ಹೆಣ್ಣುಗಳು ಸಿಗದೆ ಎಷ್ಟೋ ಜನ ಗಂಡುಮಕ್ಕಳು ಅವಿವಾಹಿತರಾಗಿಯೇ ಉಳಿದಿದ್ದಾರೆ. ವಂಶ ಬೆಳೆಯಲು ಹೆಣ್ಣೂ ಬೇಕಲ್ಲವೇ? ಈ ಪರಿಸ್ಥಿತಿ ಇದ್ದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಡೆಯುತ್ತಲೇ ಇದೆ.                      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT