ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ನಿರ್ಮಾಣ: ಅಂಗಡಿ ತೆರವು

Last Updated 1 ಫೆಬ್ರುವರಿ 2011, 6:55 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ದುಬಲಗುಂಡಿ ಮಾರ್ಗವಾಗಿ ಹಾದು  ಹೋಗುವ ತಾಲ್ಲೂಕು ಚಿಂಚೋಳಿ- ನಾಗಪೂರ ಹೆದ್ದಾರಿ ನಿರ್ಮಾಣ ಹಿನ್ನೆಲೆಯಲ್ಲಿ ಸೋಮವಾರ ದುಬಲಗುಂಡಿ ಬಸವೇಶ್ವರ ವೃತ್ತ ಅಕ್ಕಪಕ್ಕದ ಅಂಗಡಿಗಳನ್ನು ತೆರವುಗೊಳಿಸಲಾಯಿತು.

ಗುಲ್ಬರ್ಗ- ಬೀದರ್ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ದುಬಲಗುಂಡಿ ಕ್ರಾಸ್‌ನಿಂದ- ಭಾಲ್ಕಿ ತಾಲ್ಲೂಕು ಅಂಬೆಸಾಂಗವಿ ವರೆಗಿನ ರಸ್ತೆ ಮಧ್ಯದಿಂದ ಎರಡು ಬದಿ 70ಅಡಿ ತೆರವುಗೊಳಿಸುವ ಯೋಜನೆ ಇದ್ದು, ಸದ್ಯ 50ಅಡಿ ಮಾತ್ರ ತೆರವುಗೊಳಿಲಾಗುತ್ತಿದೆ ಎಂದು ಹೇಳಲಾಗಿದೆ. ತೆರವುನಿಂದಾಗಿ ಗ್ರಾಮದ ಬಸವೇಶ್ವರ ವೃತ್ತ ಅಕ್ಕಪಕ್ಕದ ಹೊಟೆಲ್, ಕಿರಾಣಿ ಅಂಗಡಿ ಅಲ್ಲದೆ ಮನೆ ನೆಲಸಮಗೊಳಿಸಲಾಗಿದೆ. ರಸ್ತೆ ಹೊಂದಿಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌಂಡ್ ಈಗಾಗಲೇ ತೆರವುಗೊಳಿಸಲಾಗಿದೆ. ತೆರವಿನಿಂದ ಸಣ್ಣಪುಟ್ಟ ವ್ಯಾಪಾರಿಗಳು ಆತಂಕ ಸ್ಥಿತಿಯಲ್ಲಿದ್ದಾರೆ.

ಮನವಿ: ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ತೆರವುಗೊಳಿಸಿದ್ದರಿಂದ ಹೋಟೆಲ್, ಕಿರಾಣಿ ಅಂಗಡಿ ಹಾಗೂ ಬಡವರ ಮನೆ ನೆಲಸಮಗೊಂಡಿವೆ. ಜೀವನ ನಿರ್ವಹಣೆಗೆ ಆಧಾರವಾದ ಅಂಗಡಿ ಕಳೆದುಕೊಂಡು ಬೀದಿ ಪಾಲಾದ ವ್ಯಾಪಾರಿಗಳಿಗೆ ಸರ್ಕಾರಿ ನಿವೇಶನ ಒದಗಿಸಬೇಕು. ಮತ್ತು ತಾತ್ಕಾಲಿಕ ಅಂಗಡಿ ನಿಮಾರ್ಣ ಸಂಬಂಧ ಬ್ಯಾಂಕ್ ಸಾಲ ನೀಡಬೇಕು. ತೆರವಿನಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಹೆರಿಗೆ ಕೋಣೆ ಹಾನಿಗಿಡಾಗುವ ಸಾಧ್ಯತೆ ಇರುವುದರಿಂದ ಹೊಸ ಹೆರಿಗೆ ಕೋಣೆ ನಿರ್ಮಾಣಕ್ಕೆ ಮಂಜೂರಾತಿ

ನೀಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿಜಯಕುಮಾರ ನಾತೆ, ಉಪಾಧ್ಯಕ್ಷ ಮೇರಾಜ್ ಭಾಲ್ಕಿಬೇಸ್ ಮೊದಲಾದವರು ಈ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT