ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಬದಲಿಸುವರೆ ಏಂಜಲಿನಾ?

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹಾಲಿವುಡ್‌ನಲ್ಲಿ ಬ್ರಾಡಲಿನಾ ಜೋಡಿ, ಬಾಲಿವುಡ್‌ನಲ್ಲಿ ಸೈಫೀನಾ ಜೋಡಿ, ಮದುವೆಯಾಗುವುದು ಯಾವಾಗ ಎಂಬ ಚರ್ಚೆ ಬಿಸಿಯಾಗಿರುವಾಗಲೇ ಏಂಜಲಿನಾ ತಮ್ಮ ಅಡ್ಡ ಹೆಸರನ್ನು ಬದಲಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಲಂಡನ್ ಮೂಲದಿಂದ ಈ ಸುದ್ದಿ ಬಂದಿದ್ದು, ಏಂಜಲಿನಾ ತಮ್ಮ ಹೆಸರಿನೊಂದಿಗೆ ಪಿಟ್ ಹೆಸರು ಸೇರಿಸಿಕೊಳ್ಳಲು ಕ್ರಮ ಕೈಗೊಂಡಿದ್ದಾರೆ.

ಸುದ್ದಿಯ ಜಾಡನ್ನು ಬೆಂಬತ್ತಿದವರು `ಈಗಾಗಲೇ ಈ ಜೋಡಿ ಮದುವೆಯಾಗಿದೆ. ತಾವು ದತ್ತು ತೆಗೆದುಕೊಂಡ ಮಕ್ಕಳೊಂದಿಗೆ ಫ್ರಾನ್ಸ್‌ನಲ್ಲಿ ಕುಟುಂಬದವರು ಹಾಗೂ ಆಪ್ತೇಷ್ಟರಿಗೆ ಮಾತ್ರ ಮದುವೆಯ ಔತಣ ಕೂಟ ಏರ್ಪಡಿಸಲಾಗಿದೆ~ ಎಂದೆಲ್ಲ ವರದಿ ಮಾಡಿದ್ದಾರೆ.

ಬ್ರಾಡ್ ಪಿಟ್ ಮತ್ತು ಏಂಜಲಿನಾ ಜೂಲಿ ಈಗಾಗಲೇ ಅಮೆರಿಕದಲ್ಲಿ ಮದುವೆಯಾಗಿದ್ದು, ದಿನಾಂಕವನ್ನು ಗೋಪ್ಯವಾಗಿಡುತ್ತಿದ್ದಾರೆ ಎಂದು ಒಂದು ಮೂಲ ಹೇಳುತ್ತಿದೆ. ಇನ್ನೊಂದೆಡೆ ಅವರ ಮನೆಗೆ ಮೇಜು ಕುರ್ಚಿಗಳು ಬಂದಿಳಿಯುತ್ತಿವೆ.
 
ಮದುವೆಯ ತಯಾರಿ ಬಹುತೇಕ ಕೊನೆಯ ಹಂತಕ್ಕೆ ಬಂದಿದೆ. ಇನ್ನೇನು ಈ ಜೋಡಿ ದಿನಾಂಕವನ್ನೂ ಘೋಷಿಸಬಹುದು. ಅದಕ್ಕೆ ಪೂರ್ವಿಭಾವಿಯಾಗಿ ಹೆಸರನ್ನು ಜೂಲಿ ಪಿಟ್ ಎಂದು ಬದಲಾಗಿದೆಯಷ್ಟೆ ಎಂಬ ಸುದ್ದಿಯೂ ಹರಡಿದೆ.ಈ ಎರಡು ಸುದ್ದಿಗಳಲ್ಲಿ ಯಾವುದು ನಿಜ ಎಂದು ಬ್ರಾಡಲಿನಾ ಮಾತ್ರ ಹೇಳಬೇಕು. ಆದರೆ ಅವರಿಬ್ಬರೂ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT