ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾಮಾಲಿನಿ ನೃತ್ಯ, ಮುಕ್ತಿಯಾರ್‌ ಸೂಫಿ ಸಂಗೀತ

ಏಳು ವೇದಿಕೆಗಳಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ
Last Updated 28 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಏಳು ವೇದಿಕೆಗಳಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಉಸ್ತಾದ್‌ ಅಲಿ ಅಹ್ಮದ್‌ ಖಾನ್‌ ಅವರ ಶಹನಾಯ್ ವಾದನ, ನರ ಸಿಂಹಲು ವಡವಟಿಯ ಕ್ಲಾರಿಯೋನೆಟ್‌, ಮುಕ್ತಿಯಾರ್‌ ಅಲಿಯ ಸೂಫಿ ಸಂಗೀತದ ಸುಧೆ ಅಂಬಾವಿಲಾಸ ಅರಮನೆಯಲ್ಲಿ ಅನುರಣಿ ಸಲಿದೆ. ಚಲನಚಿತ್ರ ನಟಿ ಹೇಮಾಮಾಲಿನಿ ನೃತ್ಯ ರೂಪಕ ಸಹೃದಯರ ಹೃದಯಗಳಿಗೆ ಲಗ್ಗೆ ಇಡಲಿದೆ.

‘ಅ. 5ರಿಂದ 13ರವರೆಗೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ. ಅಂಬಾವಿಲಾಸ ಅರಮನೆ, ಜಗನ್ಮೋಹನ ಅರಮನೆ, ಗಾನ ಭಾರತಿ, ಕಲಾಮಂದಿರ, ಪುರಭವನ, ಕುಪ್ಪಣ್ಣ ಉದ್ಯಾನ ಹಾಗೂ ಚಿಕ್ಕಗಡಿ ಯಾರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರ, ಅಂತರರಾಷ್ಟ್ರೀಯ ಕಲಾವಿದರು ಸಂಗೀತ ಕಛೇರಿ ನಡೆಸಿಕೊಡಲಿ ದ್ದಾರೆ’ ಎಂದು ದಸರಾ ಸಾಂಸ್ಕೃತಿಕ ಉಪ ಸಮಿತಿಯ ಅಧ್ಯಕ್ಷ ಕೆ.ಆರ್‌. ಮೋಹನ್‌ಕುಮಾರ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅ. 5ರಂದು ಸಂಜೆ 6 ಗಂಟೆಗೆ ಅರಮನೆ ವೇದಿಕೆ ಯಲ್ಲಿ ಶತಾ ಯುಷಿ ರಂಗ ಕರ್ಮಿ ಏಣಗಿ ಬಾಳಪ್ಪ ಸಾಂಸ್ಕೃತಿಕ ಕಾರ್ಯ ಕ್ರಮ ಗಳಿಗೆ ಚಾಲನೆ ನೀಡಲಿ ದ್ದಾರೆ. ಮುಖ್ಯಮಂತ್ರಿ ಸಿದ್ದ ರಾಮಯ್ಯ, ಜಿಲ್ಲಾ ಉಸ್ತು ವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಭಾಗವಹಿ ಸಲಿದ್ದಾರೆ. ಮಂಜುಳಾ ಪರ ಮೇಶ್‌ ನೇತೃತ್ವದ 150 ಕಲಾವಿದರು ವಿಶೇಷ ನೃತ್ಯ ಪ್ರದರ್ಶಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಸಂಗೀತ, ನೃತ್ಯ, ವಾದ್ಯ, ಫ್ಯೂಜನ್, ಯಕ್ಷಗಾನ, ಗಮಕ ಸೇರಿ ದಂತೆ ಎಲ್ಲ ಪ್ರಕಾರದ ಕಲೆಗಳಿಗೂ ಅವಕಾಶ ನೀಡಲಾಗಿದೆ. ಹೊಸ ಪ್ರತಿಭೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಕಲಾವಿದರ ಪುನರಾ ವರ್ತನೆ ತಪ್ಪಿಸಲಾಗಿದೆ. 2010ರಿಂದ 2012ರವರೆಗೆ ಕಾರ್ಯಕ್ರಮ ನೀಡಿದ ಕಲಾವಿದರಿಗೆ ಈ ಬಾರಿ ಅವಕಾಶ ನೀಡಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶೇ 40ರಷ್ಟು ಸ್ಥಳೀಯರಿಗೆ, ಶೇ 30ರಷ್ಟು ಹೊರ ಜಿಲ್ಲೆಗೆ, ಶೇ 20 ರಾಜ್ಯಮಟ್ಟದ ಕಲಾವಿದರಿಗೆ, ಶೇ 10ರಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಲಾವಿದರಿಗೆ ಅವಕಾಶ ನೀಡಲಾಗಿದೆ.

ಕೇಂದ್ರ ಸರ್ಕಾರದ ಸಾಂಸ್ಕೃತಿಕ ಸಚಿವಾಲಯದ ಏಳು ವಿಭಾಗೀಯ ಕೇಂದ್ರಗಳು ದಸರಾ ಮಹೋತ್ಸವಕ್ಕೆ ಕಲಾವಿದರನ್ನು ಕಳುಹಿಸಿಕೊಡುತ್ತಿವೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್‌ ಸೇರಿದಂತೆ 14 ರಾಜ್ಯಗಳ ಕಲಾವಿದರು ದಸರೆಗೆ ಆಗಮಿಸಲಿದ್ದಾರೆ’ ಎಂದು ವಿವರಿಸಿದರು.

ಕಲಾವಿದರ ಖಾತೆಗೆ ಸಂಭಾವನೆ
ಕಲಾವಿದರಿಗೆ ನೀಡುವ ಸಂಭಾವನೆ ಯನ್ನು ಈ ಬಾರಿ ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡ ಲಾಗುತ್ತಿದೆ. ಕಲಾವಿದರನ್ನು ಪೂರೈಸುವ ಏಜೆನ್ಸಿಗಳನ್ನು ಮಟ್ಟ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಅರಮನೆಯ ಅಂಗಳದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹಿರಿಯ ನಾಗರಿ ಕರು ಹೆಚ್ಚಾಗಿ ಬರುವುದರಿಂದ ಪ್ರತ್ಯೇಕ ಆಸನದ ವ್ಯವಸ್ಥೆಗೆ ಚಿಂತಿಸ ಲಾಗುವುದು ಎಂದು ತಿಳಿಸಿದರು.

ಕೈದಿಗಳಿಗೂ ಅವಕಾಶ
ಎಲೆ ಮರೆಯ ಕಾಯಿಯಂತಿರುವ ಕಲಾವಿದರನ್ನು ಸಾಂಸ್ಕೃತಿಕ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಎಲ್ಲರಿಗೂ ಅವಕಾಶ ನೀಡಲಾಗಿದೆ. ಸಫಾಯಿ ಕರ್ಮಚಾರಿ ಸಂಘ ಮತ್ತು ಬುಡಕಟ್ಟು ಕಲಾ ವಿದರು, ಮೈಸೂರಿನ ಕೇಂದ್ರ ಕಾರಾಗೃಹದ ಕೈದಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡ ಲಿದ್ದಾರೆ. ಅಲ್ಲದೇ, ಶೋಷಿತ ಸಮು ದಾಯ ಗಳೇ ಹೆಚ್ಚಾಗಿರುವ ಮೈಸೂ ರಿನ ಏಕಲವ್ಯ ನಗರದ ಕಲಾವಿದರಿಗೂ ಅವಕಾಶ ಕಲ್ಪಿಸಲಾಗಿದೆ. ಸಂಗೀತ, ನಾಟಕ ಸೇರಿದಂತೆ ಪಾರಂಪರಿಕ ಕಲೆಗಳನ್ನು ಪ್ರದರ್ಶಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT