ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ನಿಂದ ಅರ್ಜಿ ಇತ್ಯರ್ಥ

ಜಿಲ್ಲಾ ಪಂಚಾಯತಿ ಸದಸ್ಯರ ಅನರ್ಹತೆ
Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ವಿವರ ಘೋಷಿಸದ ಬೆಂಗ­ಳೂರು ವಿಭಾಗದ ವ್ಯಾಪ್ತಿಯ ಜಿಲ್ಲಾ ಪಂಚಾ­ಯತಿಗಳ 255 ಸದ­ಸ್ಯರನ್ನು ಅನರ್ಹ­ಗೊಳಿಸು­ವಂತೆ ನಿರ್ದೇ­ಶನ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿ­­ಯನ್ನು ಹೈಕೋರ್ಟ್ ಮಂಗಳವಾರ ಇತ್ಯರ್ಥಪಡಿಸಿದೆ.

ಅಖಿಲ ಕರ್ನಾಟಕ ಪೊಲೀಸ್‌ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್‌ ಸಲ್ಲಿಸಿದ ಸಾರ್ವ­ಜನಿಕ ಹಿತಾ­ಸಕ್ತಿ ಅರ್ಜಿಯ ವಿಚಾರಣೆ ನಡೆ­ಸಿದ ಮುಖ್ಯ­ನ್ಯಾಯಮೂರ್ತಿ ಡಿ.ಎಚ್.­ವಘೇಲಾ ಹಾಗೂ ನ್ಯಾಯಮೂರ್ತಿ ಬಿ.ವಿ.­ನಾಗರತ್ನ ಅವರ ವಿಭಾಗೀಯ ಪೀಠ, ಅರ್ಜಿಯನ್ನು ಪ್ರಾದೇಶಿಕ ಆಯು­ಕ್ತರ ಮುಂದೆ ಸಲ್ಲಿಸುವಂತೆ ನಿರ್ದೇ­ಶಿಸಿದೆ.

ಶಶಿಧರ್‌ ಅವರು ಸಲ್ಲಿಸಿರುವ ಮನ­ವಿಗೆ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಇದಕ್ಕೆ ಉತ್ತರ ನೀಡು­ತ್ತಾರೆ ಎಂದು ಅಡ್ವೊಕೇಟ್‌ ಜನರಲ್‌ ರವಿವರ್ಮ ಕುಮಾರ್‌ ಅವರು ವಾದ ಮಂಡಿಸಿದ ನಂತರ ವಿಭಾ­ಗೀಯ ಪೀಠ ಅರ್ಜಿಯನ್ನು ಇತ್ಯರ್ಥಪಡಿಸಿತು.

1993ರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ನಿಯಮದಂತೆ ಪ್ರತಿ ವರ್ಷ ಜನವರಿ ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ ಸದಸ್ಯರು ಆಸ್ತಿ­ಯ ವಿವರವನ್ನು ಪ್ರಾದೇಶಿಕ ಆಯು­ಕ್ತರಿಗೆ ಸಲ್ಲಿಸಬೇಕು.

ಆದರೆ, ಬೆಂಗಳೂರು ವಿಭಾಗಕ್ಕೆ ಸೇರುವ ೯ ಜಿಲ್ಲೆಗಳಲ್ಲಿನ ೨೮೫ ಜಿಲ್ಲಾ ಪಂಚಾ­ಯತ್ ಸದಸ್ಯರಲ್ಲಿ ೩೫ ಸದ­ಸ್ಯರು ಮಾತ್ರ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದಾರೆ.  ಉಳಿದವರು ಆಸ್ತಿ ವಿವರ ಘೋಷಿಸದೆ ನಿಯಮವನ್ನು ಉಲ್ಲಂ­ಘಿಸಿದ್ದಾರೆ. ಈ ಹಿನ್ನೆಲೆ­ಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸುವಂತೆ  ಶಶಿ­ಧರ್‌ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. 

ಬೆಂಗಳೂರಿನ ೩೩ ಸದಸ್ಯರು ಸೇರಿ­ದಂತೆ , ಗ್ರಾಮಾಂತರದ ೧೮, ರಾಮ­ನಗರ ೨೨, ಕೋಲಾರ ೨೬, ತುಮ­ಕೂರು ೫೭, ಚಿತ್ರ­ದುರ್ಗದ ೩೪ , ದಾವ­ಣಗೆರೆಯ ೩೪ ಹಾಗೂ ಶಿವಮೊಗ್ಗದ ೧೪ ಜನ ಜಿಲ್ಲಾ ಪಂಚಾ­ಯತ್ ಸದ­ಸ್ಯರು ಆಸ್ತಿ ಪ್ರಮಾಣ ಘೋಷಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಪ್ರಾದೇಶಿಕ ಆಯುಕ್ತರಿಂದ  ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT