ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿ'

ಜನಪ್ರತಿನಿಧಿಗಳ, ಸಾರಿಗೆ ಸಂಸ್ಥೆಯ ಅಧಿಕಾರಿಗಳ ಸಮಾಲೋಚನಾ ಸಭೆ
Last Updated 4 ಸೆಪ್ಟೆಂಬರ್ 2013, 10:08 IST
ಅಕ್ಷರ ಗಾತ್ರ

ಜಮಖಂಡಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಬಸ್ ನಿಲ್ದಾಣವನ್ನು ನಗರದ ಕುಂಬಾರಕೆರೆ ಸ್ಥಳಾಂತರಿಸಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಶಾಸಕ ಸಿದ್ದು ನ್ಯಾಮಗೌಡ ಸಲಹೆ ನೀಡಿದರು.

ಇಲ್ಲಿನ ಬಸ್ ಡಿಪೊದಲ್ಲಿ ಮಂಗಳ ವಾರ ನಡೆದ ಜನಪ್ರತಿನಿಧಿಗಳ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಸಮಾಲೋ ಚನಾ ಸಭೆಯಲ್ಲಿ ಅವರು ಸಲಹೆ ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ `ಬಿ' ಸ್ಕೀಂ ಕಾಮಗಾರಿಗಳು ಆರಂಭ ವಾಗಿ ಆಲಮಟ್ಟಿ ಜಲಾಶಯದಲ್ಲಿ 524 ಮೀ. ವರೆಗೆ ನೀರು ಸಂಗ್ರಹಿಸಲು ಆರಂಭಿಸಿದರೆ ಜಮಖಂಡಿ ನಗರದ ಸುತ್ತಲೂ ಪುನರ್ವಸತಿ ಕೇಂದ್ರಗಳಲ್ಲಿ ಜನವಸತಿ ಹೆಚ್ಚಾಗಿ ನಗರ ಅತ್ಯಂತ ವೇಗದಲ್ಲಿ ವಿಸ್ತಾರಗೊಳ್ಳಲಿದೆ. ಆದ್ದರಿಂದ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವುದು ಅವಶ್ಯ ಎಂದರು.

ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ ಮಾತನಾಡಿ, ಹುಬ್ಬಳ್ಳಿ ಹಾಗೂ ಇನ್ನಿತರ ಪ್ರಮುಖ ನಗರಗಳಲ್ಲಿ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಿದ್ದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗಿ ಪ್ರಯಾಣಿಕರು ಬೇರೆ ಸಾರಿಗೆ ವ್ಯವಸ್ಥೆ ಕಡೆಗೆ ವಾಲಿದ ಉದಾಹರಣೆಗಳು ಇವೆ. ಈಗಿರುವ ಬಸ್ ನಿಲ್ದಾಣವನ್ನು ಬೇರೆಡೆ ಸ್ಥಳಾಂತ ರಿಸುವ ಬದಲು ಇದ್ದ ಸ್ಥಳದಲ್ಲಿಯೇ ಹೈಟೆಕ್ ಬಸ್ ನಿಲ್ದಾಣವನ್ನಾಗಿ ಪರಿವರ್ತಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ ಮಾತನಾಡಿ, ಈಗಿರುವ ಸ್ಥಳದಲ್ಲಿಯೇ ಬಸ್ ನಿಲ್ದಾಣವನ್ನು ಅಭಿವೃದ್ಧಿ ಪಡಿಸಬಹುದು. ಬಸ್ ಡಿಪೊ ಗಾಗಿ ಬೇರೆಡೆ ಸ್ಥಳವನ್ನು ಗುರುತಿಸಬ ಹುದು ಎಂಬ ವಿಚಾರವನ್ನು ವ್ಯಕ್ತಪಡಿಸಿದರು.

ಎ.ಸಿ. ಅಶೋಕ ದುಡಗುಂಟಿ, ನಗರ ಸಭೆಯ ಎಇಇ ಉಮೇಶ ಗಾಣಿಗೇರ, ರಸ್ತೆ ಸಾರಿಗೆ ಸಂಸ್ಥೆಯ ಡಿಎಂಎ ಎಸ್.ಎ. ಶೆಟ್ಟರ್, ಎಇಇ ಕೆ.ಬಿ.ಕುಲಕರ್ಣಿ, ಡಿಟಿಒ ಮುಜಮದಾರ, ಘಟಕ ವ್ಯವಸ್ಥಾಪಕ ಪಿ.ವಿ.ಮೇತ್ರಿ ಮತ್ತಿತರ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT