ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟೆಕ್ ಶೌಚಾಲಯ: ಸಿಗದ ಜನರ ಬೆಂಬಲ

Last Updated 15 ಜನವರಿ 2012, 8:40 IST
ಅಕ್ಷರ ಗಾತ್ರ

ತಾಳಿಕೋಟೆ: ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಹೆಚ್ಚಿನ ಗ್ರಾಮಗಳಲ್ಲಿ  ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳದ ಅಭಾವವಿದೆ. ಸುಸಜ್ಜಿತ ಸಾರ್ವಜನಿಕ ಮಹಿಳೆಯರ ಶೌಚಾಲಯಗಳ ಸಂಖ್ಯೆಯೂ ಇಲ್ಲ. ಇಂಥ ಸ್ಥಿತಿಯಲ್ಲಿ ಉನ್ನತ ದರ್ಜೆಯ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣ ಮಾಡಲು ಹೊರಟ ಸಂಸ್ಥೆಯೊಂದಕ್ಕೆ ಜನತೆಯ ಸಹಕಾರ ಸಿಗುತ್ತಿಲ್ಲವೆಂದು ಭಂಟನೂರನಿ ಸಮಾಜ ಸೇವಕ ಶಂತಗೌಡ ನಾವದಗಿ ದೂರಿದ್ದಾರೆ.

ಭಂಟನೂರ ಗ್ರಾಮದಲ್ಲಿ ಸರ್ಕಾರೇತರ ಸಂಸ್ಥೆಯಾದ ಬೆಂಗಳೂರಿನ ಅಖಿಲ ಕರ್ನಾಟಕ ಪೆಟ್ರೋಲ್ ಪಂಪ್ ಅಸೋಸಿಯೇಶನ್ ನೆರವಿನಿಂದ ಉನ್ನತದರ್ಜೆಯ (ಹೈಟೆಕ್) ಶೌಚಾಲಯ ನಿರ್ಮಾಣವಾಗುತ್ತಿದೆ. ಆದರೆ ಅಲ್ಲಿ  ಕಟ್ಟಡ ನಿರ್ಮಾಣ ಪ್ರಾರಂಭ ಮಾಡಿದಾರಭ್ಯ  ಸಂಜೆಯಾದರೆ ಸಾಕು ನಿರ್ಮಾಣ ಹಂತದಲ್ಲಿರುವ ಶೌಚಾಲಯ ಕಟ್ಟಡದಲ್ಲಿ ಜನ ಶೌಚ, ಗಲೀಜು ಮಾಡುತ್ತಿರುವುದರಿಂದ ಅದರ ದುರ್ನಾತಕ್ಕೆ ಅಂಜಿ ಕೆಲಸಗಾರರು ಬರುತ್ತಿಲ್ಲ,  ಸುತ್ತ ಮುಳ್ಳು ಬೇಲಿ ಹಚ್ಚಿದಾಗ್ಯೂ ಅದನ್ನು ಕಿತ್ತುಹಾಕಿ ಬರುತ್ತಿರುವುದು ಕಾಮಗಾರಿಗೆ ಅಡ್ಡಿಯಾಗಿದೆ. ಕೆಲ ಗ್ರಾಮಸ್ಥರ ಈ ವರ್ತನೆಯಿಂದ  ಕಾಮಗಾರಿಗೆ ಅಡ್ಡಿಯಾಗುತ್ತಿದ್ದಾರೆ ಎನ್ನುವುದು ಅವರ ಆರೋಪವಾಗಿದೆ

ಹಿನ್ನೆಲೆ: ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಪ್ರವಾಹ ಬಂದ ಸಂದರ್ಭದಲ್ಲಿ ಇಲ್ಲಿನ ಜನರಿಗೆ ನೆರವಾಗಲೆಂದು ಅಖಿಲ ಕರ್ನಾಟಕ ಪೆಟ್ರೋಲ ಪಂಪ ಅಶೋಶಿಯೇಶನ್ ಬೆಂಗಳೂರು, ಹಿಂದುಸ್ತಾನ ಪೆಟ್ರೋಲಿಯಂ ವಿತರಕರು ಸೇರಿ ಬಟ್ಟೆ, ಆಹಾರ ಸಾಮಗ್ರಿಗಳನ್ನು ಹೊತ್ತು ತಂದಿದ್ದರಂತೆ.

ಆದರೆ ಕೆಲಗ್ರಾಮಸ್ಥರ ಲಾಲಸೆಯಿಂದ ನಿಜವಾದ ಸಂತ್ರಸ್ತರ ಬದಲಾಗಿ ಇನ್ನಾರೋ ಪಡೆದುಕೊಂಡಿದ್ದು ಅವರಿಗೆ ನೋವುಂಟು ಮಾಡಿತ್ತಂತೆ. ಅದಕ್ಕಾಗಿ ಅಶೋಶಿಯೆಶನ್‌ನವರು ಸೇರಿ ಶಾಶ್ವತ ನಿರ್ಮಾಣ ದ ಕನಸು ಕಂಡರು ಅದಕ್ಕೆ ಅವರ ಕಣ್ಣಿಗೆ ಬಿದ್ದದ್ದು ಉತ್ತರ ಕರ್ನಾಟಕದಲ್ಲಿನ ಮಹಿಳಾ ಶೌಚಾಲಯದ ಸಮಸ್ಯೆ.
 
ಇದಕ್ಕಾಗಿ ಚೇರ್ಮನ್ ಭೂಷಣ ನಾರಂಗ  ಕಾರ್ಯದರ್ಶಿಗಳಾದ ನೀಲಕಂಠ ಮತ್ತು  ಅಶೋಕಕುಮಾರ. ಮಿತ್ರಮಂಡಳಿ ಸೇರಿ  ಲಕ್ಷಾಂತರ ಹಣ ಸೇರಿಸಿದರು. ಅದರಲ್ಲಿ ಸುಮಾರ 15ಲಕ್ಷ ರೂಗಳ ವೆಚ್ಚದಲ್ಲಿ  ಭಂಟನೂರನಲ್ಲಿ ನಿರ್ಮಿಸಲಾಗುತ್ತಿದೆ.

 ಕೇವಲ ಮಹಿಳೆಯರಿಗಾಗಿ ನಿರ್ಮಿಸಲಾಗುತ್ತಿರುವ ಶೌಚಾಲಯವನ್ನು  24ಜನ ಏಕಕಾಲಕ್ಕೆ ಬಳಸಬಹುದಾಗಿದೆ. ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು ಟೈಲ್ಸ್ , ಪ್ಲಂಬಿಂಗ್ ಮತ್ತು ವಿದ್ಯುತ್ತೀಕರಣ ಕಾರ್ಯ ಬಾಕಿಯಿದ್ದು ಇದೇ 25ರಂದು ಉದ್ಘಾಟನೆ ಮಾಡುವ ತಯಾರಿಯಲ್ಲಿದ್ದೇವೆ.

ಗ್ರಾಮದ ಸವಳು ಭಾವಿಯಿಂದ ಪೈಪ್‌ಲೈನ್ ಮಾಡಲಾಗಿದೆ.  ನಿರ್ಮಾಣ ಕಾರ್ಯ ಮುಗಿದ ಮೇಲೆ ಅದರ ಬಳಕೆ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಜನತೆಯೊಡನೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಆದ್ದರಿಂದ ಜನರ ಸಹಕಾರ ಬೇಕು ಎನ್ನುವುದು ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT